Site icon Ullalavani

ಕೋಟೆಪುರ ಜುಮಾ ಮಸೀದಿಯಲ್ಲಿ ಬೃಹತ್  ದ್ಸಿಕ್ರ್ ವಾರ್ಷಿಕದ ಉದ್ಘಾಟನೆ

UN networks

ಉಳ್ಳಾಲ: ಕೋಟೆಪುರ ಜುಮಾ ಮಸ್ಜಿದ್ 403 ಮತ್ತು ಹಯಾತುಲ್ ಇಸ್ಲಾಮ್ ಮದ್ರಸ, ಕೋಟೆಪುರ ಉಳ್ಳಾಲ, 63 ನೇ ವಾರ್ಷಿಕ ಖುತುಬಿಯ್ಯತ್  ರಾತೀಬ್ ಪ್ರಯುಕ್ತ 6 ದಿವಸಗಳ ಮತಪ್ರಭಾಷಣ ಹಾಗೂ ಬೃಹತ್  ದ್ಸಿಕ್ರ್ ವಾರ್ಷಿಕದ ಉದ್ಘಾಟನಾ ಕಾರ್ಯಕ್ರಮ ಮಸೀದಿ ವಠಾರದಲ್ಲಿ ನಡೆಯಿತು.
ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರು ಉಸ್ಮಾನ್ ಫೈಝಿ ತೋಡಾರು ಉದ್ಘಾಟನೆ ಮಾಡಿ ಮಾತನಾಡಿ
ಮಹಾತ್ಮರ ಸ್ಮರಣೆ ಮಾಡುವುದು ವಿಜಯದ ಯಾತ್ರೆಯಾಗಿದೆ ಎಂದರು.
ಕೋಟೆಪುರ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಯು.ಕೆ ಕಾರ್ಯಕ್ರಮದ ಅಧ್ಯಕ್ಷತೆವಹಿದರು.
ಉಳ್ಳಾಲ ಸಯ್ಯದ್ ಮದನಿ ದರ್ಗಾ ಖತೀಬರಾದ ಅನ್ವರ್  ಅಲೀ  ದಾರಿಮಿ ಮುಖ್ಯ ಪ್ರಭಾಷಣಗೈದರು. ಉಳ್ಳಾಲ ಸಯ್ಯದ್ ಮದನಿ
ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ ಆಶಂಶನಾ ಬಾಷಣಗೈದರು.
ಉಳ್ಳಾಲ ಸಯ್ಯದ್ ಮದನಿ ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಹಾಜಿ ಯು.ಕೆ ಮುಹ್ಯಿದ್ದೀನ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಶೀಫ್ ಅಬ್ದುಲ್ಲ, ಕೋಟೆಪುರ ಮಸೀದಿ ಉಪಾಧ್ಯಕ್ಷ ಅಬೂಬಕರ್, ಹಾಗೂ ಉಳ್ಳಾಲ ಸಯ್ಯದ್ ಮದನಿ ದರ್ಗಾ ಸದಸ್ಯರಾದ ಹಮ್ಮಬ್ಬ ಯೂಸುಫ್, ಅಬ್ದುಲ್ ರಹ್ಮಾನ್, ಕೋಡಿ ಮಸೀದಿ ಅಧ್ಯಕ್ಷ ಹಮೀದ್, ಹಾಗೂ ಕೋಟೆಪುರ ಮಸೀದಿಯ ಕಮಿಟಿ ಸದಸ್ಯರು ಉಪಸ್ಥಿತರಿದ್ದರು. ಕೋಟೆಪುರ  ಸಿ.ರೋಡ್ ಮೀಕಾಈಲ್ ಮಸೀದಿ ಇಮಾಮ್
ಮೊಹಮ್ಮದ್ ಹಾಫಿಳ್ ನ ಈಮಿ ಪ್ರಾಸ್ತವಿಕವಾಗಿ ಮಾತನಾಡಿದರು. ಕೋಟೆಪುರ ಜುಮಾ ಮಸೀದಿ ಖತೀಬರು ಹುಸೈನ್ ಇರ್ಷಾದ್ ಸಖಾಫಿ
ದುಆ ನೆರವೇರಿಸಿದರು.
ಮದ್ರಸ ವಿದ್ಯಾರ್ಥಿ ಸ ಅದ್ ಕಿರಾಅತ್ ಪಠಿಸಿದರು, ಕೋಟೆಪುರ ಹಯಾತುಲ್ ಇಸ್ಲಾಮ್ ಮದ್ರಸದ ಸದರ್ ಮುಅಲ್ಲಿಮ್ ಅಶ್ರಫ್ ಸ ಅದಿ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿ ವಂದಿಸಿದರು

Exit mobile version