UN networks
ಉಳ್ಳಾಲ: ಭಾರತದ ಪ್ರತಿಯೊಂದು ಮಾತೃಭಾಷೆ ಅದರದೇ ಆದ ಸಂಸ್ಕøತಿ ಪರಂಪರೆಯನ್ನು ಹೊಂದಿದ್ದು, ಯುವ ಸಮುದಾಯ ಈ ಮಾತೃಭಾಷೆಯನ್ನು ಉಳಿಸಿ ಬೆಳೆಸುವುದರೊಂದಿಗೆ ನಮ್ಮ ವೈವಿಧಯಮಯ ಸಂಸ್ಕøತಿಯ ಉಳಿವಿಗೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಟಿ.ಕೆ. ಉಣ್ಣಿಕೃಷ್ಣನ್ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಿಟ್ಟೆ ಪಾನೀರು ಕ್ಯಾಂಪಸ್‍ನಲ್ಲಿ ನಡೆದ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ವಿಶ್ವದಾದ್ಯಂತ ಸಾವಿರಾರು ಮಾತೃಭಾಷೆಗಳು ಇಂದಿಗೂ ತನ್ನದೇ ಆದ ಸಂಸ್ಕøತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ. ಮಾತೃಭಾಷೆಯ ಮೂಲಕ ನಾವು ಸಂವಹನ ನಡೆಸುವಾಗ ನಮ್ಮಲ್ಲಿ ಬಾಂಧವ್ಯ ಹೆಚ್ಚಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮಾತೃಭಾಷೆಯನ್ನು ಉಳಿಸುವ ಕಾರ್ಯ ಇಂದಿನ ಯುವ ಸಮುದಾಯದಿಂದ ಆಗಬೇಕು ಈ ವೈವಿದ್ಯಮಯ ಪರಂಪರೆಯನ್ನು ಮುನ್ನಡೆಸುವ ಕಾರ್ಯವನ್ನು ನಡೆಸುತ್ತಿರುವ ನಿಟ್ಟೆ ವಿಶ್ವವಿದ್ಯಾನಿಲಯದ ಕಾರ್ಯ ಶ್ಲಾಘನೀಯ ಎಂದರು.
ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ| ಡಾ| ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಿಟ್ಟೆ ವಿಶ್ವವಿದ್ಯಾನಿಲಯವು ಮಾತೃಭಾಷೆಗಳಿಗೆ, ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಯಾವತ್ತೂ ಬೆಂಬಲ ನೀಡುತ್ತದೆ. ವಿಶ್ವವಿದ್ಯಾನಿಲಯವು ಈಗಾಗಲೇ ಹಲವಾರು ಭಾಷಾ ಸಂಬಂ„ ಯೋಜನೆಗಳನ್ನು ನಡೆಸುತ್ತಿದ್ದು ಭಾಷೆಗಳಿಗೆ ಬೆಂಬಲ ನೀಡುತ್ತಿದೆ ಎಂದರು.
ನಿಟ್ಟೆ ಕಮ್ಯುನಿಕೇಶನ್ ಕಾಲೇಜಿನ ಮುಖ್ಯಸ್ಥ ಪೆÇ್ರ| ರವಿರಾಜ್ ಕಿಣಿ , ನಿಟ್ಟೆ ವಿಶ್ವವಿದ್ಯಾನಿಲಯದ ಆಂತರಿಕ ಗುಣಮಟ್ಟ ಸಮಿತಿಯ ನಿರ್ದೇಶಕ ಪೆÇ್ರ| ಶ್ರೀನಿಕೇತನ್ ಉಪಸ್ಥಿತರಿದ್ದರು. ನಿಟ್ಟೆ ವೈಜ್ಞಾನಿಕ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಅನಿರ್ಬನ್ ಚಕ್ರವರ್ತಿ ರವೀಂದ್ರನಾಥ ಠಾಗೂರರ ಕವನವನ್ನು ಬಂಗಾಳಿ ಭಾಷೆಯಲ್ಲಿ ಪ್ರಸ್ತುತಪಡಿಸಿದರು.
ಹಲವು ಭಾಷೆಗಳ ಪ್ರಸ್ತುತಿಯಿರುವ ಮಿಲೇ ಸುರ್ ಮೇರಾ ತುಮ್ಹಾರಾ ಹಾಡನ್ನು ನಿಟ್ಟೆ ಕಮ್ಯುನಿಕೇಷನ್‍ನ ಪ್ರಾಧ್ಯಾಪಕ ಡಾ| ನೇಸರ ಕಾಡನಕುಪ್ಪೆ ಮಾರ್ಗದರ್ಶನದಲ್ಲಿ (ಡಾ. ಶ್ರುತಿ, ಗಾನಾ ಹಾಗೂ ಭಾರತಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮ ಸಂಯೋಜಕಿ ಹಾಗೂ ನಿಟ್ಟೆ ಮಾನವಿಕ ವಿಭಾಗದ ಡಾ| ಸಾಯಿಗೀತಾ ಸ್ವಾಗತಿಸಿದರು.ನಿಟ್ಟೆ ಎನ್‍ಎಸ್‍ಎಸ್ ಸಂಯೋಜಕ ಶಶಿಕುಮಾರ್ ಶೆಟ್ಟಿ ವಂದಿಸಿದರು. ಸುಮಿತಾ ವಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
