Site icon Ullalavani

ಬಾಳೆಪುಣಿ ಬ್ರಹ್ಮಶ್ರೀ ಬಿಲ್ಲವ ವೇದಿಕೆಗೆ
ಕೋಟಿ ಚೆನ್ನಯ ಚಾಂಪಿಯನ್ಸ್ ಟ್ರೋಫಿ

UN networks

ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆಯ 20ನೇ ವರ್ಷದ ಕೋಟಿ ಚೆನ್ನಯ್ಯ ಕ್ರೀಡಾಕೂಟದಲ್ಲಿ ಕೋಟಿ ಚೆನ್ನಯ ಚಾಂಪಿಯನ್ಸ್ ಟ್ರೋಫಿಯನ್ನು ಬಾಳೆಪುಣಿ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಪಡೆದುಕೊಂಡಿತು.
ತೊಕ್ಕೊಟ್ಟು ಚೆಂಬುಗುಡ್ಡೆಯ ಮಂಗಳೂರು ಎ-1 ಶಾಲಾ ಕ್ರೀಡಾಂಗಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾರತ ಸರ್ಕಾರದ ಸಣ್ಣ ಕೈಗಾರಿಕಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಉದಯಚಂದ್ರ ಡಿ.ಸುವರ್ಣ ಚಾಂಪಿನ್ಶಿಪ್ ಅನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿ ಶಿಲ್ಪಾಶ್ರೀ ಇವರನ್ನು ಅಭಿನಂದಿಸಲಾಯಿತು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಾಧವ ಮಾವೆ, ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ದಾಸ್ ಪ್ರಮೋಟರ್ಸ್ ನ ಮಾಲಕರಾದ ಅನಿಲ್ ದಾಸ್,ಮೆಸ್ಕಾಂ ನ ಕಿರಿಯ ಅಭಿಯಂತರರಾದ ನಿತೇಶ್ ಎಚ್. ಉದ್ಯಮಿಗಳಾದ ಸದಾನಂದ ಪೂಜಾರಿ, ಗಣೇಶ್ ಕೊಲ್ಯ, ದೀಪ ಕಂಫರ್ಟ್ ನ ಪಾಲುದಾರರಾದ ರಯೀಸ್ ಅಮೀನ್, ವೇದಿಕೆಯ ಗೌರವ ಸಲಹೆಗಾರ ಚಂದ್ರಶೇಖರ ಉಚ್ಚಿಲ್, ಉಪಸ್ಥಿತರಿದ್ದರು. ಇದೇ ಸಂದರ್ಭ ಕೂಟದ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಕ್ರೀಡಾಕೂಟದ ಸಂದರ್ಭದಲ್ಲಿ ಕಿಯೋನಿಕ್ಸ್ ನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿ.ಜೆ.ಪಿ.ಮಂಗಳೂರು ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಚೀರುಂಭ ಭಗವತಿ ತೀಯಾ ಸಮಾಜ ಉಳ್ಳಾಲ ಇದರ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನದ ಆಡಳಿತ ಮೋಕ್ತೇಸರ ಚಂದ್ರಹಾಸ ಅಡ್ಯಾಂತಾಯ, ಸೀತರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಜಾÐನರತ್ನ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ಆಡಳಿತ ನಿರ್ದೇಶಕ ಭಾಸ್ಕರ ದೇವಸ್ಯ, ಮೊಗವೀರ ಸಂಘ ಉಳ್ಳಾಲದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಪ್ರವೀಣ್ ಕುಮಾರ್, ಕೊಲ್ಯ ಬಿಲ್ಲವ ಸಂಘದ ಈಶ್ವರ ಕನೀರ್ ತೋಟ, ಇತರ ಗಣ್ಯರು ಆಗಮಿಸಿ ಶುಭ ಹಾರೈಸಿದರು.
ದಿನೇಶ್ ರಾಯಿ ನಿರೂಪಿಸಿದರು. ವೇದಿಕೆ ಅಧ್ಯಕ್ಷ ಕೆ.ಟಿ ಸುವರ್ಣ ಸ್ವಾಗತಿಸಿದರು. ಹರೀಶ್ ಮುಂಡೋಳಿ ವಂದಿಸಿದರು. ಜೀವನ್ ಕುಮಾರ್ ತೊಕ್ಕೊಟ್ಟು ವಿಜೇತರ ವಿವರ ನೀಡಿದರು.

Exit mobile version