ಕೊಣಾಜೆ: ಕೈರಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದನರಿಂಗಾನ ಗ್ರಾಮದ ರೈತ ಸದಸ್ಯರಿಗೆ ಸಂಘದತೌಡುಗೋಳಿ ಶಾಖಾ ವಠಾರ ದಲ್ಲಿ ಬೆಳೆ ಸಮೀಕ್ಷೆ ಹಾಗೂ ಸುಧಾರಿತ ಕೃಷಿಯ ಬಗ್ಗೆಮಾಹಿತಿ ಕಾರ್ಯಗಾರ ಮಂಗಳವಾರ ನಡೆಯಿತು.
ಬಂಟ್ವಾಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್ ಡಿಸೋಜ ಹಾಗೂಪಾಣೆಮಂಗಳೂರುಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಹನುಮಂತ ಕಾಳಗಿ ಮಾಹಿತಿ ನೀಡಿದರು.ಕೈರಂಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಚೌಟ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ನಿರ್ದೇಶಕರುಗಳಾದ ಡಿ. ಶಂಕರ್ ಭಟ್ ದೋಸೆಮನೆ, ಉಗ್ಗಪ್ಪ ಮಾಣಾಯಿ ಬೀರೂರು, ಪೂವಪ್ಪ ಕಡಂಬಾರ್, ಉದಯ ಶಂಕರ್ ಶೆಟ್ಟಿ ಬಲೆತ್ತೋಡು,ಕೈರಂಗಳ, ಬಾಳೆಪುಣಿ, ನರಿಂಗಾನ ಗ್ರಾಮದ ರೈತ ಮುಖಂಡರುಗಳಾದ ಚಂದ್ರಹಾಸ್ ಶೆಟ್ಟಿ ಮೋರ್ಲ, ನಾರಾಯಣ ಶೆಟ್ಟಿ ಬಲೆತ್ತೋಡು, ಐತಪ್ಪ ಶೆಟ್ಟಿ ಆಳ್ವರಬೆಟ್ಟು, ಪ್ರಭಾಕರ್ ಶೆಟ್ಟಿ ಮರಿಕ್ಕಳ, ರಾಮಣ್ಣ ಶೆಟ್ಟಿ ಆಳ್ವರಬೆಟ್ಟು, ಶ್ರೀನಾಥ್ ರೈ ಗರೋಡಿ, ಕೆ. ಜೆ. ಗಟ್ಟಿ, ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದಜೋಸೆಫ್ ಕುಟ್ಟಿನ್ಹ ಬೋಳ, ಅಬ್ದುಲ್ಲ ಕೊಡಂಚಿಲ್, ಸದಸ್ಯಶೇಖಬ್ಬ ನಿಡ್ಮಾಡ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಭಾವತಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೇಶಕ ಮುನೀರ್ ಮಾಸ್ಟರ್ ಕೈರಂಗಳ ವಂದಿಸಿದರು.
