UN networks
ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಬಾಳೆಪುಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೈರಂಗಳ ಗ್ರಾಮದ ಮೋಂಟುಗೋಳಿಯಲ್ಲಿ ನೂತನ ಆಟೋ ರಿಕ್ಷಾ ಪಾರ್ಕ್ ಹಾಗೂ ಸಂತೆ ಮಾರುಕಟ್ಟೆಗೆ ಜಿ.ಪಂ. ಮಾಜಿ ಅಧ್ಯಕ್ಷೆ, ನಿಕಟಪೂರ್ವ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಶಿಲಾನ್ಯಾಸಗೈದರು.
ಬಳಿಕ ಮಾತನಾಡಿ ಮೋಂಟುಗೋಳಿ ಸೈಟ್ ಪ್ರದೇಶದಲ್ಲಿ ಶಾಸಕರು ಕುಡಿಯುವ ನೀರಿನ ಸಮಸ್ಯೆಗೆ ೫೦ಸಾವಿರ ಲೀ. ಸಾಮರ್ಥ್ಯದ ನೀರಿನ ಟಾಂಕಿ ನಿರ್ಮಿಸಿ ಕೊಟ್ಟಿದ್ದಾರೆ. ಬೋರ್ ವೆಲ್ ಪೈಪ್ ಲೈನ್ ನಿರ್ಮಾಣವೂ ನಡೆದಿದೆ. ನೂತನ ಆಟೋ ರಿಕ್ಣಾ ಪಾರ್ಕ್ ಸಂತೆ ಮಾರುಕಟ್ಟೆ ಅಭಿವೃದ್ಧಿಯ ಸಂಕೇತವಾಗಲಿದೆ ಎಂದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಝಿಯಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೈದರ್ ಕೈರಂಗಳ, ಅರುಣ್ ಡಿಸೋಜ, ಅಹಿಂದ ಜಿಲ್ಲಾಧ್ಯಕ್ಷ ಪದ್ಮನಾಭ ನರಿಂಗಾನ ಹಾಗೂ ಬಾಳೆಪುಣಿ ಗ್ರಾ.ಪಂ. ಸದಸ್ಯರು ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
