Site icon Ullalavani

ಟೈಲರ್ಸ್ ಅಸೋಸಿಯೇಷನ್ ಪಜೀರು, ಉಳ್ಳಾಲ ತಾಲೂಕು ಪತ್ರಕರ್ತರ ಸಂಘ , ಯೆನೆಪೋಯ ಸಂಸ್ಥೆ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ಮಾರ್ಟ್ ಕಾರ್ಡ್ ವಿತರಣೆ

UN NEWS NETWORKS

ಉಳ್ಳಾಲ: ಟೈಲರ್ಸ್‍ಗಳು ಆರೋಗ್ಯ ಸೇರಿದಂತೆ ಹಲವಾರು ಬೇಡಿಕೆಗಳಿಂದ ವಂಚಿತವಾಗಿದ್ದು, ಸಂಘಟನೆಯ ಮೂಲಕ ಈ ಬೇಡಿಕೆಯನ್ನು ಈಡೇರಿಸಲು ಸತತ ಪ್ರಯತ್ನ ನಡೆಸುತ್ತಿದ್ದು, ಕೆಲವು ಬೇಡಿಕೆಗಳು ಈಡೇರಿದರೂ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರಕಾರ ಸಮ್ಮತಿ ಸೂಚಿಸಿದೆ. ಗ್ರಾಮ ಮಟ್ಟದಲ್ಲಿ ಸಂಘ ಸಂಘಟಿತವಾದರೆ ಮುಂದಿನ ದಿ£ಗಳಲ್ಲಿ ಸರಕಾರದ ಸವಲತ್ತುಗಳು ಮತ್ತು ನಮ್ಮ ಬೇಡಿಕೆಗಳನ್ನು ಪಡೆಯಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್‍ನ ದ.ಕ.ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ ಅಭಿಪ್ರಾಯಪಟ್ಟರು.

ಕೊಣಾಜೆ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ, ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಪಜೀರು ವಲಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕ ಇವರ ಜಂಟಿ ಆಶ್ರಯದಲ್ಲಿ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೇನೆಪೆÇಯ ಪರಿಗಣಿತ ವಿಶ್ವವಿದ್ಯಾನಿಲಯ ದೇರಳಕಟ್ಟೆ ಮಂಗಳೂರು ಇವರ ನೇತೃತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಟೈಲರ್ಸ್ ಸಂಘದ ಸದಸ್ಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಮಾತನಾಡಿ ನಮ್ಮ ¨ಲೀಡಿಕೆಯ ಈಡೇರಿಕೆಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿದ್ದು, ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಮುಂದಿನ ಚುನಾವಣೆ ಘೋಷಣೆಯ ಮೊದಲು ಜಿಲ್ಲಾ ಮಟ್ಟದಲ್ಲಿ ನಡೆಯುವ ಸಮಾವೇಶಕ್ಕೆ ಜನಪ್ರತಿನಿಧಿಗಳನ್ನು ಕರೆಸಿ ಆ ಮೂಲಕ ನಮ್ಮ ಸಮಸ್ಯೆಗಳನ್ನು ಅವರ ಮುಂದಿಟ್ಟು ಬೇಡಿಕೆಗಳನ್ನು ಈಡೇರಿಸಲು ಸಾಧ್ಯ ಎಂದ ಅವರು ಇತ್ತೀಚೆಗೆ ದುರ್ಘಟನೆಯಲ್ಲಿ ನಿಧನರಾದ ಟೈಲರ್ಸ್ ಕುಟುಂಬಕ್ಕೆ ಜಲ್ಲಾ ಮಟ್ಟದಲ್ಲಿ ಸುಮಾರು 2.30 ಲಕ್ಷ ರೂ ನಗದು ಸಂಗ್ರಹ ಮಾಡಿ ನೀಡಿದ್ದು, ಇದು ಸಂಘಟಿತರಾಗಿ ಕಾರ್ಯ ನಿರ್ವಹಿಸಿದ್ದರಿಂದ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಪಜೀರು ವಲಯ ಅಧ್ಯಕ್ಷ ಜಾರ್ಜ್ ಡಿ.ಸೋಜ ವಹಿಸಿ ಮಾತನಾಡಿ ಟೈಲರ್ಸ್‍ಗಳಿಗೆ ಸರಕಾರದಿಂದ ಬರುವ ಯೋಜನೆಗಳನ್ನು ಪಡೆದುಕೊಳ್ಳಲು ಬೇಕಾದ ದಾಖಲೆಗಳು, ಸ್ಮಾರ್ಟ್ ಕಾರ್ಡ್ ಪ್ರತೀ ಸದಸ್ಯರು ಮಾಡ¨ಲೀಕು ಎಂದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಪತ್ರಕರ್ತ ವಸಂತ್ ಎನ್ ಕೊಣಾಜೆ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಟೈಲರ್ ಸಂಘದ ಜೊತೆಗೆ ಪತ್ರಕರ್ತರ ಸಂಘ ಸದಾ ಇದೆ. ಉಳ್ಳಾಲ ತಾಲೂಕು ಟೈಲರ್ಸ್‍ಗಳ ಸಮಸ್ಯೆಗಳಿಗೆ ಪತ್ರಕರ್ತರ ಸಂಘ ಅಧಿಕಾರಿಗಳ ಜೊತೆಗೆ ಸಮಾಲೋಚನೆಯನ್ನು ಮುಂದಿನ ದಿನಗಳಲ್ಲಿ ಇಡಲು ಚಿಂತನೆ ನಡೆಸಿದೆ. ಸಾಮಾಜಿಕ ಕಾಳಜಿಯೊಂದಿಗೆ ಸಂಘ ಮುಂದಿನ ದಿನಗಳಲ್ಲಿ ಕಾರ್ಯಾಚರಿಸಲಿದ್ದು, ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಅಗತ್ಯ ಎಂದರು.
ಯೇನೆಪೆÇಯ ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ| ಅಜಿತ್ ಆರೋಗ್ಯ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಉಳ್ಳಾಲ ಕ್ಷೇತ್ರ ಅಧ್ಯಕ್ಷ ಜಯಲಾಕ್ಷ ಕೋಟ್ಯಾನ್, ಜಿಲ್ಲಾ ಕೋಶಾ?ಕಾರಿ ಈಶ್ವರ ಕುಲಾಲ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಇದರ ಅಧ್ಯಕ್ಷ ಚಂದ್ರಹಾಸ ಅಮೀನ್, ಯೇನೆಪೆÇಯ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರದ ವೈದ್ಯಾ?ಕಾರಿ ಡಾ| ಸೀರಸ್, ಪಜೀರು ವಲಯ ಕಾರ್ಯದರ್ಶಿ ಸೌಮ್ಯ, ಸಂಘಟನಾ ಕಾರ್ಯದರ್ಶಿಗಳಾದ ನಾಗಪ್ಪ ಬೋಳಿಯಾರ್, ರೇಖಾ ಪಾವೂರು, ಉಪಾಧ್ಯಕ್ಷ ಹು¸ಲೀನ್ ಹರೇಕಳ, ಸಿರಾಜ್ ಗ್ರಾಮಚಾವಡಿ, ನೋಣಯ್ಯ ಪಜೀರು ಉಪಸ್ಥಿತರಿದ್ದರು.
ಜಿಲ್ಲಾ ಜೊತೆ ಕಾರ್ಯದರ್ಶಿ ಸುಜಾತ ಆರ್. ಭಂಡಾರಿ ಸ್ವಾಗತಿಸಿದರು. ಉಳ್ಳಾಲ ಕ್ಷೇತ್ರ ಸದಸ್ಯ ನಾರಾಯಣ ಬೀಜಗುರಿ ಕಾರ್ಯಕ್ರಮ ನಿರ್ವಹಿಸಿದರು. ಪಜೀರು ವಲಯ ಕೋಶಾ?ಕಾರಿ ಆಸ್ಟಿನ್ ಕುಟಿನ್ಹೊ ವಂದಿಸಿದರು.

Exit mobile version