Site icon Ullalavani

ತೊಕ್ಕೊಟ್ಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನದಿಂದ ಗುರುವಂದನೆ

ಉಳ್ಳಾಲ್ ನ್ಯೂಸ್ ಡೆಸ್ಕ್
ವರದಿ: ಪ್ರವೀಣ್.ಯಸ್.ಕುಂಪಲ
ತೊಕ್ಕೊಟ್ಟು: ಸಮಾಜದಲ್ಲಿ ಫಲಾಪೇಕ್ಷೆಯಿಲ್ಲದೆ ದುಡಿಯುತ್ತಿರುವವರು ಹಲವು ಮಂದಿ ಇದ್ದು, ಅವರನ್ನು ಗುರುಪೂರ್ಣಿಮೆಯಂದು ಗುರುತಿಸುವುದು ಒಳ್ಳೆಯ ಕಾರ್‍ಯ ಎಂದು ಧಾರ್ಮಿಕ ಪರಿಷತ್ ಸದಸ್ಯ ಕೆ.ಟಿ.ಸುವರ್ಣ ಅಭಿಪ್ರಾಯಪಟ್ಟರು.

ಅವರು ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ವ್ಯಾಸ ಪೂರ್ಣಿಮೆಯ ಪ್ರಯುಕ್ತ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಉಳ್ಳಾಲ ಮೊಗವೀರ ಸಮಾಜದ ಅಧ್ಯಕ್ಷ ಹಾಗೂ ಧಾರ್ಮಿಕ, ಸಾಮಾಜಿಕ ಮುಂದಾಳು ಸದಾನಂದ ಬಂಗೇರ ಇವರಿಗೆ ಗುರುವಂದನೆ ನೆರವೇರಿಸಿ ಮಾತನಾಡಿದರು.
ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಸಹೆಗಾರ ಆನಂದ್ .ಕೆ.ಅಸೈಗೋಳಿ, ಅಧ್ಯಕ್ಷ ಹರೀಶ್ ಅಂಬ್ಲಮೊಗರು, ಕಾರ್‍ಯದರ್ಶಿ ಕಿರಣ್ ಕೊಲ್ಯ, ಸದಸ್ಯರುಗಳಾದ ರಾಕೇಶ್ ಬೈಪಾಸ್, ವಿಶ್ವನಾಥ್ ಶೆಟ್ಟಿ, ಪ್ರಕಾಶ್ ಸಿಂಫೋನಿ, ಶಿವಾಜಿ ತೊಕ್ಕೊಟ್ಟು, ಗಣೇಶ್ ಕಾಪಿಕಾಡು, ನವೀನ್ ಬೈಪಾಸ್, ನಾರಾಯಣ ಕೆರೆಬೈಲ್, ಪುರುಷೋತ್ತಮ ರಾವ್, ಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.
ಜೀವನ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್. ಯಸ್.ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣ ತೊಕ್ಕೊಟ್ಟು ವಂದಿಸಿದರು.

Exit mobile version