Site icon Ullalavani

ಚೂರಿಯಿಂದ ಇರಿದು ವಿದ್ಯಾರ್ಥಿನಿ‌ ಮೇಲೆ ಹಲ್ಲೆ

ಪುತ್ತೂರು: ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿನಿ ಮೇಲೆ ಅಪ್ರಾಪ್ತ ಬಾಲಕನಿಂದ ಚೂರಿ ಇರಿದ ಘಟನೆಯೊಂದು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬೆಟ್ಟು  ಕಾಲೇಜಿನಲ್ಲಿ ಮಂಗಳವಾರ ನಡೆದಿದೆ.

ಮುಸ್ಲಿಂ ವಿದ್ಯಾರ್ಥಿನಿಗೆ ಹಿಂದೂ ವಿದ್ಯಾರ್ಥಿಯಿಂದ ಇರಿತದ ಆರೋಪ ಕೇಳಿಬಂದಿದೆ.

ಚೂರಿಯಿಂದ ಕೈಗೆ ಇರಿದ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಶಾಲಾ ಆಡಳಿತದ ವಿರುಧ್ಧ ಆರೋಪ ಕೇಳಿಬಂದಿದ್ದುಆಸ್ಪತ್ರೆಯಲ್ಲಿ ಹೆಸರು ಬದಲಾಯಿಸಿ ಹೇಳುವಂತೆ ಶಿಕ್ಷಕಿ ಒತ್ತಡ ಹೇರಿದ್ದು ಕೈಗೆ ಗಾಜು ತಾಗಿದ್ದಕ್ಕೆ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಕಾಲೇಜು ಪ್ರಾಂಶುಪಾಲರಿಂದ ಒತ್ತಡದ ಬಗ್ಗೆ ವಿದ್ಯಾರ್ಥಿನಿ ಆರೋಪಿಸಿದ್ದಾರೆ‌

ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ‌  ವಿದ್ಯಾರ್ಥಿಗಳು ಸೇರಿದ್ದು ಸದ್ಯ ವಿದ್ಯಾರ್ಥಿನಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಸ್ಪತ್ರೆಯ ಮುಂದೆ ಜನ ಸೇರಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.‌ಸದ್ಯ ಸೇರಿದ ಜನರನ್ನು ಆಸ್ಪತ್ರೆಯಿಂದ ಹೊರಗೆ ಪೊಲೀಸರು ಕಳುಹಿಸಿದ್ದಾರೆ.

ಪುತ್ತೂರು ನಗರ ಠಾಣೆ ಪೊಲೀಸರಿಂದ ತನಿಖೆ ನಡೆಸಲಾಗಿದೆ

Exit mobile version