ಪಜೀರು: ಶ್ರೀ ಕೃಷ್ಣ ಭಜನಾ ಮಂದಿರ ಸುದರ್ಶನ ನಗರ ಪಜೀರು
ಇದರ ವತಿಯಿಂದ ಆ 26 ಹಾಗೂ ಹಾಗೂ ಆ.27ರಂದು ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವ ದ ಅಂಗವಾಗಿ ವಿವಿಧ ಸ್ಪರ್ಧೆಗಳು ಭಾನುವಾರದಂದು ದಿ.ಗಂಗಾಧರ ಶೆಟ್ಟಿ ಕೆಳಗಿನ ಮನೆ ವೇದಿಕೆ ಯಲ್ಲಿ ನಡೆಯಿತು.
ಗೌರವ ಸಲಹೆಗಾರ ಸೇಸಪ್ಪ ಪೂಜಾರಿ, ಉಮೇಶ್ ಪಿ , ಮಾಜಿ ಅಧ್ಯಕ್ಷ ವಸಂತ್ ಜಿ,ಮಾಜಿ ಕಾರ್ಯದರ್ಶಿ ಶಿವ ಪ್ರಸಾದ್ ಚೌಟ , ಉಪಾಧ್ಯಕ್ಷ ಜಯಾನಂದ ಶೆಟ್ಟಿ ,ಕೋಶಾಧಿಕಾರಿ ಯಶೋಧರ ಜೋಗಿ ಬೆಟ್ಟು , ಶ್ರೀ ತುಳಸಿ ಮಾತೃ ಮಂಡಳಿ ಯ ಅಧ್ಯಕ್ಷ ಶರ್ಮಿಳಾ ದಿಲೀಪ್ ಕುಮಾರ್, ಸರ್ವೋದಯ ಯುವಕ ಮಂಡಲ ದ ಅಧ್ಯಕ್ಷ ಮನೋಜ್ ಪಜೀರು, ವಿದ್ಯಾ ವಿ ಶೆಟ್ಟಿ, ಉಪಸ್ಥಿತರಿದ್ದರು .
ಭಜನಾ ಮಂದಿರದ ಅಧ್ಯಕ್ಷ ವಿಜೇತ್ ಪಜೀರ್ ಸ್ವಾಗತಿಸಿದರು.ಸಾಂಸ್ಕೃತಿಕ ಕಾರ್ಯದರ್ಶಿ ನಿರ್ಮಲ್ ಭಟ್ ವೈ ರವರು ಕಾರ್ಯಕ್ರಮ ನಿರೂಪಿಸಿದರು. ಸುಮತಿ ಪಜೀರು ಹಾಗು ಪ್ರಮೀಳಾ ಮಹಾಬಲ ಗಟ್ಟಿ ಯವರು ಸಹಕರಿಸಿದರು.
ಪ್ರಧಾನ ಕಾರ್ಯದರ್ಶಿ ಸುದರ್ಶನ ಪಜೀರು ವಂದಿಸಿದರು .
ಭಾನುವಾರದಂದು ಬೆಳಗ್ಗೆ 9.30 ರಿಂದ ಸಂಜೆ 5.30 ರ ತನಕ ನಡೆದ ವಿವಿಧ ಸ್ಪರ್ಧೆಗಳಲ್ಲಿ ಕೃಷ್ಣ ವೇಷ ಸ್ಪರ್ಧೆ , ಶ್ರೀ ಕೃಷ್ಣ ದೇವರ ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಹುಡಿ ಸ್ಪರ್ಧೆ , ಹೂ ಹಾರ ಸ್ಪರ್ಧೆ, ಮೆಹಂದಿ ಸ್ಪರ್ಧೆ ಗಳನ್ನು ಆಯೋಜಿಸಲಾಯಿತು .ಒಟ್ಟು 108 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು .
