UN NEWS NETWORKS
ಉಳ್ಳಾಲ: ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕೈರಂಗಳದ ಪುಣ್ಯಕೋಟಿನಗರದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಕಳೆದ ಜ.14 ರಿಂದ ಆರಂಭಗೊಂಡ ಒಂದು ತಿಂಗಳ ಗೋಸೇವಾ ಮಾಸಾಚರಣೆಯು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ವೈಭವ ಹಾಗೂ ವಿಭಿನ್ನತೆಯ ಮೂಲಕ ನಡೆದು ಜ.13 ರಂದು ಸೋಮವಾರ ದೀಪೋತ್ಸವದ ಮೂಲಕ ಸಂಪನ್ನಗೊಂಡಿತು.
ಗೋಸೇವಾ ಮಾಸಾಚರಣೆ ಉದ್ಘಾಟನೆಯನ್ನು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಉಪಸ್ಥಿತಿಯೊಂದಿಗೆ, ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು, ಕನ್ಯಾನ ಉದ್ಘಾಟಿಸಿ ಚಾಲನೆ ನೀಡಿದ್ದರು.
ಗೋಸೇವಾ ಕಾರ್ಯಕ್ರಮದಲ್ಲಿ ಮುಡಿಪು ಭಾಗದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗೋಸೇವೆಯು ನಿತ್ಯ ನಿರಂತರವಾಗಿ ನಡೆಯಿತು ಹಾಗೂ ಪ್ರತಿನಿತ್ಯ ಸಂಜೆ ವಿವಿಧ ಭಜನಾ ಮಂಡಳಿಗಳ ಆಶ್ರಯದಲ್ಲಿ ನಿರಂತರ ಭಜನಾ ಸಂದ್ಯಾ ಭಜನೆಯು ನಿರಂತರವಾಗಿ ನಡೆಯಿತು.
ಗೋಸೇವಾ ಮಾಸಾಚರಣೆಯ ಕೊನೆಯ ದಿನವಾದ ಸೋಮವಾರ ಭಜನಾ ಮಂಗಳೋತ್ಸವ ಹಾಗೂ ದೀಪೋತ್ಸವ ಮೂಲಕ ಗೋಸೇವಾ ಮಾಸಾಚರಣೆ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಸಂಚಾಲಕ ಟಿ.ಜಿ ರಾಜಾರಾಮ್ ಭಟ್ ಅವರು ಮಾತನಾಡಿ,ಕೈರಂಗಳ ಪುಣ್ಯಕೋಟಿನಗರದ ಗೋಶಾಲೆಯಲ್ಲಿ ಶ್ರಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಒಂದು ತಿಂಗಳ ಕಾಲ ನಡೆಷದ ಗೋಸೇವಾ ಮಾಸಾಚರಣೆಗೆ ವಿವಿಧ ಸಂಘ ಸಂಸ್ಥೆಗಳು ಹಾಗೂ ಎಲ್ಲರ ಪರಿಶ್ರಮ, ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಗೋಸೇವೆಯ ಮಾಸಾಚರಣೆಯ ಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಆ ಗೋಮಾತೆಯ ಆಶೀರ್ವಾದ ವಿರಲಿ ಹಾಗೂ ಗೊಸೇವೆ ನಿತ್ಯ ನಿರಂತರವಾಗಿ ನಡೆಯಲಿದ್ದು,ಎಲ್ಲರಿಗೂ ಭಾಗವಹಿಸಲು ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಗೋ ಸೇವಾ ಮಾಸಾಚರಣೆಯಲ್ಲಿ ಸಹಕರಿಸಿದ ಹಲವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಣಂತೂರು ಶ್ರೀ ಅರಸು ತೋಡಕುಕ್ಕಿನ್ನಾರ್ ಕ್ಷೇತ್ರದ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ನಾರ್ಯಗುತ್ತು, ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಹಿರಿಯರಾದ ಶಂಕರಭಟ್ ಕೊಣಾಜೆ, ಜಯರಾಮ ಶೆಟ್ಟಿ ಕಂಬಳಪದವು, ರವಿ ಮಂಜನಾಡಿ, ಕಿರಣ್ ದಾಸ್ ಹೂವಿನ ಕೊಪ್ಪಳ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಪಾದಲ್ಪಾಡಿ ವಂದಿಸಿದರು.