Site icon Ullalavani

ಫೆ.20 ರಿಂದ ಫೆ.25ರವರೆಗೆ ಉಳ್ಳಾಲ್ ಕ್ರಿಕೆಟ್ ಬೋರ್ಡ್ ಆಶ್ರಯದಲ್ಲಿ
ಉಳ್ಳಾಲ್ ಪ್ರೀಮಿಯರ್ ಲೀಗ್ -2023

UN NEWS NETWORKS
ಉಳ್ಳಾಲ: ಉಳ್ಳಾಲ್ ಕ್ರಿಕೆಟ್ ಬೋರ್ಡ್ ವತಿಯಿಂದ ಎಂಟನೇ ಅವಧಿಯ ಟೆನಿಸ್ ಬಾಲ್ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಉಳ್ಳಾಲ್ ಪ್ರೀಮಿಯರ್ ಲೀಗ್ ಫೆ.20 ರಿಂದ ಫೆ.25 ರವರೆಗೆ ಐದು ದಿನಗಳ ಕಾಲ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಉಳ್ಳಾಲದ ಸೀಗ್ರೌಂಡ್ ನಲ್ಲಿ ನಡೆಯಲಿದೆ ಎಂದು ಉಳ್ಳಾಲ್ ಕ್ರಿಕೆಟ್ ಬೋರ್ಡ್ ಇದರ ಅಧ್ಯಕ್ಷ ಯು.ಬಿ ಸಲೀಂ ಹೇಳಿದರು.
ಅವರು ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್‌ ಕ್ಲಬ್‌ ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಯು.ಬಿ ಸಲೀಂ ಮಾತನಾಡಿದರು

ಜಾತಿ ಮತ ಬೇಧಭಾವವಿಲ್ಲದೆ ಯುಸಿಬಿ ಎಂಟನೆ ಅವಧಿಯಲ್ಲಿ3 ಬಾರಿ ಪೆಡ್ಲೈಟ್ ಕ್ರಿಕೆಟ್ ಪಂದ್ಯಾಟವನ್ನು ಉಳ್ಳಾಲದಲ್ಲಿ ಆಯೋಜಿಸುತ್ತಾ ಬಂದಿದೆ. ಗೌರವಾಧ್ಯಕ್ಷ ಶಾಸಕ ಯು.ಟಿ ಖಾದರ್ ಅವರ ನೇತೃತ್ವದಲ್ಲಿ ಉಳ್ಳಾಲದ ಎಲ್ಲರನ್ನೂ ಸೇರಿಸಿಕೊಂಡು ಪಂದ್ಯಾಟ ಆಯೋಜನೆ ಮಾಡಲಾಗಿದೆ. ಫೆ. 24 ರಂದು 40 ವರ್ಷ ಮೇಲ್ಪಟ್ಟವರ ಮಾಸ್ಟರ್ಸ್ ಕ್ರಿಕೆಟ್ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯಲಿದೆ. ಫೆ.25 ರಂದು ಸಂಜೆ 4ಕ್ಕೆ ಡ್ರಗ್ ಸೇವನೆ ವಿರುದ್ಧ ಜಾಗೃತಿ ಕಾರ್ಯಕ್ರಮ ಬೈಕ್ ಜಾಥಾ ಮೂಲಕ ವಿವಿಧ ವೈದ್ಯಕೀಯ ಕಾಲೇಜುಗಳ ನೇತೃತ್ವದಲ್ಲಿ ತೊಕ್ಕೊಟ್ಟು ಬಸ್ ನಿಲ್ದಾಣದಿಂದ ಉಳ್ಳಾಲದವರೆಗೆ ನಡೆಯಲಿದೆ. ಪ್ರಸ್ತುತ ದಿನಗಳಲ್ಲಿ ಶಾಲಾ ಮಟ್ಟಕ್ಕೂ ಡ್ರಗ್ ಸೇವನೆ ತಲುಪಿರುವ ಆತಂಕದಲ್ಲಿ ಬೋರ್ಡ್ ಸಾಮಾಜಿಕ ಕಳಕಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಈಗಾಗಲೇ ಉಳ್ಳಾಲದ ರಾಯಲ್ ಗಾರ್ಡನ್ ನಲ್ಲಿ ಆಟಗಾರರ ಆಕ್ಷನ್ ನಡೆದಿದ್ದು, ರಾಜ್ಯಮಟ್ಟದ ಕ್ರಿಕೆಟ್ ಆಟಗಾರ , ಗಲ್ಫ್ ರಾಷ್ಟ್ರಗಳಲ್ಲಿ ಆಡುವ ರಾಯೀಸ್ ಹೆಚ್ಚಿನ ಅಂಕಕ್ಕೆ ಹರಾಜಾಗಿದ್ದು, ಮುನೀರ್, ಫಯಾಝ್ ಮುಕ್ಕಚ್ಚೇರಿ , ವೀರಜ್ ಅವರುಗಳು ಅಧಿಕ ಅಂಕಗಳಲ್ಲಿ ವಿವಿಧ ತಂಡಗಳ ಮಾಲೀಕರಿಗೆ ಹರಾಜಾಗಿ ಆಯ್ಕೆಗೊಂಡಿದ್ದಾರೆ. ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಣವನ್ನು ಮುಂದಿಟ್ಟು ಹರಾಜು ಪ್ರಕ್ರಿಯೆ ನಡೆಸದೆ ಅಂಕಗಳಲ್ಲಿ ಆಯ್ಕೆಯನ್ನು ಮಾಡಲಾಗಿದೆ. ಪ್ರತಿಬಾರಿ ಜನಸ್ನೇಹಿಯಾಗಿ ಪೊಲೀಸ್ ಇಲಾಖೆ ಹೊರಹೊಮ್ಮಲಿ ಅನ್ನುವ ಉದ್ದೇಶದೊಂದಿಗೆ ಪೊಲೀಸ್ -ಜನಪ್ರತಿನಿಧಿಗಳ ತಂಡಗಳ ಭಾಗವಹಿಸುವಿಕೆ ಇದ್ದು, ಈ ಬಾರಿ ಉಳ್ಳಾಲ ತಾಲೂಕು ಪತ್ರಕರ್ತರ ತಂಡವೂ ಪ್ರತಿನಿಧಿಸಲಿದೆ. ಉಳ್ಳಾಲ ಕ್ರಿಕೆಟ್ ಬೋರ್ಡ್ ಚುನಾವಣೆಯನ್ನು ಮುಂದಿಟ್ಟುಕೊಂಡು ಪಂದ್ಯಾಟವನ್ನು ಆಯೋಜಿಸಿಲ್ಲ. ಪ್ರತಿವರ್ಷವೂ ಪಂದ್ಯಾಟ ಆಯೋಜಿಸುತ್ತಾ ಬಂದಿದ್ದು, ಕಳೆದ ವರ್ಷ ಉಳ್ಳಾಲ ಉರೂಸ್ ಮತ್ತು ರಮದಾನ್ ಹಿನ್ನೆಲೆಯಲ್ಲಿ ಪಂದ್ಯಾಟ ನಡೆಸಲು ಸಾಧ್ಯವಾಗಿರಲಿಲ್ಲ ಎಂದರು.
ಸುದ್ಧಿಗೋಷ್ಠಿಯಲ್ಲಿ ಉಪಾಧ್ಯಕ್ಷ ಮೊಯ್ದೀನ್ ಯು.ಕೆ, ಸದಸ್ಯರುಗಳಾದ ರಾಜಾರಾಮ್ ನಾಯಕ್, ನವಾಝ್ ಕಲ್ಲಾಪು, ಶಾಖಿರ್ ಉಳ್ಳಾಲ್, ರಫೀಕ್ ಉಳ್ಳಾಲ್ ಉಪಸ್ಥಿತರಿದ್ದರು.

Exit mobile version