Site icon Ullalavani

ಫೆ.11,12ಕ್ಕೆ  ಇರಾ ಮೈದಾನದಲ್ಲಿ
ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಇರಾ ಕಬಡ್ಡಿ-2023  ಮತ್ತು ಸಾಂಸ್ಕೃತಿಕ ಕಲಾ ವೈಭವ

UN networks

ಉಳ್ಳಾಲ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಭಾರತ್ ಫ್ರೆಂಡ್ಸ್ ಕ್ಲಬ್ ಇರಾ ಇದರ ಆಶ್ರಯದಲ್ಲಿ ಬೆಳ್ಳಿಹಬ್ಬದ ಸಂಭ್ರಮಾಚರಣೆಯ ಪ್ರಯುಕ್ತ ಫೆ.11 ಮತ್ತು ಫೆ.12 ರಂದು  ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಇರಾ ಕಬಡ್ಡಿ-2023  ಮತ್ತು ಸಾಂಸ್ಕೃತಿಕ ಕಲಾ ವೈಭವ ಇರಾ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ  ನಡೆಯಲಿದೆ ಎಂದು ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ಸುಖೇಶ್ ಭಂಡಾರಿ ಹೇಳಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ,
ಫೆ.11 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ  ಕರಾವಳಿ ಶಿಕ್ಷಣ ಸಮೂಹ ಸಂಸ್ಥೆಗಳ ಸ್ಥಾಪಕ ಗಣೇಶ್ ರಾವ್, ಶಾಸಕರಾದ ಯು.ಟಿ ಖಾದರ್, ವೇದವ್ಯಾಸ ಕಾಮತ್, ಮಂಜೇಶ್ವರ ಶಾಸಕ ಎ.ಕೆ.ಎಮ್ ಅಶ್ರಫ್, ಪೂನ ಬಂಟರ ಸಂಘದ ಅಧ್ಯಕ್ಷ ರಾಕೇಶ್ ರೈ ಬೆಳ್ಳಾರೆ, ಕೆಪಿಸಿಸಿ ಪ್ರ.ಕಾ ಮಿಥುನ್ ರೈ  ಹಾಗೂ ಇತರೆ ಗಣ್ಯರು ಮತ್ತು ಸಮಾರೋಪ ಸಮಾರಂಭದಲ್ಲಿ ಶ್ರೀದೇವೊ ಎಜ್ಯುಕೇಷನ್ ಟ್ರಸ್ಟ್ ನ ಎ.ಸದಾನಂದ ಶೆಟ್ಟಿ, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ , ಸಂಸದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸುರತ್ಕಲ್ ಶಾಸಕ ವೈ.ಭರತ್ ಶೆಟ್ಟಿ, ರಾಜ್ಯ ಕಬಡ್ಡಿ ಅಸೋಸಿಯೇಷನ್ ಚೇರ್ ಮೆನ್ ರಾಕೇಶ್ ಮಲ್ಲಿ, ಬಂಟರ ಸಂಘ ಮುಂಬೈ ಚೇರ್ ಮೆನ್ ಗಿರೀಶ್ ಶೆಟ್ಟಿ ತೆಳ್ಳಾರು, ಗುಜರಾತ್ ಅಂಕಲೇಶ್ವರ ದ ತುಳು ಸಂಘದ ಅಧ್ಯಕ್ಷ ಶಂಕರ್ ಎ ಶೆಟ್ಟಿ ಮೊದಲಾದ ಗಣ್ಯರು ಭಾಗವಹಿಸಲಿದ್ದು, ಫೆ.12 ರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಚಿಕ್ಕಮಗಳೂರಿನ ಎ>ಡಿಲೈಫ್ ಲೈನ್ ಫೀಡ್ಸ್ ಚೇರ್ ಮೆನ್ ಕಿಶೋರ್ ಕುಮಾರ್ ಹೆಗ್ಡೆ ಚಿಕ್ಕಮಗಳೂರು ಅಧ್ಯಕ್ಷತೆ ವಹಿಸಲಿದ್ದು, ಕೈರಂಗಳ ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕ ಟಿ.ಜಿ ರಾಜಾರಾಮ್ ಭಟ್  ಉದ್ಘಾಟಿಸಲಿದ್ದಾರೆ.ಬೆಳಿಗ್ಗೆ 11.00ಕ್ಕೆ ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಹಾಗೂ ಜನ್ಸಾಲೆ ರಾಘವೇಂದ್ರ ಆಚಾರ್ಯ ಸಾರಥ್ಯದಲ್ಲಿ ಬಡಗು ಮತ್ತು ತೆಂಕು ಶೈಲಿಯ  ಯಕ್ಷಗಾನ ನಾಟ್ಯ ವೈಭವ ಹಾಗೂ ಮಧ್ಯಾಹ್ನ 2 ರಿಂದ ಜಿಲ್ಲೆಯ ಖ್ಯಾತ 10 ತಂಡಗಳಿಂದ ಡ್ಯಾನ್ಸ್ ಇರಾ ಡ್ಯಾನ್ಸ್  ನೃತ್ಯ ಸ್ಪರ್ಧೆ ಜರಗಲಿದೆ ಎಂದರು.
ಸಂಘದ ಸದಸ್ಯ ಸುಪ್ರೀತ್ ಭಂಡಾರಿ ಮಾತನಾಡಿ,  ಬಿಎಫ್‍ಸಿ ಇರಾ ಕಬ್ಬಡ್ಡಿ ತಂಡ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹಲವೆಡೆ ಪ್ರಶಸ್ತಿಗಳನ್ನು ಪಡೆದು ಖ್ಯಾತಿಯನ್ನು ಪಡೆದುಕೊಂಡಿದೆ. ನಿರಂತರ ಸ್ಥಳೀಯ ಯುವಕರ ತಂಡ ಸೇರಿಕೊಂಡು ಕಬ್ಬಡ್ಡಿ ಆಟ ತರಬೇತಿ ಜೊತೆಗೆ ನಿತ್ಯ ಆಟವೂ  ಕ್ಲಬ್ ಮೈದಾನದಲ್ಲಿ ನಡೆಯುತ್ತಿದೆ.  ತಂಡ ಕೇವಲ ಕ್ರೀಡೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ  ಧಾರ್ಮಿಕ ಕ್ಷೇತ್ರಗಳಲ್ಲಿ  ವಿವಿಧ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಕೊರೊನಾ ಸಂದರ್ಭ ಅಶಕ್ತ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ಪೂರೈಸಿರುವ ಹೆಮ್ಮೆಯಿದೆ. ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ  ತಂಡಕ್ಕೆ ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿರುವುದರಿಂದ  ತಂಡದ ಗೌರವ ಹೆಚ್ಚಾಗಿದೆ ಎಂದರು. 
ಸುದ್ದಿಗೋಷ್ಠಿಯಲ್ಲಿ ಬಿಎಫ್ ಸಿ ಇರಾ ಅಧ್ಯಕ್ಷ ಲತೇಶ್ ಕಲ್ಲಾಡಿ, ಕೋಶಾಧಿಕಾರಿ ಗಣೇಶ್ ಶೆಟ್ಟಿ ಮೇಗಿನಬೈಲು, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ರಾಜಶೇಖರ್ ರೈ ಇರಾಗುತ್ತು ಉಪಸ್ಥಿತರಿದ್ದರು.

Exit mobile version