Site icon Ullalavani

ಕುಂಪಲ: ನಾಳೆ ಕುಂಪಲಾಷ್ಟಮಿಯ ಪ್ರಯುಕ್ತ ಸಾಂಸ್ಕೃತಿಕ ಸ್ಪರ್ಧೆ

ಕುಂಪಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಇದರ 27ನೇ ವರ್ಷದ ಕುಂಪಲಾಷ್ಟಮಿಯ ಪ್ರಯುಕ್ತ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಗಸ್ಟ್ 18ರಂದು ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಾಲಕೃಷ್ಣ ಮಂದಿರ ಅಧ್ಯಕ್ಷರಾದ ಸತೀಶ್ ಕುಂಪಲ ತಿಳಿಸಿದರು.
ಅವರು ತೊಕ್ಕೊಟ್ಟು ನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ, 5 ರಿಂದ 7ನೇ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣನ ಚಿತ್ರ ಬಿಡಿಸುವುದು (ಪೆನ್ಸಿಲಿನಲ್ಲಿ) ಹಾಗೂ 8 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣನ ಚಿತ್ರ ಬಿಡಿಸುವುದು(ಕಲರ್) 10ನೇ ತರಗತಿ ವಿದ್ಯಾರ್ಥಿಗಳಿಗೆ ಐಚ್ಛಿಕ ಮೊಸರುಕುಡಿಕೆ ಉತ್ಸವದ ಬಗ್ಗೆ.

ಸಂಗೀತ ಸ್ಪರ್ಧೆ (ಭಕ್ತಿಗೀತೆ), ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ (ವಿಭಾಗ 1 ರಿಂದ 4, 5 ರಿಂದ 7, 8 ರಿಂದ 10ನೇ ತರಗತಿವರೆಗೆ), ಮಧ್ಯಾಹ್ನ 2 ರಿಂದ ಪುಟಾಣಿ ಕೃಷ್ಣ, ಮುದ್ದು ಕೃಷ್ಣ ಮತ್ತು
ಯಶೋಧ ಕೃಷ್ಣ ವೇಷ ಸ್ಪರ್ಧೆಗಳು ಶ್ರೀ ಬಾಲಕೃಷ್ಣ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದ್ದು, 0-1.5
ವರ್ಷ ಪುಟಾಣಿ ಕೃಷ್ಣ, 1.5 – 3.5 ವರ್ಷ ಮುದ್ದುಕೃಷ್ಣ, 3.5 – 5.5 ವರ್ಷ ಬಾಲಕೃಷ್ಣ ಮತ್ತು ತಾಯಿ
ಮಗು ಯಶೋಧೆ ಕೃಷ್ಣ ವಿಭಾಗದಲ್ಲಿ ನಡೆಯಲಿದೆ.
ಕುಂಪಲದ ನಾಡಹಬ್ಬವಾಗಿ ಆಚರಿಸುವ ಕುಂಪಲಾಷ್ಟಮಿ ಉತ್ಸವವು ಆಗಸ್ಟ್ 26 ರಂದು ಪ್ರಾತಃ
ಕಾಲದಿಂದ ವೈಧಿಕ ವಿಧಿವಿಧಾನಗಳೊಂದಿಗೆ ಉತ್ಸವ ಬಿಂಬದ ಪ್ರತಿಷ್ಠೆ, ಬೆಳಗ್ಗೆ 9ಕ್ಕೆ ಮಂಗಳ ಕಲಶದ
ಮೆರವಣಿಗೆ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ಮಂದಿರಕ್ಕೆ, ಬೆಳಗ್ಗೆ 9ಕ್ಕೆ ಉತ್ಸವದ ಉದ್ಘಾಟನೆ ಗಣ್ಯ ಅತಿಥಿಗಳಿಂದ, ಆ ಬಳಕ ಶ್ರೀ ಬಾಲಕೃಷ್ಣ ಬಾಲಗೋಕುಲ, ಶ್ರೀ ಬಾಲಕೃಷ್ಣ ಮಹಿಳಾ
ಸಮಿತಿ, ಶ್ರೀ ಬಾಲಕೃಷ್ಣ ಮಂದಿರದ ಭಜಕರಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ.
ಸಂಜೆ 3ಕ್ಕೆ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ಸಂಜೆ 6 ರಿಂದ
ಸಾಂಪ್ರದಾಯಿಕ ಓಕುಳಿ ಕಂಬ ಏರುವುದು, ಮಡಕೆ ಒಡೆಯುವುದು. ರಾತ್ರಿ 8ಕ್ಕೆ ಶ್ರೀಕೃಷ್ಣ ಪರಮಾತ್ಮನ
ವೈಭವದ ಶೋಭಾಯಾತ್ರೆ ವಿವಿಧ ದೃಶ್ಯರೂಪಕ, ಸ್ತಬ್ಧಚಿತ್ರ, ವೇಷಭೂಷಣ, ಹುಲಿ ವೇಷ, ಬ್ಯಾಂಡ್
ವಾದನದೊಂದಿಗೆ ಮಂದಿರದಿಂದ ಹೊರಟು ದುರ್ಗಾಪರಮೇಶ್ವರ ದೇವಸ್ಥಾನದವರೆಗೆ ಸಾಗಲಿದೆ
ಎಂದರು.
ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ಕುಂಪಲ, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಎಸ್. ಕುಂಪಲ
ಉತ್ಸವ ಸಮಿತಿಯ ಪ್ರ.ಕಾರ್ಯದರ್ಶಿ ದೀಕ್ಷಿತ್ ನಿಸರ್ಗ, ಸಾಂಸ್ಕೃತಿಕ ಸಂಚಾಲಕ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

Exit mobile version