UN networks
ಉಳ್ಳಾಲ: ಪ್ರಸವಪೂರ್ವ ರೋಗನಿರ್ಣಯ, ಭ್ರೂಣದ ವೈಪರೀತ್ಯಗಳ ಅರಿವು ಕುರಿತು ವೈದ್ಯರಲ್ಲಿ ಜಾಗೃತಿ ಮೂಡಿಸಲು ಕಾರ್ಯಗಾರ ಅನುಕೂಲ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಾಧಿಪತಿ ಡಾ| ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಕೆ ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ರೇಡಿಯೋ ಡಯಾಗ್ನೋಸಿಸ್ ವಿಭಾಗ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗವು ಸೊಸೈಟಿ ಆಫ್ ಫೀಟಲ್ ಮೆಡಿಸಿನ್ ಕರ್ನಾಟಕ ಚಾಪ್ಟರ್ ನ ಸಹಯೋಗದೊಂದಿಗೆಫೆಟಲ್ ಮೆಡಿಸಿನ್ ಅಪ್‍ಡೇಟ್ -ಬೇಸಿಕ್ಸ್ ಮತ್ತು ಅದರಾಚೆ’ ವಿಚಾರಗಳ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ದೇರಳಕಟ್ಟೆ ಕ್ಷೇಮ ಆಸ್ಪತ್ರೆ ಆವಿಷ್ಕಾರ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕ್ಷೇಮ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದ ಡಾ| ಸುಪ್ರಿಯಾ ರೈ ಅಧ್ಯಕ್ಷತೆ ವಹಿಸಿದ್ದರು. ಕ್ಷೇಮ ಡೀನ್ ಡಾ| ಪ್ರಕಾಶ್, ವೈದ್ಯಕೀಯ ಅಧೀಕ್ಷಕಿ ಡಾ| ಸುಮಲತಾ ಆರ್ ಶೆಟ್ಟಿ, ರೇಡಿಯಾಲಜಿ ವಿಭಾಗ ಮುಖ್ಯಸ್ಥ ಡಾ| ರಘುರಾಜ್ , ಫೀಟಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ| ನಿರೀಕ್ಷಾ ಶೆಟ್ಟಿ, ಡಾ| ಲಕ್ಷ್ಮೀ ಮಂಝೀರಾ, ಸೊಸೈಟಿ ಆಫ್ ಫೀಟಲ್ ಮೆಡಿಸಿನ್ ಕರ್ನಾಟಕ ಚಾಪ್ಟರ್ ಅಧ್ಯಕ್ಷೆ ಡಾ| ಆದಿನಾರಾಯಣ ಮಕಾಂ ಉಪಸ್ಥಿತರಿದ್ದರು.
ಕ್ಷೇಮ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡ ನಿರಂತರ ಕಲಿಕಾ ಶಿಕ್ಷಣ ಕಾರ್ಯಗಾರಕ್ಕೆ ಡಾ| ಎಂ.ಶಾಂತಾರಾಮ ಶೆಟ್ಟಿ ಉದ್ಘಾಟಿಸಿ ಮಾತನಾಡಿದರು.
