Site icon Ullalavani

ಗಾಂಧಿನಗರ ಪುನರ್ ನಿರ್ಮಾಣ ಹಂತದ
ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಕಾಮಗಾರಿ ವೀಕ್ಷಿಸಿದ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್

UN networks

ಉಳ್ಳಾಲ: ಭಾಷೆ, ಪ್ರದೇಶ ಬೇರೆ ಇರಬಹದು, ಆರಾಧನೆಗಳು ಒಂದೇ. ತೊಕ್ಕೊಟ್ಟು ಬಬ್ಬುಸ್ವಾಮಿ ದೈವದ ಎಲ್ಲಾ ರೀತಿಯ ಸೇವೆಗೂ ನಾನು ಬದ್ಧ, ದೈವಸ್ಥಾನದ ಅಭಿವೃದ್ಧಿಗೆ ಸಹಕಾರ ಸದಾ ಕೊಡುತ್ತೇವೆ ಎಂದು ರಾಜ್ಯ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

ಅವರು ತೊಕ್ಕೊಟ್ಟು ಕಾಪಿಕಾಡು ಗಾಂಧಿನಗರದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು.
ಘಟ್ಟದ ಮೇಲೆ ಬಯಲುಸೀಮೆಯವರು ಆದರೂ ಆರಾಧನೆಗಳು ಒಂದೇ. ದೈವಸ್ಥಾನದ ಅಭಿವೃದ್ಧಿಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಜೊತೆಗೆ ಕಾಂಗ್ರೆಸ್ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಬಂದಿದೆ. ಮುಂದೆಯೂ ಸರಕಾರ ಅಸ್ತಿತ್ವಕ್ಕೆ ಬಂದಲ್ಲಿ ಹಲವು ಯೋಜನೆಗಳನ್ನು ಇರಿಸಲಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಅದನ್ನು ಪ್ರಚಾರ ಪಡಿಸಲಾಗುವುದು ಎಂದರು.

ಈ ಸಂದರ್ಭ ಕೆಪಿಸಿಸಿ ಕಾರ್ಯದರ್ಶಿ ಭಗವಾನ್ ಶ್ರೀ ಬಬ್ಬುಸ್ವಾಮಿ ಸೇವಾ ಟ್ರಸ್ಟ್ ಗುರಿಕಾರರುಗಳಾದ ಚಂದ್ರಹಾಸ್, ಗಂಗಾಧರ್ ಎಸ್. ಉಮೇಶ್ ಅಮೀನ್ , ಕೆಪಿಸಿಸಿಯ ಪೆÇ್ರ.ರಾಧಾಕೃಷ್ಣ, ಕೆಪಿಸಿಸಿ ಸೆಕ್ರೆಟರಿಗಳಾದ ಹುಸೈನ್, ಜಿ.ಎ ಬಾವಾ, ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ.ಆರ್ ಲೋಬೊ, ಮುಖಂಡರುಗಳಾದ ಟಿ.ಕೆ. ಸುಧೀರ್, ಡಾ| ಅಭಿಲಾಷ್
, ನಾಗೇಶ್ ಕೋಟ್ಯಾನ್, ಸುನೀಲ್ ಕೋಟ್ಯಾನ್, ಕ್ಷೇತ್ರ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ , ತೇಜಾಕ್ಷಿ ಯು. ಸವಿತಾ, ಭವಿತ್ ಬಂಗೇರ ಉಪಸ್ಥಿತರಿದ್ದರು.
ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾರ್ಯಾಧ್ಯಕ್ಷ ಮುರಳೀಧರ್ ಸಾಲ್ಯಾನ್ ಸ್ವಾಗತಿಸಿದರು. ದೈವಸ್ಥಾನ ಸಮಿತಿಯ ಕಾರ್ಯದರ್ಶಿ ಪವನ್ ಕುಮಾರ್ ಜೆ.ಪಿ ನಿರೂಪಿಸಿದರು.

Exit mobile version