Site icon Ullalavani

ಐವನ್ ಡಿ ಸೋಜ ಒಬ್ಬ ಮೆಂಟಲ್: ಭರತ್ ಶೆಟ್ಟಿ

ಮಂಗಳೂರು: ಐವನ್ ಡಿ ಸೋಜ ಒಬ್ಬ ಮೆಂಟಲ್ ಗಿರಾಕಿ, ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ ಇವನ ಮನೆಯ ಮೇಲೆ ಕಲ್ಲೂ ತೂರಾಟವನ್ನು ಇವನ ಹುಡುಗರಿಂದಲೇ ಮಾಡಿಸಿರಬಹುದು ಎಂದು ಶಾಸಕ ಭರತ್ ಶೆಟ್ಟಿ ಕಿಡಿಕಾರಿದ್ದಾರೆ.

ಮಂಗಳೂರು ಬಿಜೆಪಿ ಪ್ರತಿಭಟನೆಯಲ್ಲಿ ಏಕವಚನದಲ್ಲಿ ಕಾಂಗ್ರೆಸ್ ಎಂ ಎಲ್ ಸಿ ಐವನ್ ಡಿ ಸೋಜ ವಿರುದ್ಧ ಶಾಸಕ ಭರತ್ ಶೆಟ್ಟಿ ಕಿಡಿಕಾಡಿದರು‌.

ಹೆಲ್ಮೆಟ್ ಹಾಕಿದ ಇಬ್ಬರು ಐವನ್ ಡಿ ಸೋಜ ಮನೆ ಮೇಲೆ ಕಲ್ಲೂ ತೂರಾಟ ನಡೆಸಿದ್ದಾರೆ .ಇನ್ನೂ ಹೆಲ್ಮೆಟ್ ಹಾಕಿದ ಇಬ್ಬರು ನಾನು ಹಾಗೂ ವೇದವ್ಯಾಸ್ ಕಾಮತ್ ಎಂದು ಕೇಸ್ ಹಾಕುತ್ತಾರೋ ಗೊತ್ತಿಲ್ಲ .ಸಾಕಷ್ಟು ಕೇಸ್ ಹಾಕಿದ್ದಾರೆ ಇನ್ನೂ ರೌಡಿ ಶೀಟರ್. ಆಗಬಹುದೇನೋ ಗೊತ್ತಿಲ್ಲ. ಐವಾನ್ ರಾಜ್ಯಪಾಲರ ಮನೆಗೆ ನುಗ್ಗಿ ಹೊಡಿಯುತ್ತೇವೆ,ಓಡಿಸುತ್ತೇವೆ ಎಂದು ಹೇಳಿದ್ದರು. ಅವರ ಮೇಲೆ ಕೇಸ್ ಹಾಕಲು ಪೊಲೀಸರು ಹಿಂದೆ ಮುಂದೆ ನೋಡುತ್ತಾರೆ .ಸರಕಾರ ಇದೆ ಎಂಬ ಕಾರಣಕ್ಕೆ ಪೋಲೀಸರು ನಿಮ್ಮ ಆತ್ಮ ಸಾಕ್ಷಿಯಾಗಿ ಸರಿಯಾಗಿ ಕೆಲಸ ಮಾಡಿ .ಐವಾನ್ ಡಿ ಸೊಜಾ ಬಾಯಿಗೆ ಬಂದಾಗೇ ಒದರುತ್ತಾನೆ .ಸ್ವಲ್ಪ್ ಮೆಂಟಲ್ ಆಗಿ ಬಾಯಿ ಬಂದಾಗೆ ಒದರುತ್ತಾನೆ . ನಮಗೂ ಕಲ್ಲು ಹೊಡೆಯೋದಕ್ಕೆ 5 ನಿಮಿಷ ಸಾಕು . ಟಯರ್ ಹಚ್ಹೋದಕ್ಕೆ 5 ನಿಮಿಷ ಸಾಕು ನಮ್ಮ ಯುವ ಮೋರ್ಚಾ ಕಾರ್ಯಕರ್ತರು ರೆಡಿ ಇದ್ದಾರೆ .ನಮಗೂ 10 ಟಯರ್ ಇಲ್ಲಿ ಸುಡಲು ಬರುತ್ತೆ
ಆ ರೀತಿಯ ಆರಾಜಾಕತೆಯ ಪರಿಸ್ಥಿತಿ ತರುವ ಅವಶ್ಯಕತೆ ನಮಗಿಲ್ಲ ಎಂದರು.

Exit mobile version