ತೊಕ್ಕೊಟ್ಟು: ಮುದ್ದು ಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟು ಇದರ 27ನೇ ವರ್ಷದ ಮುದ್ದು ಕೃಷ್ಣ 2024 ಕಾರ್ಯಕ್ರಮವು ಆ. 18ರಂದು ಹಾಗೂ ಆ. 25ರಂದು ನಡೆಯಲಿದ್ದು ಇದರ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ ಎಂದು ಮುದ್ದು ಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟು ಇದರ ಅಧ್ಯಕ್ಷ ಚಂದ್ರಕಾಂತ್ ತಿಳಿಸಿದ್ಧಾರೆ
ಅವರು ತೊಕ್ಕೊಟ್ಟು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಆಗಸ್ಟ್ 18 ರಂದು ಶ್ರೀ ಚೀರುಂಭ ಭಗವತೀ ಕ್ಷೇತ್ರ ಉಳ್ಳಾಲದಲ್ಲಿ ಬೆಳಗ್ಗೆ 8 ಗಂಟೆಗೆ ವಿವಿಧ ರೀತಿಯ ಸ್ಪರ್ಧೆಗಳು ನಡೆಯಲಿದೆ 4-5ನೇ ತರಗತಿ ವಿಧ್ಯಾರ್ಥಿಗಳಿಗೆ ಗೋಕುಲದಲ್ಲಿ ಶ್ರೀ ಕೃಷ್ಣ ಎಂಬ ವಿಷಯದ ಬಗ್ಗೆ ಭಾಷಣ, ಶ್ರೀ ಕೃಷ್ಣನ ಕುರಿತಾಗಿ ಭಕ್ತಿಗೀತೆ, 12 ನೇ ಅಧ್ಯಾಯ ಭಕ್ತಿಯೋಗ (5 ಶ್ಲೋಕ) ಭಗವದ್ಗೀತಾ ಕಂಠಪಾಠ, ಮುದ್ದುಕೃಷ್ಣ (ಪೆನ್ಸಿಲ್) ಚಿತ್ರ ರಚನೆ 6-7 ನೇ ತರಗತಿ ವಿಧ್ಯಾರ್ಥಿಗಳಿಗೆ ಜಗದ್ಧೋದಾರಕ ಶ್ರೀ ಕೃಷ್ಣ ಭಾಷಣ, ಶ್ರೀ ಕೃಷ್ಣನ ಕುರಿತಾಗಿ ಭಕ್ತಿಗೀತೆ, 2ನೇ ಅಧ್ಯಾಯ ಭಕ್ತಿಯೋಗ (7 ಶ್ಲೋಕ)ಭಗವದ್ಗೀತಾ ಕಂಠಪಾಠ
ಗೋಪಾಲಕೃಷ್ಣ(ಪೆನ್ಸಿಲ್) ಚಿತ್ರ ರಚನೆ , ಪ್ರೌಢಶಾಲಾ ಮಕ್ಕಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಭಾಷಣ
ಶ್ರೀ ಕೃಷ್ಣನ ಕುರಿತಾಗಿ ಮಕ್ಕಳಿಗೆ ಭಕ್ತಿಗೀತೆ, 12 ನೇ ಅಧ್ಯಾಯ ಭಕ್ತಿಯೋಗ (10 ಶ್ಲೋಕ)ಭಗವದ್ಗೀತಾ ಕಂಠಪಾಠ, ರಾಧಾಕೃಷ್ಣ (ಪೆನ್ಸಿಲ್)ಚಿತ್ರ ರಚನೆ ನಡೆಯಲಿದೆ.
ಆಗಸ್ಟ್ 25ರಂದು ಆದಿತ್ಯವಾರ ಮುದ್ದುಕೃಷ್ಣ ಸ್ಪರ್ಧೆಯು ಡಾ.ಬಿ.ಆರ್. ಅಂಬೇಡ್ಕರ್ ರಂಗಮಂದಿರ ತೊಕ್ಕೊಟ್ಟು ಇಲ್ಲಿ ನಡೆಯಲಿದ್ದು 3ನೇ ವರ್ಷದ ಒಳಗಿನ ಮಕ್ಕಳಿಗೆ ಮುದ್ದುಕೃಷ್ಣ ವೇಷ ಪ್ರದರ್ಶನ ಸ್ಪರ್ಧೆ , 3ರಿಂದ 6ನೇ ವರ್ಷದ ಒಳಗಿನ ಮಕ್ಕಳಿಗೆ ಪುಟಾಣಿ ಕೃಷ್ಣ , 1ರಿಂದ 3ನೇ ತರಗತಿ ಮಕ್ಕಳಿಗೆ ಬಾಲಕೃಷ್ಣ , 4ರಿಂದ 7ನೇ ತರಗತಿ ಮತ್ತು ಫ್ರೌಢಶಾಲಾ ಮಕ್ಕಳಿಗೆ ರಾಧಾಕೃಷ್ಣ ಗೀತಾನೃತ್ಯ (ಇಬ್ಬರಿಗೆ) ಸಮೂಹ ಗೀತಾನೃತ್ಯ ಸ್ಪರ್ಧೆ ನಡೆಲಿದೆ.
ಮುದ್ದು ಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ತೊಕ್ಕೊಟ್ಟು ಇದರ ಉಪಾಧ್ಯಕ್ಷ ಸತೀಶ್ ಸೋಮೇಶ್ವರ್, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಕಾರ್ಯಕ್ರಮ ಸಂಯೋಜಕ ಅಶೋಕ್ ಗುರಿಕಾರ ಉಪಸ್ಥಿತರಿದ್ದರು
