Site icon Ullalavani

ಮಾಜಿ ಸಿಎಂ ಡಿ.ವಿ ಸದಾನಂದ ಗೌಡರ ಪತ್ನಿಯಿಂದ ತೊಕ್ಕೊಟ್ಟಿನಲ್ಲಿ ಕೊರಗಜ್ಜನಿಗೆ ಹರಕೆಯ ಅಗೆಲು ಸೇವೆ.

ಉಳ್ಳಾಲ: ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರ ಪತ್ನಿ ಶ್ರೀಮತಿ ದಾಟಿ ಸದಾನಂದ ಗೌಡ ಅವರು ತೊಕ್ಕೊಟ್ಟು ರೈಲ್ವೇ ಓವರ್ ಬ್ರಿಡ್ಜ್ ಬಳಿಯ ಸಾರ್ವಜನಿಕ ಕೊರಗಜ್ಜನ ಕ್ಷೇತ್ರಕ್ಕೆ ಶನಿವಾರ ಭೇಟಿ ನೀಡಿ ಹರಕೆಯ ಅಗೆಲು ಸೇವೆಯನ್ನು ಸಲ್ಲಿಸಿದರು.

ಬೇಡಿದ ಇಷ್ಟಾರ್ಥ ನೆರವೇರಿದಕ್ಕಾಗಿ ದಾಟಿ ಸದಾನಂದ ಅವರು ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿ ಹರಕೆಯ ಸಾಮೂಹಿಕ ಅಗೆಲು ಸೇವೆ ಸಲ್ಲಿಸಿದ್ದಾರೆ.
ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಶ್ರೀಮತಿ ದಾಟಿ ಸದಾನಂದ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಸದಾನಂದ ಗೌಡ ಕುಟುಂಬದ ಅಂಗರಕ್ಷಕರಾದ ಚೇತನ್ ,ಪತ್ನಿ ಲತಾ ಜತೆಗಿದ್ದರು.ತೊಕ್ಕೊಟ್ಟು ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕಾಪಿಕಾಡು,ಉಪಾಧ್ಯಕ್ಷರಾದ ನಾರಾಯಣ ರೈ, ಗೌರವ ಸಲಹೆಗಾರರಾದ ರಾಜು ಗುರಿಕಾರ,ಪ್ರದಾನ ಸಂಚಾಲಕರಾದ ಮುರಳೀ ಸಾಲ್ಯಾನ್ ,ಸದಸ್ಯರಾದ ಪುರಂದರ ಟೈಲರ್,ಪ್ರದಾನ ಅರ್ಚಕರಾದ ಪದ್ಮನಾಭ ತೊಕ್ಕೊಟ್ಟು, ಕುಂಪಲ ಕೇಸರಿ ಮಿತ್ರ ವೃಂದದ ಟ್ರಸ್ಟಿ ಶೇಖರ್ ಕುಂಪಲ,ಉಳ್ಳಾಲ ಪುರಸಭಾ ಮಾಜಿ ಸದಸ್ಯ ಭಗವಾನ್ ದಾಸ್ ತೊಕ್ಕೊಟ್ಟು ,ಪ್ರಮುಖರಾದ ಹರೀಶ್ ಮೊಗವೀರ ಪಟ್ಣ ಮೊದಲಾದವರು ಉಪಸ್ಥಿತರಿದ್ದರು.

Exit mobile version