Site icon Ullalavani

ಜ.6 ರಂದು ಕಲ್ಲಾಪು ಬುರ್ದುಗೋಳಿ
ಗುಳಿಗ ಕೊರಗಜ್ಜ ಕ್ಷೇತ್ರಕ್ಕೆ ಬಂಗಾರದ ಮುಟ್ಟಾಳೆ ಸಮರ್ಪಣಾ ಶೋಭಾಯಾತ್ರೆ

UN networks

ಉಳ್ಳಾಲ: ಕಲ್ಲಾಪು ಬುರ್ದುಗೋಳಿಯ ಶ್ರೀ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳದಲ್ಲಿ ಜ.6 ರಂದು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಕಲ್ಲಾಪು ಕೆರೆಬೈಲು ನಾಗನಕಟ್ಟೆಯಿಂದ ಪೂರ್ಣಕುಂಭ ಕಲಶ, ವಾದ್ಯ, ಚೆಂಡೆಯೊಂದಿಗೆ ಕಾಲ್ನಡಿಗೆಯಲ್ಲೊ ಬಂಗಾರದ ಮುಟ್ಟಾಲೆ ಸಮರ್ಪಣಾ ಶೋಭಾಯಾತ್ರೆ ನಡೆಯಲಿದೆ.ಜ.7 ರಂದು ಗುಳಿಗ ಕೊರಗಜ್ಜ ದೈವಗಳ ವರ್ಷಾವಧಿ ಕೋಲ ಸೇವೆ ನಡೆಯಲಿದೆ ಎಂದು ಬುರ್ದುಗೋಳಿ ಕಲ್ಲಾಪು ಶ್ರೀ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳ ಇದರ ಭಂಡಾರ ವ್ಯವಸ್ಥಾಪನಾ ಸಮಿತಿ ಚಂದ್ರಹಾಸ್‌ ಪಂಡಿತ್ ಹೌಸ್ ಹೇಳಿದ್ದಾರೆ.

ಅವರು ಕಲ್ಲಾಪು ಬುರ್ದುಗೋಳಿ ಕಲ್ಲಾಪು ಶ್ರೀ ಗುಳಿಗ ಹಮ್ಮಿಕೊಂಡ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಜ. 6 ರಂದು ಮದ್ಯಾಹ್ನ 3 ಗಂಟೆಗೆ ಶೋಭಾಯಾತ್ರೆ ನಡೆಯಲಿದೆ. ಬಳಿಕ 6 ಗಂಟೆಯಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, 7 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 8.30 ಕ್ಕೆ ಕಟೀಲ್ದಪ್ಪೆ ಉಳ್ಳಾಲ್ದಿ ನಾಟಕ ಪ್ರದರ್ಶನವಾಗಲಿದೆ. ರಾತ್ರಿ 7.30 ರಿಂದ ಅನ್ನಸಂತರ್ಪಣೆಯೂ ನಡೆಯಲಿದೆ. ಜ. 7 ರಂದು ದೈವಗಳಿಗೆ ವರ್ಷಾವಧಿ ಕೋಲಸೇವೆ ನಡೆಯಲಿದೆ. ಎರಡು ದಿನಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ವಿವಿಧ ಸಮಿತಿಗಳು, ಮಹಿಳಾ ವಿಭಾಗ ಮತ್ತು ಊರಿನ ಸಂಘ ಸಂಸ್ಥೆಗಳು ಅವಿರತವಾಗಿ ಸೇವೆ ನಡೆಸಿದೆ ಎಂದರು.
ಅಧ್ಯಕ್ಷ ವಿಶ್ವನಾಥ್ ನಾಯ್ಕ್, ಮಧ್ಯಸ್ಥರು ದೇವದಾಸ್ ಗಟ್ಟಿ ಕಾಯಂಗಳ, ಪ್ರಶಾಂತ್ ಕಾಯಂಗಳ, ಕಮಲಾಕ್ಷ ಕುಲಾಲ್ , ರವಿಶಂಕರ್ ಸೋಮೇಶ್ವರ, ಪುರುಷೋತ್ತಮ್ ಕಲ್ಲಾಪು, ನವೀನ್ ಕಾಯಂಗಳ ಉಪಸ್ಥಿತರಿದ್ದರು.

ಹಿನ್ನೆಲೆ
ನೇತ್ರಾವತಿ ಉಳ್ಳಾಲ ಸೇತುವೆಯಿಂದ 3 ಕಿ.ಮೀ ದೂರದಲ್ಲಿ ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಕಲ್ಲಾಪು ಪ್ರದೇಶ ರಾ.ಹೆ ಎಡಭಾಗದಲ್ಲಿ 1 ಕಿ.ಮಿ ದೂರದ ಬುರ್ದುಗೋಳಿಯಲ್ಲಿ ನೆಲೆಯಾಗಿದೆ. ಕಾಯದಿಂದ ಮಾಯಕಾರಕ್ಕೆ ಸಂದ ತರುವಾಯ ಕದಿರೆ ಕ್ಷೇತ್ರದಿಂದ ದಕ್ಷಿಣಾಭಿಮುಖವಾಗಿ ನೆಲೆನಿಂತಿರುವ ಸ್ಥಳ ಬುರ್ದುಗೋಳಿ. ಕುತ್ತಾರಿನ ರಾಜನ್ ದೈವ ಪಂಜಂದಾಯ ಮತ್ತು ಬಂಟ ದೈವಗಳು ಮಾಡದ ಅರಸು ದೈವಗಳಿಗೆ ಸೋತು ಚಿಂತೆಯಲ್ಲಿದ್ದಾಗ, ಅವರ ಕಷ್ಟವನ್ನು ಆಲಿಸಿದ ಕೊರಗ ತನಿಯ ಮರಳಿ ಅವರಿಗೆ ರಾಜ್ಯವನ್ನು ದೊರಕಿಸಿ, ಪಂಜಂದಾಯ ನೀಡಿದ ಏಳು ತಲಗಳಲ್ಲಿ ನೆಲೆಯಾಗುತ್ತಾನೆ.

‘ ರೂ.45 ಲಕ್ಷಕ್ಕೂ ಅಧಿಕ ಹಣವನ್ನು ಬಳಸಿಕೊಂಡು ಬಂಗಾರದ ಮುಟ್ಟಾಳೆ ಹಾಗೂ ಕೋಲಕ್ಕೆ ಬೇಕಾದ ಇತರೆ ಪರಿಕರಗಳ ನಿರ್ಮಾಣವಾಗಿದೆ ‘

ಚಂದ್ರಹಾಸ್ ಪಂಡಿತ್ ಹೌಸ್

Exit mobile version