Site icon Ullalavani

ಬದುಕಿನ ಚಿತ್ರಣವನ್ನು ಅರಿತರೆ ಜೀವನ ಸಾರ್ಥಕವಾಗುತ್ತದೆ: ಸದಾಶಿವ ಮೋಂತಿಮಾರ್

ತೊಕ್ಕೊಟ್ಟು: ಕಲಿಯುಗದ ಬದುಕಿನ ಚಿತ್ರಣವನ್ನು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಮೊದಲೇ ವಿವರಿಸಿದ್ದು ಅದನ್ನು ಅರಿತರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಧಾರ್ಮಿಕ ಸಾಮಾಜಿಕ ಮುಂದಾಳು ರಾಮಚಂದ್ರಪುರ ಮಠ ಹಾಗೂ ಹಾಗೂ ನಿತ್ಯಾನಂದ ಯೋಗಾಶ್ರಮದ ಮಾಧ್ಯಮ ಹಾಗೂ ಮುದ್ರಣ ವಿಭಾಗದ ಸದಾಶಿವ ಮೋಂತಿಮಾರ್ ಹೇಳಿದರು.
ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೋಟು ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದಲ್ಲಿ ಭಾನುವಾರ ಆಯೋಜಿಸಲಾದ 27ನೇ ವರ್ಷದ ಸಾಂಸ್ಕøತಿಕ ಸ್ಪರ್ಧೆಗಳಾದ ಭಾಷಣ ಸ್ಪರ್ಧೆ, ಭಕ್ತಿಗೀತೆ, ಭಗವದ್ಗೀತಾ ಕಂಠಪಾಠ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪುಟಾಣಿಗಳಾದ ಎಂ.ಆಯುಷ್ ಪೈ, ನವನೀತ್ ಶ್ಯಾಮ್, ಶಾನ್ವಿ ಎಂ, ಕೆ. ಮನಸ್ವಿ, ನಿಶ್ಮ್ಮಿತಾ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಚೀರುಂಭ ಭಗವತೀಯ ಆಚಾರಪಟ್ಟವರು ಮಂಜಪ್ಪ ಕಾರ್ಣವರು, ಜಾಹಿರ ಬೆಳ್ಚಾಡ, ಕಂಡಪ್ಪ ಕಾರ್ಣವ, ಭಾಸ್ಕರ್ ಉಳ್ಳಾಲ್, ಸಮಿತಿ ಚಂದ್ರಕಾಂತ್, ಕಾರ್ಯಕ್ರಮ ಸಂಯೋಜಕ ಅಶೋಕ್ ಗುರಿಕಾರ, ಸಮಿತಿಯ ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಉಪಾಧ್ಯಕ್ಷ ಸತೀಶ್ ಸೋಮೇಶ್ವರ, ಕೋಶಾ„ಕಾರಿ ದರ್ಶನ್‍ರಾವ್ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ವಿದ್ಯಾಲತಾ ಗಟ್ಟಿ, ಸಂತ ಸೆಬಾಸ್ಟಿಯನ್ ಆಂಗ್ಲ ಮಾದ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಕುಮಾರ್, ಯುವ ಸಾಹಿತಿ ಅಶ್ವ್ವಿನಿ ತೆಕ್ಕುಂಜೆ, ಸಂಗೀತ ನಿರ್ದೇಶಕ ರಾಜೇಶ್ ಮುಡಿಪು, ಸರಕಾರಿ ಪ್ರಥಮ ದರ್ಜೆ ಕಾಲೇಜು ಬಲ್ಮಠದ ಸಹಾಯಕ ಪ್ರಾಧ್ಯಾಪಕಿ ಡಾ| ಶೈಲಾ ಕೆ.ಎನ್. ಗುಣವತಿ ಸೋಮೇಶ್ವರ, ನಿವೃತ್ತ ಶಿಕ್ಷಕರಾದ ಲೀಲಾವತಿ ಕಲ್ಲೂರಾಯ, ಸರೋಜ ಭಟ್ ಬಾಗವಹಿಸಿದ್ದರು.ಬಬಿತಾ ಲತೀಶ್ ನಿರೂಪಿಸಿ ವಂದಿಸಿದರು.

Exit mobile version