Site icon Ullalavani

`ಕ್ರಿಯೆಗೆ ಪ್ರತಿಕ್ರಿಯೆ ತೋರಿಸಲು ಸಿದ್ಧ’ : ಸಿದ್ದೀಖ್ ತಲಪಾಡಿ
ಟೋಲ್ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಪ್ರತಿಭಟನೆ

UN networks

ಉಳ್ಳಾಲ : ಟೋಲ್ ಸಿಬ್ಬಂದಿ ದೌರ್ಜನ್ಯ ಎಸಗಿರುವುದನ್ನು ತಲಪಾಡಿಯ ನಾಗರಿಕರು ಖಂಡಿಸುತ್ತೇವೆ. ಕಾರಿನಲ್ಲಿ ಕುಟುಂಬ ಸಮೇತ ಇದ್ದ ಮಂದಿಗೆ ಹಲ್ಲೆ ನಡೆಸಿರುವ ವೀಡಿಯೋ ವೈರಲ್ ಆಗಿದೆ. ಕೃತ್ಯಗಳು ಮುಂದುವರಿದಲ್ಲಿ ನಾಗರಿಕರು ಸೇರಿ ನವಯುಗ ಸಂಸ್ಥೆಯ ಸಿಬ್ಬಂದಿಯ ಕ್ರಿಯೆಗೆ ಪ್ರತಿಕ್ರಿಯೆ ನಡೆಸಿಯೇ ಸಿದ್ಧ. ಕೇಸು ದಾಖಲಾದರೂ ಹೆದರುವುದಿಲ್ಲ ಎಂದು ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದೀಖ್ ತಲಪಾಡಿ ಹೇಳಿದರು.
ಅವರು ನವಯುಗ ಕಂಪೆನಿ ಸಿಬ್ಬಂದಿ ಗಳ ಗೂಂಡಾಗಿರಿ ದೌರ್ಜನ್ಯ ವಿರೋಧಿಸಿ ನಾಗರಿಕ ಹಿತರಕ್ಷಣಾ ವೇದಿಕೆ ಕೆಸಿರೋಡ್ ಇದರ ಆಶ್ರಯದಲ್ಲಿ ತಲಪಾಡಿ ಟೋಲ್ ಮುಂದೆ ನಡೆಸಿದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದರು.
ತಲಪಾಡಿ ಟೋಲ್ ನಲ್ಲಿ ಸಾಮಾನ್ಯ ನಾಗರಿಕರ ಮೇಲೆ ನಡೆಯುತ್ತಿರುವ ದೌರ್ಜನ್ಯ ಇಂದು ನಿನ್ನೆಯದಲ್ಲ. ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಕುಟುಂಬ ಸಮೇತರು ಇದ್ದಂತಹ ಕಾರಿನಲ್ಲಿದ್ದ ವ್ಯಕ್ತಿಗೆ ಮಹಿಳೆಯರ ಮುಂದೆಯೇ ಥಳಿಸಿರುವುದು ನಾಗರಿಕ ಸಮಾಜ ಒಪ್ಪುವ ಕೆಲಸವಲ್ಲ. ಕೃತ್ಯ ಮುಂದುವರಿದಲ್ಲಿ ಸಿಬ್ಬಂದಿ ವಿರುದ್ಧ ಪ್ರತಿಕ್ರಿಯೆ ತೀರಿಸಲು ಸಿದ್ಧ. ಕೇಸು ದಾಖಲಾದರೂ ಚಿಂತಿಸುವುದಿಲ್ಲ ಎಂದು ಎಚ್ಚರಿಸಿದರು.
ತಾ.ಪಂ ಮಾಜಿ ಸದಸ್ಯ ಸಿದ್ದೀಕ್ ತಲಪಾಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಅಶ್ರಫ್ ಕೆಸಿರೋಡ್ ಮಾತನಾಡಿ, ಟೋಲ್ ಸಿಬ್ಬಂದಿ ದೌರ್ಜನ್ಯ ಹಲ್ಲೆ ಪ್ರಕರಣ ಖಂಡಿಸಿ ಎಚ್ಚರಿಕೆ ನೀಡಿದರು.
ನಾಗರಿಕ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಾದ ಟಿ.ಎ.ಟಿ.ಖಾದರ್ ತಲಪಾಡಿ, ಬಿ.ಎಸ್ ಇಸ್ಮಾಯಿಲ್, ಗ್ರಾ.ಪಂ.ಸದಸ್ಯ ಅಬ್ದುಲ್ ರಹಿಮಾನ್, ಇಲ್ಯಾಸ್ ಕೆಸಿರೋಡ್, ಫಾರೂಕ್ ಕೊಳಂಗರೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಧರಣಿ ನಿರತರು ಟೋಲ್ ಇನ್ಚಾರ್ಜ್ ಆನಂದ ಅವರಿಗೆ ಮನವಿ ಸಲ್ಲಿಸಿದ್ದರು.ಟೋಲ್ ಸಾರ್ವಜನಿಕ ಸಂಪರ್ಕ ಅಧಿಕಾರಿ ಭಾಸ್ಕರ್ ಶೆಟ್ಟಿ ಉಪಸ್ಥಿತರಿದ್ದರು.

Exit mobile version