Site icon Ullalavani

ಆ.26,27 ರಂದು ಪಜೀರು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿವಿಜೃಂಭಣೆಯ ಮೊಸರುಕುಡಿಕೆ ಉತ್ಸವ

ಕೊಣಾಜೆ: ಪಜೀರು ಬೇಂಗೋಡಿಪದವು ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ 25ನೇ ವರ್ಷದ ಮೊಸರು ಕುಡಿಕೆಯು ಆ.26 ಮತ್ತು 27 ಎರಡು ದಿನಗಳ ಕಾಲ ಮುದ್ದುಕೃಷ್ಣ ಸ್ಪರ್ಧೆ, ಕ್ರೀಡಾಕೂಟ, ಭಕ್ತಿಗೀತೆ ಸ್ಪರ್ಧೆ, ಜಾರುಕಂಭ ಸ್ಪರ್ಧೆ ಹಾಗೂ ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ಜರಗಲಿದೆ ಎಂದು ಪಜೀರು ಶ್ರೀ ಕೃಷ್ಣ ಭಜನಾ ಮಂದಿರ ಅಧ್ಯಕ್ಷ ವಿಜೇತ್‌ ಪಜೀರು ಹೇಳಿದರು.

ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಆ. 18 ರಂದು ಕೃಷ್ಣ ವೇಷ ಸ್ಪರ್ಧೆ 3 ರಿಂದ 12 ವರ್ಷದ ಒಳಗಿನವರಿಗೆ ನಡೆಯಲಿದೆ. ಭಾಗವಹಿಸುವ ಮಕ್ಕಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯವಿದ್ದು, ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ನಗದು, ಸ್ಮರಣಿಕೆ ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಆ.18 ರಂದು ಶ್ರೀ ಕೃಷ್ಣ ದೇವರ ಚಿತ್ರ ಬಿಡಿಸುವ ಸ್ಪರ್ಧೆ, ಸಾಂಪ್ರದಾಯಿಕ ರಂಗೋಲಿ ಹುಡಿ ಸ್ಪರ್ಧೆ, ಮೆಹೆಂದಿ ಸ್ಪರ್ಧೆ, ಹೂಹಾರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು 7892484996 ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಬೇಕಿದೆ. ಆ.25 ರಂದು ಕ್ರೀಡಾ ಚಟುವಟಿಕೆಗಳು, ಆ.26 ರಂದು ಶ್ರೀ ಕೃಷ್ಣ ಭಜನಾ ಮಂದಿರ ಹಾಗೂ ಶ್ರೀ ತುಳಸಿ ಮಾತೃಮಂಡಳಿ ಹಾಗೂ ಬಾಲಗೋಕುಲದ ಮಕ್ಕಳಿಂದ ಭಜನಾ ಕಾರ್ಯಕ್ರಮ ಜರಗಲಿದೆ. ಆ.27 ರಂದು 1 ರಿಂದ 20 ವರ್ಷ ಮೇಲ್ಪಟ್ಟವರಿಗೆ ಭಕ್ತಿಗೀತೆ ಸ್ಪರ್ಧೆಯೂ ನಡೆಯಲಿದೆ. ಅಂದು ಮಧ್ಯಾಹ್ನ ದಿ| ಸಚಿನ್‌ ಪೂವ ಪೂಜಾರಿ ಸ್ಮರಣಾರ್ಥ ಸ್ಪೂರ್ತಿ ವಿ.ಯಂ, ಕೃಷಿವ್‌ ವಿ.ಯಂ ಪ್ರಾಯೋಜಕತ್ವದಲ್ಲಿ ಜಾರುಕಂಬ ಸ್ಪೃಧೆ ಆಯೋಜಿಸಲಾಗಿದೆ. ಸಂಜೆ 4 ರಿಂದ ಮೊಸರು ಕುಡಿಕೆ ಅಂಗವಾಗಿ ಕುಣಿತ ಭಜನೆ, ಹುಲಿವೇಷ ಇನ್ನಿತರ ವಿಶೇಷ ಮೆರುಗಿನೊಂದಿಗೆ ಶೋಭಾಯಾತ್ರೆ ಜರಗಲಿದೆ. ಮಂದಿರದ ಸ್ಥಾಪಕ ಸದಸ್ಯ ಸಂಜೀವ ಪೂಜಾರಿ ಜೋಗಿಬೆಟ್ಟು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ರಾತ್ರಿ 7ಕ್ಕೆ ಪುಟಾಣಿ ಕೃಷ್ಣ, ಮುದ್ದು ಕೃಷ್ಣ, ವಿಜೇತರ ಪ್ರತಿಭಾ ಪ್ರದರ್ಶನಗಳು ಜರಗಲಿದೆ.ರಾತ್ರಿ 7.30 ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮಕ್ಕೆ ಮೈಸೂರ್‌ ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಬೆಂಗಳೂರು ಮಾಜಿ ಅಧ್ಯಕ್ಷ ಸಂತೋಷ್‌ ರೈ ಬೋಳಿಯಾರ್‌ ಉದ್ಘಾಟಿಸಲಿದ್ದು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್‌ ಗಟ್ಟಿ ಭಾಗವಹಿಸಲಿದ್ದು, ಕೆ.ವರದರಾಜ್‌ ಸಪ್ತಸ್ವರ ದಿಕ್ಸೂಚಿ ಭಾಷಣಗೈಯ್ಯಲಿದ್ದಾರೆ ಎಂದರು.
ಈ ಸಂದರ್ಭ ಸಾಂಸ್ಕೃತಿಕ ಕಾರ್ಯದರ್ಶಿ ನಿರ್ಮಲ್‌ ಭಟ್‌ ವೈ, ಭಜನಾ ಸಂಚಾಲಕ ಬಾಲಕೃಷ್ಣ ರಾವ್‌ ಪಜೀರು, ಪಜೀರು ಶ್ರೀ ತುಳಸಿ ಮಾತೃ ಮಂಡಳಿ ಅಧ್ಯಕ್ಷೆ ಶರ್ಮಿಳಾ ದಿಲೀಪ್‌ ಕುಮಾರ್‌, ಸುಮತಿ ಆಂಡಿ ಪಜೀರು, ಉಮಾವತಿ ಶೆಟ್ಟಿ ಪಜೀರು ಭಾಗವಹಿಸಿದ್ದರು.

Exit mobile version