ಕೊಲ್ಯ: ನಾರಾಯಣ ಗುರುವರ್ಯರ ತತ್ವ ನಿಷ್ಠೆಯಿಂದ ಸಮಾಜ ಮುಂದುವರಿದು,ಯುವಸಮುದಾಯ ಅಭಿವೃದ್ಧಿ ಯ ಪಥದಲ್ಲಿದೆ. ಆದರೆ ಸದ್ಯ ಸಮಾಜದ ಸಂಘಟನೆಗಳು ಒಡೆದುಹೋಗಿವೆ, ಕೆಲವೇ ಗ್ರಾಮಗಳಿಗೆ ಸೀಮಿತವಾಗಿರುವುದು ಸರಿಯಲ್ಲ ಎಂದು ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಲೀಲಾಕ್ಷ ಕರ್ಕೇರ ಹೇಳಿದರು.
ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯ ಸೋಮೇಶ್ವರ ಇದರ ವತಿಯಿಂದ ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಂಗಣದಲ್ಲಿ ಜರಗಿದ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 170 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು.
ಜನ್ಮ ದಿನಾಚರಣೆಯಲ್ಲಿ ಇಡೀ ಗ್ರಾಮವೇ ಪಾಲ್ಗೊಳ್ಳಬೇಕಿದೆ. ವರ್ಷದ ಒಂದು ದಿನವನ್ನಾದರೂ ಯುವಸಮುದಾಯ ಗುರುವರ್ಯರುಗೆ ಮೀಸಲಿಡಬೇಕಿದೆ. ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಪಾಲಿಸುವ ಅನಿವಾರ್ಯತೆ ಇದೆ ಎಂದರು.
ನಾರಾಯಣ ಗುರು ಅಧ್ಯಯನ ಪೀಠದ ಮಂಗಳೂರು ವಿ.ವಿ.ಯ ಸ್ಥಾಪಕ ನಿರ್ದೇಶಕ ಮುದ್ದು ಮೂಡುಬೆಳ್ಳೆ, ಮಾತನಾಡಿ ಜ್ಞಾನ ಸಂಪಾದನೆ ಪದವಿಯಿಂದ ಬರುವಂತದ್ದಲ್ಲ,ಬದುಕಿನ ಅನುಭವಗಳಿಂದ ಬರುತ್ತದೆ. ಮಾನವೀಯತೆ ಸಹೋದರತ್ವ ಮೈಗೂಡಿಸಿಕೊಂಡು ಶಾಂತಿಯುತವಾಗಿ ಬಾಳಬೇಕಿದೆ. ಆತ್ಮಸ್ಥೈರ್ಯದಿಂದ ಬದುಕಬೇಕಾದರೆ ಇನ್ನೊಬ್ಬರಿಗೆ ಅನ್ಯಾಯವಾಗದಂತೆ ಬಾಳುವುದೇ ಸೂಕ್ತ. ಅಭಿವೃದ್ಧಿ ಶೀಲ ಚಿಂತನೆಯಿಂದ ಬಾಳಿದಲ್ಲಿ ಗುರುವರ್ಯರ ಆದರ್ಶಗಳನ್ನು ಪಾಲಿಸಿದಂತೆ ಆಗುವುದು ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯಾ , ರಾಮ ಭಜನಾ ಮಂದಿರದ ಅಧ್ಯಕ್ಷ ಅಶೋಕ್ ಗಟ್ಟಿ, ಜೀವರಕ್ಷಕ ದಳ ಸೋಮೇಶ್ವರದ ಅಶೋಕ್ ಸೋಮೇಶ್ವರ ಇವರನ್ನು ಸನ್ಮಾನಿಸಲಾಯಿತು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಬಿಲ್ಲವಾಸ್ ದುಬೈ ಇದರ ಉಪಾಧ್ಯಕ್ಷ ಸತೀಶ್ ಉಳ್ಳಾಲ್, ಉದ್ಯಮಿಗಳಾದ ದಿನೇಶ್ ಎಂ.ಪಿ,
ಎಂ.ಡಿ.ಪೂಜಾರಿ, ಧರ್ಮರಾಜ್ ಅಮ್ಮುಂಜೆ, ಸ್ಟೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಸಂಧ್ಯಾ ರುಕ್ಮಯ್ಯ ಪೂಜಾರಿ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ಇಲ್ಲಿನ ಅಧ್ಯಕ್ಷ ರವೀಂದ್ರ ಬಂಗೇರ, ಟ್ರಸ್ಟ್ ಗೌರವಾಧ್ಯಕ್ಷ ಗೋಪಾಲಕೃಷ್ಣ ಎಸ್.ಪೂಜಾರಿ, ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ರೇವತಿ ವಿಶ್ವನಾಥ್ ಕುಂಪಲ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಬಿಲ್ಲವ ಸಂಘದ ಅಧ್ಯಕ್ಷ
ಹರೀಶ್ ಮುಂಡೋಳಿ ಸ್ವಾಗತಿಸಿದರು
ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕುಸುಮಾಕರ್ ಕುಂಪಲ ನಿರೂಪಿಸಿದರು.
ಈಶ್ವರ್ ಸುವರ್ಣ ವಂದಿಸಿದರು.
