ಮಂಗಳೂರು: ಸಾಂವಿಧಾನಿಕ ಹುದ್ದೆಯಲ್ಲಿರೋ ರಾಜ್ಯಪಾಲರು ಬಿಜೆಪಿ ಅಧ್ಯಕ್ಷರಂತೆ ಕೆಲಸ ಮಾಡುತ್ತಿದ್ದು ಈ ಮೂಲಕ ರಾಜ ಭವನವನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಂಗಳವಾರ ಮಾತಾಡಿದ ಅವರು
ಬಿಜೆಪಿಯವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದು. ರಾಜ್ಯಪಾಲರು ಸಂವಿಧಾನದ ಚೌಕಟ್ಟು ಬಿಟ್ಟು ಬಿಜೆಪಿ ನಿರ್ದೇಶನದಂತೆ ಕೆಲಸ ಮಾಡಲು ಆಗುವುದಿಲ್ಲ. ಈ ಹಿಂದೆ ಬಿಜೆಪಿ ಆಪರೇಷನ್ ಕಮಲ ಮೂಲಕ ಸರ್ಕಾರ ಕೆಡವುತ್ತಿತ್ತು
ಆದರೆ ಈಗ ಬೇರೆ ವಾಮಾಮಾರ್ಗದ ಮೂಲಕ ಸರ್ಕಾರ ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಸದ್ಯ ಹೈಕೋರ್ಟ್ ರಿಲೀಫ್ ಕೊಟ್ಟಿದೆ, ನ್ಯಾಯಾಂಗ ಹೋರಾಟ ಆಗುತ್ತಿದೆ ಎಂದರು.
ಯಡಿಯೂರಪ್ಪ ಪ್ರಕರಣದಲ್ಲಿ 20 ಕೋಟಿ ಚೆಕ್ ಮೂಲಕ ಲಂಚ ಪಡೆದಿರೋದು. ಗಡೀಪಾರಾಗಿದ್ದ ಅಮಿತ್ ಶಾ ಕೂಡ ಮಂತ್ರಿಯಾಗಿಲ್ವಾ? ಎಂದು ಪ್ರಶ್ನಿಸಿದ ಅವರು ಬಿಜೆಪಿ ನಾಯಕರ ಮೇಲೆ ಗಂಭೀರ ಆರೋಪಗಳಿತ್ತು, ಈ ಆರೋಪ ಕಪೋಲಕಲ್ಪಿತ. ರಾಜ್ಯಪಾಲರು ಈ ಹಿಂದೆ ದಲಿತ ರಾಜಕಾರಣಿ ಆಗಿದ್ದವರು, ಗೆಹ್ಲೋಟ್ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಬಿಜೆಪಿಯವರಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ಸಂವಿಧಾನ ಬದಲಾವಣೆ ಅಂತ ಯಾಕೆ ಮಾತನಾಡುತ್ತಾ ಇದ್ದರು.ನಾವು ಪ್ರತಿಭಟನೆ ಮಾಡಿದ್ದೇವೆ, ಯಾವುದೇ ಗಲಾಟೆ ಮಾಡಿಲ್ಲ. ಐವನ್ ಡಿಸೋಜಾ ಏನು ಹೇಳಿದ್ದಾರೆ ಅಂತ ನನಗೆ ಸರಿಯಾಗಿ ಗೊತ್ತಿಲ್ಲ. ಬಾಂಗ್ಲಾದೇಶ ಮತ್ತು ಭಾರತವನ್ನು ನಾವು ಒಂದು ಮಾಡೋದು ಬೇಡ. ಸಾಂವಿಧಾನಿಕ ಹುದ್ದೆಯಲ್ಲಿರೋ ವಿರುದ್ದ ನಾವು ಹೋರಾಟ ಮಾಡೋದು ಸರಿಯಲ್ಲ. ಅದರೆ ಅವರು ತೆಗೆದುಕೊಂಡ ನಿರ್ಧಾರದ ವಿರುದ್ದ ಕಾನೂನು ಹೋರಾಟ ಮಾಡ್ತಾ ಇದ್ದೇವೆ ಎಂದರು
