Site icon Ullalavani

ಆರೋಗ್ಯ ವಂತ ಸಮಾಜ ಕ್ರೀಡೆಯಿಂದ ಸಾಧ್ಯ: ಖಾಲಿದ್ ಉಜಿರೆ

UN NEWS NETWORKS
ಉಳ್ಳಾಲ: ಆರೋಗ್ಯ ವಂತ ಸಮಾಜ ನಿರ್ಮಾಣ ಕ್ರೀಡೆಯಿಂದ ಸಾಧ್ಯ ಇದೆ.ಸೋಲು ಗೆಲುವು ವಿನ ಮೂಲ.ಗೆಲುವು ಮುಖ್ಯ ಅಲ್ಲ, ಭಾಗವಹಿಸುವುದು ಮುಖ್ಯ ಎಂದು ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಖಾಲಿದ್ ಉಜಿರೆ ಹೇಳಿದರು.

ಅವರು ಯೂತ್ ಫ್ರೆಂಡ್ಸ್ ಕಿನ್ಯಾ ಇದರ ಆಶ್ರಯದಲ್ಲಿ ಭಾನುವಾರ ಕಿನ್ಯ ಬೆಳರಿಂಗೆಯಲ್ಲಿ ನಡೆದ ಸೌಹಾರ್ದ ಟ್ರೋಫಿ ಹೊನಲು ಬೆಳಕಿನ ೬೫ ಕೆಜಿ ವಿಭಾಗದ ಮ್ಯಾಟ್ ಕಬಡ್ಡಿ ಪಂದ್ಯಾಟದ ಉದ್ಘಾಟನಾ ಸಮಾರಂಭ ದಲ್ಲಿ ಮಾತನಾಡಿದರು. ಶಾಸಕ ಯು ಟಿ ಖಾದರ್ ಟ್ರೋಫಿ ಅನಾವರಣ ಮಾಡಿದರು.
ಈ ಸಂದರ್ಭದಲ್ಲಿ ನಿರ್ಗತಿಕರಿಗೆ ಆಹಾರ ಧಾನ್ಯ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮೂವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಖ್ಯಾತ ವೈದ್ಯ ಡಾ. ರಾಹುಲ್ ರಾಮಾನುಜಂ ನಾಟೆಕಲ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು
ಈ ಕಾರ್ಯಕ್ರಮ ದಲ್ಲಿ ಯೂತ್ ಕಾಂಗ್ರೆಸ್ ಮುಖಂಡ ನಾಸೀರ್ ಸಾಮಣಿಗೆ, ಸಲೀಂ ಮೇಗಾ, ಕಿನ್ಯ ಗ್ರಾ.ಪಂ. ಸದಸ್ಯ ಫಾರೂಕ್ ಕಿನ್ಯ, ನಝೀರ್ ,ಇಜಾಝ್,ಸೆಯ್ಯದ್ ತ್ವಾಹ, ರಹಿಮಾನ್ ಎಕೆ, ಕಿನ್ಯ ಗ್ರಾಮ ಕಾಂಗ್ರೆಸ್ ಮುಖಂಡ ಅಬ್ಬಾಸ್, ಬಾವಾಕ ದೇರಳಕಟ್ಟೆ, ಮೋಹನ್, ಹಸೈನಾರ್ ಕೆಕೆ, ತಾ.ಫಂ. ಮಾಜಿ ಅಧ್ಯಕ್ಷ ಮೋನು, ಸದಸ್ಯ ಮುಸ್ತಫಾ ಹರೇಕಳ, ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷ ಬದ್ರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು
ಹಮೀದ್ ಕಿನ್ಯ ಸ್ವಾಗತಿಸಿದರು ಹೈದರ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.

Exit mobile version