Site icon Ullalavani

ಬಾಳೆಪುಣಿ ಯಲ್ಲಿ ಹೊಸ ವರ್ಷಾಚರಣೆ  ಗಿಡಗಳ ರಕ್ಷಣೆಗೆ ಶ್ರಮದಾನ

UN networks

ಉಳ್ಳಾಲ:  ಬಾಳೆಪುಣಿ ನವ ಗ್ರಾಮದ ಶೇಣವ ಮೈರಸ್ತೆ ಬದಿಯಲ್ಲಿ ಸ್ವಾತಂತ್ರ್ಯಅಮೃತ ಮಹೋತ್ಸವ ಅಂಗವಾಗಿ ಜನಶಿಕ್ಷಣ ಟ್ರಸ್ಟ್ ವತಿಯಿಂದ ನೆಡಲಾದ  75 ಹಣ್ಣಿನ ಗಿಡಗಳನ್ನು ಬೆಂಕಿಯಿಂದ ರಕ್ಷಿಸಲು ಗಿಡದ ಬುಡದಲ್ಲಿ ಬೆಳೆದಿರುವ ಹುಲ್ಲು ಕಳೆ ಗಿಡಗಳನ್ನು ತೆಗೆಯುವ ಶ್ರಮದಾನದ ಮೂಲಕ ಹೊಸ ವರ್ಷಾಚರಣೆಯನ್ನು ಪರಿಸರ ಸ್ನೇಹಿಯಾಗಿ ಆಚರಿಸಿ ಹಣ್ಣಿನ ಸಾಲು ಮರ ಬೆಳಸಿ ಹಸಿರು ರಸ್ತೆ ನಿರ್ಮಾಣ ಕ್ಕೆ ಸಂಕಲ್ಪಿಸಲಾಯಿತು. ಅಪ್ನಾ ದೇಶ್ ಮಾದರಿ ಗ್ರಾಮ ಅಭಿಯಾನದಡಿ ಜನ ಶಿಕ್ಷಣ ಟ್ರಸ್ಟ್ ಸಂಯೇಜಿಸಿದ್ದ ಶ್ರಮದಾನದಲ್ಲಿ ನರೇಗ ಮಾಜಿ ಒಂಬುಡ್ಸ್‍ಮೆನ್ ಶೀನ ಶೆಟ್ಟಿ, ಮುಡಿಪು ಪ್ರೌಢಶಾಲಾ ಎಸ್‍ಡಿಎಮ್ ಸಿ ಅಧ್ಯಕ್ಷ ಇಬ್ರಾಹಿಂ ನಡುಪದವು, ಮುದುಂಗಾರು ಕಟ್ಟೆ ಎಸ್‍ಡಿಎಮ್‍ಸಿ ಅಧ್ಯಕ್ಷ ಕುಂಞ  ಬಾವು, ಉಪಾಧ್ಯಕ್ಷ ಅಬ್ಬುಬಕ್ಕಾರ್, ಸ್ವಚ್ಛತಾ ಸೇನಾನಿಗಳಾದ ಇಸ್ಮಾಯಿಲ್ ಕಣಂತೂರು, ವಿದ್ಯಾ,ಪಂ ಸದಸ್ಯೆ ಸೆಮೀಮ, ಸೆಲ್ಕೊದ ವಿನೋದ್, ನವ ಗ್ರಾಮದ ಸ್ವಸಹಾಯ ಸಂಘದ ಸದಸ್ಯೆಯರು, ಕಾಲೇಜ್ ವಿದ್ಯಾರ್ಥಿಗಳು, ಅಯ್ಯಪ್ಪ ವ್ರತದಾರಿ ಯುವಕರು ಭಾಗವಹಿಸಿದ್ದರು.

Exit mobile version