Site icon Ullalavani

ಖಾದರ್ ಅವರೇ ಮುಂದಿನ ಶಾಸಕರು: ಮಮತಾ ಡಿ ಯಸ್ ಗಟ್ಟಿ

UN networks
ಅಂಕದಕಳ-ತೋಟಾಲು ಮಸೀದಿ ರಸ್ತೆಗೆ ಶಿಲನ್ಯಾಸ
ಉಳ್ಳಾಲ: ಮಂಗಳೂರು ಕ್ಷೇತ್ರದುದ್ದಕ್ಕೂ ಅಭಿವೃದ್ಧಿಯ ಪತಾಕೆಯನ್ನು ತೋರಿಸಿದ ಶಾಸಕ ಯು.ಟಿ ಖಾದರ್ ಅವರೇ ಮುಂದಿನ ಚುನಾವಣೆಯಲ್ಲಿ ಜಯಭೇರಿ ಬಾರಿಸಲಿದ್ದಾರೆ ಎಂದು ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ .ಯಸ್ ಗಟ್ಟಿ ಹೇಳಿದರು.
ಅವರು ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕದಕಳ ತಿರುವು ಹಾಗೂ ತೋಟಾಲು ಮಸೀದಿ ರಸ್ತೆ ನವೀಕರಣದ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ಗ್ರಾಮದ ಹಲವು ವರ್ಷಗಳ ಬೇಡಿಕೆಯನ್ನು ಮನಗಂಡು ಶಾಸಕರು ಅನುದಾನ ಬಿಡುಗಡೆಗೊಳಿಸಿರುವುದು ಅಭಿನಂದನಾರ್ಹ. ಮಂಗಳೂರು ಕ್ಷೇತ್ರದುದ್ದಕ್ಕೂ ಸರಕಾರಿ ಶಾಲೆಗಳ ಅಭಿವೃದ್ಧಿ , ರಸ್ತೆ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿಕೊಟ್ಟಿದ್ದಾರೆ. ಕ್ಷೇತ್ರದ ಜನತೆ ಭಾಗ್ಯವಂತರು ಶಾಂತಿಯುತವಾಗಿ ಕ್ಷೇತ್ರ ಅಭಿವೃದ್ಧಿಯನ್ನು ಕಾಣುತ್ತಿದೆ. ಮುಂದಿನ ಚುನಾವಣೆಯಲ್ಲೂ ಅವರೇ ಅತ್ಯಧಿಕ ಮತಗಳನ್ನು ಪಡೆದು ಜಯಭೇರಿ ಬಾರಿಸಲಿದ್ದಾರೆ ಎಂದರು.
ಈ ಸಂದರ್ಭ ಬಂಟ್ವಾಳ ತಾ.ಪಂ ಮಾಜಿ ಅಧ್ಯಕ್ಷ ಚಂದ್ರಹಾಸ್ ಆರ್ ಕರ್ಕೇರ, ಬಾಳೆಪುಣಿ ಗ್ರಾ.ಪಂ ಅಧ್ಯಕ್ಷ ರಝಿಯಾ, ಬಾಳೆಪುಣಿ ಸದಸ್ಯರುಗಳಾದ ಜನಾರ್ದನ ಗಟ್ಟಿ, ಜನಾರ್ದನ ಕುಲಾಲ್, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರ.ಕಾ ಅಬ್ದುಲ್ ಜಲೀಲ್ ಮೋಂಟುಗೋಳಿ, ಉಪಾಧ್ಯಕ್ಷ ಅಬ್ದುಲ್ ನಾಸಿರ್ ನಡುಪದವು, ಸದಸ್ಯರಾದ ಅಬ್ದುಲ್ ರಹಿಮಾನ್ ದೋಟ, ಶರೀಫ್ ಸಿ.ಎಂ ಪಟ್ಟೋರಿ, ಜಮಾಅತ್ ಅಧ್ಯಕ್ಷ ಮೂಸ ಕುಂಞÂ ಪಾರೆ, ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞÂ, ಅರುಣ್ ಡಿಸೋಜ, ಜಮಾಅತ್ ಖತೀಬರಾದ ಮೊಯ್ದೀನ್ ಶಾಜಿ,ಮುಅಲಿಂರಾದ ಹಬೀಬ್ ಮುಸ್ಲಿಯಾರ್ , ದೇವಪ್ಪ, ಶರೀಫ್ ಉಪಸ್ಥಿತರಿದ್ದರು.
ತಾ.ಪಂ ಮಾಜಿ ಸದಸ್ಯ ಹೈದರ್ ಕೈರಂಗಳ ನಿರೂಪಿಸಿದರು.

Exit mobile version