Site icon Ullalavani

ಪ್ರತಿಭಾ ಕಾರಂಜಿಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿರಿ:ಈಶ್ವರ್ ಹೆಚ್. ಆರ್

ಪಿಲಾರು: ಪ್ರತಿಭಾ ಕಾರಂಜಿಯ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ಭಾಗವಹಿಸುವಂತೆ ಮಾಡಿ ಪ್ರೋತ್ಸಾಹಿಸಬೇಕು. ಈ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಹೆಚ್. ಆರ್ ಹೇಳಿದರು.

ದ.ಕ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಸಮೂಹ ಸಂಪನ್ಮೂಲ ಕೇಂದ್ರ ಪಿಲಾರು ಮತ್ತು ಪಿಲಾರು ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲಾ ಇವರ ಸಹಯೋಗದೊಂದಿಗೆ ಜರಗಿದ ಪಿಲಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2024-25 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

10 ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಸರಕಾರ ಪ್ರತಿಭಾ ಕಾರಂಜಿಗಳನ್ನು ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಮಾತ್ರ ಸಾಧನೆಯಲ್ಲ, ಇತರೆ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಬೇಕಿದೆ. ಮಕ್ಕಳಲ್ಲಿನ ಸೃಜನಾತ್ಮಕತೆ, ಅವರದೆ ಆದ ಕೌಶಲ್ಯ ಅಭಿವೃದ್ಧಿಪಡಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಪೂರಕ ಎಂದ ಅವರು ಶಿಕ್ಷಣ ಇಲಾಖೆ ಪ್ರತಿಭೆಯಿರುವ ವಿದ್ಯಾರ್ಥಿಗಳ ಬೆನ್ನುತಟ್ಟಿ ಪ್ರೋತ್ಸಾಹಿಸುವ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತ ಬಂದಿದೆ.
. ಗ್ರಾಮೀಣ ಭಾಗದ ಮಕ್ಕಳಿಗೆ ಬಹಳಷ್ಟು ಉಪಯುಕ್ತವಾದ ಕಾರ್ಯಕ್ರಮ‌ ಎಂದರು.

ಕಾರ್ಯಕ್ರಮವನ್ನು ಸೋಮೇಶ್ವರ ಪುರಸಭೆ ಕೌನ್ಸಿಲರ್ ದೀಪಕ್ ಪಿಲಾರ್ ಚಾಲನೆ ನೀಡಿದರು. ಕೌನ್ಸಿಲರ್ ಪರ್ವಿನ್ ಸಾಜಿದಾ,ಸ್ಥಳದಾನಿ ಶಾಂತಾರಾಮ ಸರಳಾಯ, ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಸ್, ನೋಡೆಲ್ ಅಧಿಕಾರಿ ಇ.ಸಿ.ಓ ಅನ್ನಪೂರ್ಣ, ಬಿಆರ್ ಪಿ ಸವಿತಾ, ಪಿಲಾರು ಕ್ಲಸ್ಟರ್ ಸಿಆರ್ ಪಿ ಗೀತಾ ಶೆಟ್ಟಿ, ಪಿಲಾರು ಶಾಲಾ ಮುಖ್ಯೋಪಾಧ್ಯಾಯಿನಿ ಗ್ರೆಟ್ಟಾ ಮೇಬಲ್ ಡಿಸೋಜ, ಉಚ್ಚಿಲಗುಡ್ಡೆ ಶಾಲೆಯ ಮುಖ್ಯಾಶಿಕ್ಷಕ ಹರೀಶ್, ಬಿಆರ್ ಪಿ ಸುಷ್ಮಾ ಆರ್ ಕಿಣಿ, ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಮೋಹನ್ ಶಿರ್ಲಾಲು, ಎಸ್ ಡಿ ಎಂಸಿ ಅಧ್ಯಕ್ಷ ಮೊಹಮ್ಮದ್ ಹನೀಫ್,‌ ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ್, ವಸಂತ, ಶಾಲಾ ಶಿಕ್ಷಕರಾದ ಪ್ರೇಮಲತಾ, ಗ್ರೇಸಿ ಡಿಸೋಜ, ರಮ್ಯಾ ಉಪಸ್ಥಿತರಿದ್ದರು.

Exit mobile version