ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಹರೇಕಳ: ಕಳೆದ ವರ್ಷ ಹರೇಕಳ ಗ್ರಾಮದಲ್ಲಿ ಕಿರು ಸಾಲ ಯೋಜನೆಯಡಿ ಹರೇಕಳ ಗ್ರಾಮದಲ್ಲಿ 62 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಿಸಲಾಗಿದ್ದರೆ, ಈ ವರ್ಷ 103 ಮಂದಿಗೆ ಚೆಕ್ ವಿತರಿಸಲಾಗಿದ್ದು ಪಡೆದ ಸಾಲ ಸೂಕ್ತ ರೀತಿಯಲ್ಲಿ ಉಪಯೋಗಿಸಿ ಎಂದು ತಾಲೂಕು ಪಂಚಾಯಿತಿ ಸದಸ್ಯ ಮಹಮ್ಮದ್ ಮುಸ್ತಫಾ ಹರೇಕಳ ಹೇಳಿದರು.
ಹರೇಕಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಿರುಸಾಲ ಯೋಜನೆಯಡಿ 25 ಸಾವಿರದಂತೆ 103 ಮಂದಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಹರೇಕಳ ಗ್ರಾಮ ಅಭಿವೃದ್ಧಿ ಜನಪ್ರತಿನಿಧಿಗಳ ಮೂಲ ಉದ್ದೇಶವಾಗಿರಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಹಕಾರ ಪಡೆಯಬೇಕಿದ್ದು ಗ್ರಾಮಸ್ಥರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಂ.ಪಿ.ಮಜೀದ್ ಆಲಡ್ಕ, ಬಶೀರ್ ಉಂಬುದ, ದೇವಕಿ, ಬದ್ರುದ್ದೀನ್ ಹರೇಕಳ, ನಸೀಮಾ, ಪುಷ್ಪಲತಾ ಶೆಟ್ಟಿ, ಸತ್ತಾರ್ ಬಾವಲಿಗುರಿ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಖಾದರ್ ಸ್ವಾಗತಿಸಿದರು.