Site icon Ullalavani

ಫಾಝಿಲ್ ಕೊಲೆ ಆರೋಪಿಯಾಗಿದ್ದೇನೆ
ಖರ್ಚಿಗೆ ಹಣ ನೀಡು’
ಎಂದು ಬೆದರಿಕೆಯೊಡ್ಡಿದ ಆರೋಪಿ ಅಂದರ್

UN networks

ಉಳ್ಳಾಲ:  ಸುರತ್ಕಲ್ ನಲ್ಲಿ ನಡೆದ ಕೋಮುದ್ವೇಷದ  ಫಾಝಿಲ್ ಹತ್ಯೆಯ ಪ್ರಕರಣ ದ ಆರೋಪಿಯಾಗಿದ್ದೇನೆ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದೇನೆ, ಖರ್ಚಿಗೆ ಹಣ ಕೊಡಬೇಕು ಎಂದು ಬೆದರಿಕೆಯ ಒಡ್ಡಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ಘಟನೆ ನಡೆದಿದೆ. ಈ ಬಗ್ಗೆ ಉದಯಕುಮಾರ್ ಎಂಬವರು  ನೀಡಿದ ದೂರಿನ ಮೇರೆಗೆ ಹರ್ಷಿತ್ ಎಂಬಾತನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ:ಹರ್ಷಿತ್ ಎಂಬಾತ ಫೆ.2ರಂದು ಮಾಡೂರು ನಿವಾಸಿ ಬಸ್ ನಿರ್ವಾಹಕ ವೃತ್ತಿ ಮಾಡುತ್ತಿದ್ದ ಉದಯ್ ಕುಮಾರ್ ಸೋವೂರು ಎಂಬವರು ಮಾಡೂರು ಬಳಿಯ ವಿಜಿ ಫ್ಯಾಕ್ಟರಿ ಯಲ್ಲಿ ಇದ್ದ ವೇಳೆ  ಕರೆ ಮಾಡಿ ನಾನು ಪಾಝಿಲ್ ಕೊಲೆ ಆರೋಪಿ ಆಗಿದ್ದು , ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ.ನನಗೆ ಧನ ಸಹಾಯ  ನೀಡಬೇಕು ಎಂದು ಬೆದರಿಸಿದ್ದಾನೆ
ಇದಕ್ಕೆ ಉದಯ್ ಕುಮಾರ್ ನಿರಾಕರಿಸಿದ್ದರು. .ಇದರ ಬಳಿಕ ಫೆ.6 ರಂದು ಹರ್ಷಿತ್ ಉದಯ್ ಗೆ ಮತ್ತೊಮ್ಮೆ ಕರೆ ಮಾಡಿ ನನಗೆ ಮತ್ತು ಜೈಲಿನಲ್ಲಿ ಇರುವವರಿಗೆ ಧನ ಸಹಾಯ ನೀಡಬೇಕು ಎಂದು ಮತ್ತೆ ಕೇಳಿದ್ದಾನೆ. ಇದಕ್ಕೆ ಉದಯ್  ಒಪ್ಪದ ಕಾರಣ ಹರ್ಷಿತ್ ಕೊಲ್ಲುವ ಬೆದರಿಕೆ ಒಡ್ಡಿದ್ದಾನೆ .ಈ ಬಗ್ಗೆ ಉದಯ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version