Site icon Ullalavani

ನಾಳೆ ಶೃತಿಲಯ ಕಲಾಕೇಂದ್ರ ಕುತ್ತಾರು ವತಿಯಿಂದ ಮುದ್ದುಕೃಷ್ಣ ಸ್ಪರ್ಧೆ

ಕುತ್ತಾರು: ಮುದ್ದುಕೃಷ್ಣ ಉತ್ಸವ ಸಮಿತಿ ಮತ್ತು ಶೃತಿಲಯ ಕಲಾಕೇಂದ್ರ ಕುತ್ತಾರು, ಇದರ ಆಶ್ರಯದಲ್ಲಿ ಕುತ್ತಾರು ಮುದ್ದುಕೃಷ್ಣ -2024 ಕಾರ್ಯಕ್ರಮ ಆ. 18ರಂದು ಭಾನುವಾರ ಬೆಳಗ್ಗೆ 8.00ರಿಂದ ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಕುತ್ತಾರು ಇಲ್ಲಿ ನಡೆಯಲಿದೆ
ತೊಕ್ಕೊಟ್ಟು ಸೇವಾ ಸೌಧದ ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ಮುದ್ದುಕೃಷ್ಣ ಸಮಿತಿ ಕುತ್ತಾರು ಇದರ ಅಧ್ಯಕ್ಷ ಮೋಹನ್ ಶಿರ್ಲಾಲ್ ಮಾಹಿತಿ ನೀಡಿ ಯಶೋಧ ಕೃಷ್ಣ ಸ್ಪರ್ಧೆ ಒಂದು ವರ್ಷದೊಳಗಿನ ಮಗುವಿಗೆ ತಾಯಿಯೊಂದಿಗೆ ಭಾಗವಹಿಸಲು ಅವಕಾಶವಿದ್ದು,
ಒಂದರಿಂ ದಮೂರು ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ಮುರು ವರ್ಷದಿಂದ ಆರು ವರ್ಷದ ಮಕ್ಕಳಿಗೆ ಪುಟಾಣಿಕೃಷ್ಣ,
ಆರು ವರ್ಷದಿಂದ ಎಂಟಉ ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ ನಡೆಯಲಿದ್ದು, ರಾಧಾಕೃಷ್ಣ ಸ್ಪರ್ಧೆ ಮುಕ್ತ ವಿಭಾಗದಲ್ಲಿ ನಡೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಶ್ರೀ ರಾಜರಾಜೇಶ್ವರಿ ಸಿದ್ದಿವಿನಾಯಕ ದೇವಸ್ಥಾನ ಕುತ್ತಾರು ಇದರ ಅಧ್ಯಕ್ಷ ರಾಜೇಶ್ ಅತ್ತಾವರ ಚಾಲನೆ ನೀಡಲಿದ್ದು, ರೋಟರಿ ಕ್ಲಬ್ ದೇರಳಕಟ್ಟೆ ಇದರ ಅಧ್ಯಕ್ಷೆ ಸೌಮ್ಯ ಆರ್ ಶೆಟ್ಟಿ, ಮಂಗಳೂರು ವಿವಿ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಇದರ ಸದಸ್ಯೆ ಧನಲಕ್ಷ್ಮಿ ಗಟ್ಟಿ , ಸಿವಿಲ್ ಕಂಟ್ರಾಕ್ಟರ್ ನಾರಾಯಣ ಮಯ್ಯ, ಮೂಳೂರು, ಮಂಗಳೂರು ವಿವಿ ಜೀವವಿಜ್ಞಾನ ವಿಭಾಗದ ಡಾ|ಪ್ರಶಾಂತ್ ನಾಯಕ್ ಮುಖ್ಯ ಅತಿಥಿಗಳಾಗಿ ು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುದ್ದುಕೃಷ್ಣ ಸಮಿತಿ ಕುತ್ತಾರು ಇದರ ಪ್ರಧಾನ ಕಾರ್ಯದರ್ಶಿ ಜೀವನ್ ಕೆ.ಪಿ .ಮಾಡೂರು, ಉಪಾಧ್ಯಕ್ಷ ವಸಂತಕೋಡಿ ಹಾಗೂ ಎ.ಕೆ.ಬಾಬು ಉಪಸ್ಥಿತರಿದ್ದರು.

Exit mobile version