Site icon Ullalavani

ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಗ್ರಾಮೀಣ ಶಿಬಿರದ ಉದ್ಘಾಟನೆ

UN networks

ಉಳ್ಳಾಲ: ಗ್ರಾಮೀಣ ಭಾಗದಲ್ಲಿ ಇಂತಹ ಶಿಬಿರಗಳು ಸಮಯೋಚಿತ. ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾವಾರಿಯು ಅತಿಕ್ಲಿಷ್ಟಕರವಾದದ್ದು; ಈ ಕುರಿತು ಜಾಗೃತಿ ಮೂಡಿಸುವುದರ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಿದೆಯೆಂದು ಜಿಲ್ಲಾ ಆಯುಶ್ ಅಧಿಕಾರಿ ಡಾ| ಮಹಮ್ಮದ್ ಇಕ್ಬಾಲ್ ಅಭಿಪ್ರಾಯಪಟ್ಟರು.
ಅವರು ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ), ಕಿನ್ಯಾ ಪಂಚಾಯತ್ ಸಹಭಾಗಿತ್ವದಲ್ಲಿ ಪಂಚಾಯತ್ ಆವರಣದಲ್ಲಿ  ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳ ಮೂರು ದಿನಗಳ ಗ್ರಾಮೀಣ ಶಿಬಿರದಲ್ಲಿ ಜಾಗೃತಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.  ಕಿನಾ ್ಯಗ್ರಾಮ ಪಂಚಾಯತ್ ಅಧ್ಯಕ್ಷೆ  ಲಕ್ಷೀ ಗ್ರಾಮೀಣ ಶಿಬಿರದ ಭಿತ್ತಿಚಿತ್ರವನ್ನು ಅನಾವರಣಗೊಳಿಸುವುದರ ಮೂಲಕ ಉದ್ಘ್ಘಾಟಿಸಿದರು. ಈ ಸಂದರ್ಭದಲ್ಲಿ ಸಮೂಹ ಜಾಗೃತಿಗಾಗಿ ಗ್ರಾಮ ಪಂಚಾಯತ್ ಹಾಗೂ ಸಮಾಜಕಾರ್ಯ ವಿಭಾಗದ ವತಿಯಿಂದ ಪ್ರಕಟಿಸಲಾದ ಕರಪತ್ರಗಳನ್ನು ಕಿನ್ಯಾ ಜಮಾಅತ್ ಕಮಿಟಿ ಅಧ್ಯಕ್ಷ  ಇಸ್ಮಾಯಿಲ್ ಬಿಡುಗಡೆ ಮಾಡಿದರು.  ಮುಖ್ಯ ಅತಿಥಿಗಳಾಗಿ  ಕಿನ್ಯಾಗ್ರಾ.ಪಂ. ಅಭಿವೃದ್ಧಿ ಅಧಿಕಾರಿ  ವಿಶ್ವನಾಥ್ ಬೈಲಮೂಲೆ , ಗ್ರಾಮೀಣ ಶಿಬಿರದ ಸಂಯೋಜಕರಾದ ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಪಕಿ ಡಾ| ಐರಿನ್ ವೇಗಸ್, ಕಿನ್ಯಾ ಗ್ರಾಮ ಪಂಚಾಯತ್ ಸದಸ್ಯ ನಝೀರ್, ಸಮಾಜ ಕಾರ್ಯ ವಿಭಾಗ ಮುಖ್ಯಸ್ಥ ಡಾ| ಮಹಮ್ಮದ್ ಗುತ್ತಿಗಾರ್ , , ಸಹಪ್ರಧ್ಯಾಪಿಕೆ ಡಾ| ಗ್ಲಾಡೀಸ್ ಕೊಲಾಸೊ, ಪಂಚಾಯತ್ ಉಪಾಧ್ಯಕ್ಷÀ  ಮೈಮುನ, ಗೋಲ್ಡನ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಅಬ್ಬಾಸ್, ಅಲ್ ಅಮೀನ್ ಸಂಸ್ಥೆಯ ಅಧ್ಯಕ್ಷ ಅಬ್ಬಾಸ್, ಉಕ್ಕುಡ ಶಾಲಾ ಅಭಿವೃಧ್ಧಿ ಸಮಿತಿ ಅಧ್ಯಕ್ಷ ಪಿ ಐ ಅಹ್‍ಮದ್ ಬಾವ, ಶೇಕ್ ಮರ್ಕಝ್, ಅಬೂಬಕ್ಕರ್, ಸ್ಥಳೀಯ ಪಂಚಾಯತ್ ಸದಸ್ಯರುಗಳು, ಅಂಗನವಾಡಿಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರುಗಳು ಉಪಸ್ಥಿತರಿದ್ದರು. ನಸ್ರೀನ್  ಸ್ವಾಗತಿಸಿದರು.  ಮೈನಾಝ್ ವಂದಿಸಿದರು.

Exit mobile version