Site icon Ullalavani

ತೊಕ್ಕೊಟ್ಟುವಿನಲ್ಲಿ ಕಲಾಂಗೆ ಅಂತಿಮ ಸಲಾಂ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ತೊಕ್ಕೊಟ್ಟು: ದೇಶದ 11ನೇ ರಾಷ್ಟ್ರಪತಿಯಾಗಿ, ವಿಶ್ವದಲ್ಲಿ ಖ್ಯಾತಿ ಗಳಿಸಿದ ವಿಜ್ಞಾನಿ ಮಿಸೈಲ್ ಮ್ಯಾನ್ (ಕ್ಷಿಪಣಿ ಮನುಷ್ಯ) ಡಾ. ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ(84) ಅವರಿಗೆ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

 

 

ಈ ಸಂದರ್ಭ ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡರುಗಳಾದ ಸೀತಾರಾಮ ಬಂಗೇರ, ಬಾಬು ಬಂಗೇರ, ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಸಂಜೀವ ಶೆಟ್ಟಿ ಅಂಬ್ಲಮೊಗರು, ರವಿ ರೈ ಪಜೀರು, ಪ್ರಶಾಂತ್ ಚೌಟ, ಯಶವಂತ ಅಮೀನ್, ಲಲಿತಾ ಸುಂದರ್, ಜೀವನ್ ಕುಮಾರ್ ತೊಕ್ಕೊಟ್ಟು, ಧನ್ಯವತಿ, ನಮಿತಾ ಶ್ಯಾಂ, ಮೋಹನದಾಸ್ ಶೆಟ್ಟಿ, ಸುಷ್ಮಾ ಜನಾರ್ದನ್, ಪ್ರಕಾಶ್ ಸಿಂಫೋನಿ, ಪ್ರೇಮನಾಥ ಪುತ್ರನ್, ಹರಿಯಪ್ಪ ಸಾಲ್ಯಾನ್, ಸತೀಶ್ ಶೆಟ್ಟಿ ಕಿನ್ಯಾ ಮೊದಲಾದವರು ಉಪಸ್ಥಿತರಿದ್ದರು.

ಸೋಮವಾರ ಸಂಜೆ ಮೇಘಾಲಯದ ಶಿಲಾಂಗ್ ಐಐಎಂನಲ್ಲಿ ಉಪನ್ಯಾಸ ಮಾಡುತ್ತಿದ್ದಾಗ ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನ್ನಪ್ಪಿದ್ದರು. ವಿದ್ಯಾರ್ಥಿಗಳ ಅಚ್ಚುಮೆಚ್ಚಾಗಿದ್ದ ಅವರು ಎಲ್ಲೇ ಹೋದರೂ ಯುವಜನರ ಜತೆ ಸಂವಾದದಲ್ಲಿ ತೊಡಗಿರುತ್ತಿದ್ದರು. ಅವರ ಜೀವನ ಯಾತ್ರೆ ಕೂಡಾ ಪಾಠದಲ್ಲೇ ಅಂತ್ಯವಾಗಿದೆ.

Exit mobile version