2008ರಂದು ದೆಹಲಿಯ ನೋಯ್ಡಾದಲ್ಲಿ ಹೆತ್ತವರೇ ತಮ್ಮ 14 ವರ್ಷದ ಮಗಳು ಆರೋಷಿ ಹಾಗೂ ಮನೆಯ ಕೆಲಸಗಾರ ಹೇಮರಾಜ್ ಕೊಲೆ ಮಾಡಿದ ಘಟನೆ ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ ವಿಷಯ ತಿಳಿದೆ ಇದೆ. ಅದಕ್ಕೆ ವ್ಯತಿರಿಕ್ತ ಎಂಬಂತೆ ಆರುಷಿ ಪ್ರಕರಣದ ಕಥೆಯಾಧಾರಿತ ತಲ್ವಾರ್ ಚಿತ್ರವು ಅಕ್ಟೋಬರ್ ನಲ್ಲಿ ತೆರೆಗೆ ಬರಲಿದ್ದು ಇನ್ನು ಸೆಪ್ಟಂಬರ್’ನಲ್ಲಿ ನಡೆಯಲಿರುವ ಟೊರಾಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಕ್ರೈಂ ಥ್ರಿಲ್ಲರ್ ವಿಭಾಗದಲ್ಲಿ ಆಯ್ಕೆ ಪಡೆದುಕೊಂಡಿದೆ.
ಮೆಘನಾ ಗುಲ್ಜರ್ ನಿರ್ದೇಶನದ ಈ ಚಿತ್ರಕ್ಕೆ ಮೊದಲ ಸಕ್ಸಸ್ ಎಂಬಂತೆ ಚಿತ್ರವು ಟೊರಾಂಟೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ 35 ಚಿತ್ರಗಳಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನೊಂದು ಸಂತಸದ ವಿಷಯವೆಂದರೆ ಈ ಚಿತ್ರವು ಇಂಗ್ಲಿಷ್’ನಲ್ಲಿ ಗಿಲ್ಟಿ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗಲಿದ್ದು ತಲ್ವಾರ್’ನ್ನು ಜಂಗ್ಲಿ ಮೋಷನ್ ಪಿಕ್ಚರ್ಸ್ ಸಂಸ್ಥೆಯು ನಿರ್ಮಾಣ ಮಾಡಿದ್ದಾರೆ.
ಈ ಚಿತ್ರದಲ್ಲಿ ಇರ್ಫಾನ್ ಖಾನ್, ತಬುರೊಂದಿಗೆ ಚಿತ್ರದಲ್ಲಿ ನೀರಜ್ ಕಾಬಿ ಹಾಗೂ ಕೊಂಕಣ ಸೇನ್ ಶರ್ಮಾ ಅಭಿನಯಿಸಿದ್ದು ಚಿತ್ರದ ಬಿಡುಗಡೆಗಾಗಿ ಸಿನಿ ರಸಿಕರು ಕಾಯುತ್ತಿದ್ದಾರೆ.