ಅಂಬ್ಲಮೊಗರು :ಬಂಟರ ಸಂಘ ಅಂಬ್ಲಮೊಗರು ಗ್ರಾಮ ಸಮಿತಿ ವತಿಯಿಂದ ಬಂಟೆರೆ ಕೂಡುಕಟ್ಟ್ ಕಾರ್ಯಕ್ರಮ ಅಂಬ್ಲಮೊಗರು ಬಸ್ತಿಕಟ್ಟೆ ಆಶಿಯಾನ ಸಭಾ ಭವನದಲ್ಲಿ ಭಾನುವಾರ ನಡೆಯಿತು.
ಉಳ್ಳಾಲ ವಲಯ ಬಂಟರ ಸಂಘದ ಅಧ್ಯಕ್ಷ ಸುರೇಶ್ ರೈ ಕಕ್ಕೆಮಜಲು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬಂಟರು ಹಿಂದಿನಿಂದಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇಂದು ನಮ್ಮ ಸಮಾಜದ ಹಿರಿಯ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದ್ದು ಉತ್ತಮ ಕಾರ್ಯವಾಗಿದೆ, ಬಂಟರ ಸಂಘದಲ್ಲಿ ಇನ್ನೂ ಹಲವು ಕಾರ್ಯಕ್ರಮ ಆಗಲಿದ್ದು, ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.
ಉಳ್ಳಾಲ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಮಾತನಾಡಿ ನಾವು ಕಣ್ಣಿಗೆ ಮುಟ್ಟುವಂತಹ ಕಾರ್ಯಕ್ರಮ ಮಾಡಿದರೆ ಇನ್ನೊಂದು ಗ್ರಾಮ ಸಮಿತಿಯವರು ನಮ್ಮ ಕಾರ್ಯಕ್ರಮವನ್ನು ಮಾದರಿಯಾಗಿ ತೆಗೆದು ಕೊಳ್ಳುತ್ತಾರೆ, ಒಂದು ವ್ಯವಸ್ಥೆಯನ್ನು ಸರಿಯಾಗಿ ಕೊಂಡು ಹೊಗಲು ನಿಶ್ವಾರ್ಥ ಸೇವೆ ಅಗತ್ಯ, ಪ್ರತೀ ವರ್ಷವೂ ಇಂತಹ ಕಾರ್ಯಕ್ರಮ ನೀಡಲು ದೇವರು ಶಕ್ತಿ ನೀಡಲಿ ಎಂದು ಹೇಳಿದರು.
ಬಂಟರ ಸಂಘ ಅಂಬ್ಲಮೊಗರು ಗ್ರಾಮ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಎಲ್ಯಾರ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ಹರೇಕಳ ಸಂಪಿಗೆದಡಿ ಶ್ರೀ ಅರ್ಧ ನಾರೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ದಾಸ್ ರೈ ದೆಬ್ಬೇಲಿಗುತ್ತು, ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರು ಗುತ್ತು, ಉಳ್ಳಾಲ ವಲಯ ಬಂಟರ ಸಂಘದ ಮಾಜಿ ಅಧ್ಯಕ್ಷ ಜಯರಾಮ ಸಾಂತ ಬೋಳ್ಯಾರು, ದೇರಳೆಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಸೌಮ್ಯ ಆರ್ ಶೆಟ್ಟಿ, ಅಂಬ್ಲಮೊಗರು ಗ್ರಾಮ ಪಙಚಾಯತ್ ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ ಪಡ್ಯಾರಮನೆ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಕೃಷಿಕರಾದ ಕೆ.ಶಾಂತರಾಮ ರೈ ಎಲಿಯಾರು, ಸುದರ್ಶನ್ ಶೆಟ್ಟಿ ಕುರ್ನಾಡುಗುತ್ತು, ನರಸಿಂಹ ಪಕ್ಕಳ ಕೋಟ್ರಗುತ್ತು, ವಿಠಲ್ ಶೆಟ್ಟಿ ಬಸ್ತಿ, ಹಿರಿಯ ಯಕ್ಷಗಾನ ಅರ್ಥದಾರಿ ಪ್ರಭಾಕರ ಶೆಟ್ಟಿ ಕುತ್ತಾರುಗುತ್ತು, ರಾಷ್ಟ್ರೀಯ ಕ್ರೀಡಾಪಟು ರಿಕ್ತ ಕಿರಣ್ ಎಲಿಯಾರು ಪದವು ಇವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ಸಮಿತಿವತಿಯಿಂದ ಉಳ್ಳಾಲ ವಲಯ ಸಮಿತಿಗೆ ದೇಣಿಗೆಯ ಮೊತ್ತವನ್ನು ಹಸ್ತಾಂತರಿಸಿದರು.
ಕುಮಾರಿ ವೈಷ್ಣವಿ ಪ್ರಾರ್ಥನೆ ಮಾಡಿದರು, ಉಳ್ಳಾಲ ವಲಯ ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಯಶೀಲ ಶೆಟ್ಟಿ ಸ್ವಾಗತಿಸಿದರು, ಮಾಜಿ ಕಾರ್ಯದರ್ಶಿ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಅರುಂಧತಿ ಶೆಟ್ಟಿ, ಸುಜಯ ಶೆಟ್ಟಿ, ಸಂದೀಪ್ ಶೆಟ್ಟಿ, ಮಾಲತಿ ಶೆಟ್ಟಿ, ಮಹೇಶ್ ಶೆಟ್ಟಿ, ವೈಷ್ಣವಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು, ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಭೋದ್ ಶೆಟ್ಟಿ ವಂದಿಸಿದರು.
