Site icon Ullalavani

ಜ್ಯೋತಿ-ಬಲ್ಮಠದಲ್ಲಿ
`ಝಾಯ್ದ್ಸ್  ಆಜ್ವಾ’ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

UN NEWS NETWORKS
ಮಂಗಳೂರು: ಝಾಯ್ದ್ಸ್  ಅಜ್ವಾ  ಫ್ಯಾಮಿಲಿ ರೆಸ್ಟೋರೆಂಟ್ ಜ್ಯೋತಿ ಬಲ್ಮಠದ ಸರಸ್ವತಿ ಕಟ್ಟಡದ ಕೆಳ ಅಂತಸ್ತಿನಲ್ಲಿ  ಶುಭಾರಂಭಗೊಂಡಿತು.


ಕರ್ನಾಟಕ ಥಿಯಾಲಾಜಿಕಲ್  ಕಾಲೇಜು ಪ್ರಾಂಶುಪಾಲ ರೆ| ಡಾ.ಹೆಚ್.ಎಂ. ವ್ಯಾಟ್ಸನ್ ,  ಫೌಝಿ ಜುಮಾ ಮಸೀದಿ ಖತೀಬರಾದ   ಅಬ್ದುಲ್ ವಫಾ ಕೆ.ಕೆ ಮುಸ್ಲಿಯಾರ್  , ಕ್ವಾಲಿಟಿ ಗ್ರೂಪ್ ಆಫ್ ಹೊಟೇಲ್ಸ್ ಹಾಗೂ  ಶ್ರೀ ದೇವಿ ಎಜ್ಯುಕೇಷನ್ ಟ್ರಸ್ಟ್  ಚೇರ್ ಮೆನ್ ಎ.ಸದಾನಂದ ಶೆಟ್ಟಿ  ಉದ್ಘಾಟಿಸಿದರು.
`ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡಿ, ಆರೋಗ್ಯಯುತವಾದ ಆಹಾರವನ್ನು ಒದಗಿಸಿರುವ ಯಾಸೀರ್ ತಂಡ ಇನ್ನೊಂದು ರೆಸ್ಟೋರೆಂಟ್ ಆರಂಭಿಸಲು ಸಾಧ್ಯವಾಗಿದೆ. ಇವರ ಉದ್ಯಮ ಇನ್ನಷ್ಟು ಯಶಸ್ಸಿನತ್ತ ಸಾಗಲಿ’  ಎಂದು ಫೌಝಿ ಜುಮಾ ಮಸೀದಿ ಖತೀಬರಾದ   ಅಬ್ದುಲ್ ವಫಾ ಕೆ.ಕೆ ಮುಸ್ಲಿಯಾರ್  ಶುಭಹಾರೈಸಿದರು.
`ಬಲ್ಮಠದ ಕ್ಯಾಂಪಸ್ಸಿನಲ್ಲಿ ಹೊಸ ಹೊಟೇಲಿನ ಶುಭಾರಂಭವಾಗಿದೆ. ಮಂಗಳೂರಿನ ನಾಗರಿಕರಿಗೆ ಶುಚಿಯಾದ, ರುಚಿಯಾದ ಉತ್ತಮ ಬೆಲೆಯಲ್ಲಿ  ಕೊಡುವ ಕೇಂದ್ರವಾಗಲಿ. ಎಲ್ಲರಿಗೂ ಸಂತೃಪ್ತಿಯಾಗಿ ಹೊಟೇಲ್ ಇನ್ನಷ್ಟು ಬೆಳೆಯಲಿ ಎಂದು ರೆ| ಡಾ.ಹೆಚ್.ಎಂ. ವ್ಯಾಟ್ಸನ್ ಶುಭಹಾರೈಸಿದರು.
ಉದ್ಯಮಿ ಎ.ಸದಾನಂದ ಶೆಟ್ಟಿ ಮಾತನಾಡಿ,  ವ್ಯಾಪಾರ ಮಾಡುವಾಗ ದೈವಬಲ ಮತ್ತು ಮನೋಸ್ಥೈರ್ಯ ಇರಬೇಕು. ಲಾಭವಾದಾಗ ಅಹಂಕಾರ ಪಡೆಯದೆ, ನಷ್ಟವಾದಾಗ ಧೈರ್ಯ ಕೆಡದೆ ಜನಸಾಮಾನ್ಯರೊಡನೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಹೋದಲ್ಲಿ ಯಾವುದೇ ವ್ಯಾಪಾರ ಯಶಸ್ಸಾಗಲು ಸಾಧ್ಯ. ಮಾಲೀಕರಾದ ಯಾಸೀರ್ ಅರಾಫತ್ ಮತ್ತು ಲತೀಫ್ ಬಜಾಲ್ ಇಬ್ರಿಗೆ  ಆಸಕ್ತಿಯೂ, ಅನುಭವವೂ ಇರುವುದರಿಂದ  ವ್ಯಾಪಾರ ಕಷ್ಟವಾಗುವುದಿಲ್ಲ. ಇಂದು ಉದ್ಘಾಟನೆಗೊಂಡ ಹೊಟೇಲ್ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಹರಸಿದರು.
ಚಾರ್ಟೆರ್ಡ್ ಅಕೌಂಟೆಂಟ್ ಅಬ್ದುಲ್ ಸಮದ್   ಮಾತನಾಡಿ, ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ದೊಡ್ಡ ಉದ್ಯಮ ಆರಂಭಿಸಲು ಸಾಧ್ಯವಾಗಿದೆ. ಗುಣಮಟ್ಟವನ್ನು ಕಾಪಾಡಿಕೊಂಡಲ್ಲಿ  ವ್ಯಾಪಾರದಲ್ಲಿ ಯಶಸ್ಸು ಖಂಡಿತ ಎಂದರು.  

                                                                                           
ಕಾರ್ಯಕ್ರಮದಲ್ಲಿ ಇಂಟೀರಿಯರ್ ಡಿಸೈನರ್ ಶಮ್ಮೀ ಸನ್ಮತ್ ಮೇಲಾಂಟ, ಕಣಚೂರು ಆಸ್ಪತ್ರೆಯ ಆಡಳಿತಾಧಿಕಾರಿ  ಡಾ| ರೋಹನ್ ಎಸ್ ಮೋನಿಸ್ , ಗೈನಾಕಾಲಜಿಸ್ಟ್ ಡಾ| ಹೇಮಾ ಮಲ್ಯ , ಮನಪಾ ಸದಸ್ಯ ನವೀನ್ ಡಿಸೋಜ, ಪಾಲುದಾರರಾದ  ಯಾಸಿರ್ ಅರಾಫತ್ ಹಾಗೂ  ಆಸಿಫ್ ಬಜಾಲ್ ಉಪಸ್ಥಿತರಿದ್ದರು.

ಚೈನೀಸ್, ಗ್ರಿಲ್, ಆಲ್ಫಾಮ್, ತಂದೂರಿ, ಇಟೆಲಿಯನ್, ಇಂಡಿಯನ್ ವಿವಿಧ ಖಾದ್ಯಗಳನ್ನು ಒಳಗೊಂಡ ರೆಸ್ಟೋರೆಂಟ್ ಇದಾಗಿದೆ.   ಪರಿಣತ  ಕುಕ್ ಹಾಗೂ ತಂಡವನ್ನು ಹೊಂದಿರುವ ಸಂಸ್ಥೆ ಎರಡು ಮಹಡಿಗಳನ್ನು ಹೊಂದಿದೆ.   ಉತ್ತಮ ಸ್ಥಳಾವಕಾಶದ ಜೊತೆಗೆ ಉತ್ತಮವಾದ ಖಾದ್ಯಗಳು  ರೆಸ್ಟೋರೆಂಟ್ ನಲ್ಲಿ ದೊರೆಯಲಿದೆ.
ಆಸಿಫ್ ಬಜಾಲ್
ಮಾಲೀಕರು

Exit mobile version