Site icon Ullalavani

ಉಳ್ಳಾಲ ವೀರರಾಣಿಅಬ್ಬಕ್ಕಉತ್ಸವ೨೦೨೨ರ ಆಮಂತ್ರಣ ಪತ್ರಿಕೆ ಬಿಡುಗಡೆ

UN networks

ಉಳ್ಳಾಲ: ೧೯೯೭ರಲ್ಲಿ ಪ್ರಾರಂಭವಾದ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಪ್ರತಿವರ್ಷ ವಿಜೃಂಭಣೆಯಿAದ ವೀರರಾಣಿ ಅಬ್ಬಕ್ಕ ಉತ್ಸವವನ್ನು ಆಚರಿಸುತ್ತಾ ಬಂದಿದ್ದು ಈ ಸಲ ಫೆಬ್ರವರಿ ೪, ೨೦೨೩ರಂದು ನಡೆಯುವ ಉತ್ಸವದಲ್ಲೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಮಾಜಿ ಶಾಸಕ ಹಾಗೂ ಸ್ವಾಗತಾಧ್ಯಕ್ಷ ಕೆ.ಜಯರಾಮ ಶೆಟ್ಟಿ ಹೇಳಿದರು.
ಅವರು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನಡೆಯುವ’೨೦೨೨-೨೩ರ ವೀರರಾಣಿ ಅಬ್ಬಕ್ಕ ಉತ್ಸವ’ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನಗುರಿಕಾರರಾದ ಮಂಜಪ್ಪಕಾರ್ನವರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಕಾರ್ಯದರ್ಶಿ ಡಿ.ಎನ್.ರಾಘುವ, ಎಂ.ವಾಸುದೇವರಾವ್, ಸತೀಶ್ ಭಂಡಾರಿ, ಭಾಸ್ಕರ, ರತ್ನಾವತಿ ಜೆ ಬೈಕಾಡಿ, ಶಶಿಕಲಾ ಗಟ್ಟಿ, ಅನುಪಮ ಸಿ, ಹೇಮಾಯು, ವಾಣಿ ಲೋಕಯ್ಯ, ಕ್ಲೇರಾ ಕುವೆಲ್ಲೊ, ಮಾಧವಿ ಉಳ್ಳಾಲ್, ಸತ್ಯವತಿಜೆ.ಕೆ, ದೇವಕಿಯು ಬೋಳಾರ್, ಸುಷ್ಮಾಜನಾರ್ಧನ್, ರಾಜೀವಿ ಕೆಂಪು ಮಣ್ಣು, ಸೇವಂತಿ ಶ್ರೀಯಾನ್, ಲತಾ ಶೀಧರ್, ಸುಮಂಗಲ ಸಿ ಕೋಟ್ಯಾನ್, ಭಾನುಮತಿ, ಮಲ್ಲಿಕಾ ಉಳ್ಳಾಲ್‌ಬೈಲ್, ಸ್ವಪ್ನ ಶೆಟ್ಟಿ, ಸುಜಾತ ಮುಂತಾದವರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಧನಲಕ್ಷಿö್ಮಗಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಆನಂದ ಕೆ ಅಸೈಗೋಳಿ ವಂದಿಸಿದರು.

Exit mobile version