Site icon Ullalavani

ಭತ್ತದ ಗದ್ದೆಗಳು ಮಾಯಾವಾಗಿ ವಾಣಿಜ್ಯ ಬೆಳೆಗಳ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿದೆ: ಮೋಹನ್ ಕುಮಾರ್

ಕೆ.ಸಿ.ರೋಡ್ : ಭತ್ತವನ್ನು ಬೆಳೆದು ಕೃಷಿ ಮಾಡುತ್ತಿದ್ದ ದ.ಕ ಜಿಲ್ಲೆಯಲ್ಲಿ ಇಂದು ಭತ್ತದ ಗದ್ದೆಗಳೇ ಮರೆಯಾಗುತ್ತಿದ್ದು  ವಾಣಿಜ್ಯ ಬೆಳೆಗಳ ತೋಟಗಳಾಗಿ ಪರಿವರ್ತನೆಗೊಂಡಿದೆ, ಕೆಲವೊಂದು ಗದ್ದೆಗಳು ಅಡಿಲು ಬಿದ್ದಿದೆ,  ಇದರಿಂದಾಗಿ ಜಿಲ್ಲೆಯ ಹೊಸತಲೆಮಾರಿಗೆ ಭತ್ತದ ಕೃಷಿಯ ಬಗ್ಗೆ ಅರಿವೆ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ ಭತ್ತದ ಕೃಷಿಯಲ್ಲಿ ತೊಡಗಿಕೊಳ್ಳುವವರ  ಸಂಖ್ಯೆ ಕಡಿಮೆಯಾಗುತ್ತಿದ್ದು ಭತ್ತದ ಕೃಷಿಯ ಬಗ್ಗೆ ಅನಿವಾರ್ಯತೆಯನ್ನು ತೋರಿಸುವ ಪ್ರಯತ್ನ ಮಾಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಂಗಳೂರು ಇದರ  ಕೃಷಿ ಅಧಿಕಾರಿ ಮೋಹನ್ ಕುಮಾರ್ ತಿಳಿಸಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಂಗಳೂರು ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಭಾರತ್ ಗ್ಯಾಸ್ ಸಂಯುಕ್ತ ಆಶ್ರಯದಲ್ಲಿ ವೈಜ್ಞಾನಿಕತೆಯಲ್ಲಿ ಭತ್ತದ ಬೇಸಾಯ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಎಂಬ ವಿಷಯದ ಕುರಿತು  ಕೆ.ಸಿ. ರೋಡು  ಸೋವೂರು ಗದ್ದೆಯಲ್ಲಿ ಸೋಮವಾರ ನಡೆಯಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಹಿರಿಯ ಕೃಷಿಕರಾದ  ಸೋವೂರು ಚಂದು ಗಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.

 ದ.ಕ ಜಿಲ್ಲೆ ಕಂಕನಾಡಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ ರಮೇಶ್ ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಹರೀಶ್ ಶೆಣೈ ರೈತ ಕ್ಷೇತ್ರ ಪಾಕ ಶಾಲೆ ಮತ್ತು ಮಣ್ಣು ಪರೀಕ್ಷೆ , ಸಸ್ಯ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿಪರ ಕೃಷಿಕ ರಮೇಶ್ ಗಟ್ಟಿ ಸೋವೂರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.

ಭಾರತ್ ಗ್ಯಾಸ್ ನ ಸಂಪನ್ಮೂಲ ವ್ಯಕ್ತಿ ಚರಣ್ ರಾಜ್  ಅಡುಗೆ ಅನಿಲ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಅನುಪಮ ಗ್ಯಾಸ್ ವಿತರಕ ಉಮೇಶ್ ಗಟ್ಟಿ, ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪದ್ಯಾಯಿನಿ  ರಝಿಯ ಎ.ಎಸ್, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಸತೀಶ್ ದೀಪಂ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಂಗಳೂರು ಸೋಮೇಶ್ವರ ವಲಯ ಮೇಲ್ವಿಚಾರಕಿ ಶಶಿಕಲಾ ಬಂಗೇರ, ಸೇವಾ ಪ್ರತಿನಿಧಿ ಶ್ರೀಮತಿ ಭವ್ಯ, ವಿಜಯ, ರುಕ್ಮಿಣಿ, ಸುಶೀಲ, ಶೌರ್ಯ ವಿಫತ್ತು ನಿರ್ವಹಣಾ ಘಟಕದ ಸದಸ್ಯ ದಯಾನಂದ್ ಗಟ್ಟಿ, ಶ್ರೀನಿವಾಸ್ ಗಟ್ಡಿ,  ಹಾಗೂ ಪ್ರಕಾಶ್ ಕಿನ್ಯ, ಪ್ರಗತಿಪರ ಕೃಷಿಕ ಮಾದವ ಸಾಲಿಯಾನ್, ಶಾಲಾ ವಿದ್ಯಾರ್ಥಿಗಳು, ಸೋವೂರಿನ ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.

ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು, ಭವ್ಯ ಸ್ವಾಗತಿಸಿದರು, ವಿಜಯ ವಂದಿಸಿದರು,

Exit mobile version