Site icon Ullalavani

ಸಿನಿಮೀಯ ಶೈಲಿಯಲ್ಲಿ ಅಪಘಾತ
ಕಾರು ಚಾಲಕ ಪವಾಡಸದೃಶ ಪಾರು

UN networks
ಉಳ್ಳಾಲ: ಫಿಲ್ಮ್ ಶೂಟಿಂಗ್ ಸೆಟ್ ನಲ್ಲಿ ನಡೆಯುವಂತೆ ತೊಕ್ಕೊಟ್ಟುವಿನಿಂದ ಪಂಪ್ವೆಲ್ ತೆರಳುತ್ತಿದ್ದ ಕಾರೊಂದು ಖಾಸಗಿ ಬಸ್ ಢೀಕ್ಕಿ ಹೊಡೆದ ಪರಿಣಾಮ ಒಂದು ಸುತ್ತಿ ಮತ್ತದೇ ಬಸ್ಸಿಗೆ ಢಿಕ್ಕಿ ಹೊಡೆದಿರುವ ಸಿನಿಮೀಯ ಶೈಲಿಯ ಅಪಘಾತ ಪಂಪ್ ವೆಲ್ ನಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಉಳ್ಳಾಲ ನಿವಾಸಿ ಮೊಹಮ್ಮದ್ ಮುಝಾಮಿಲ್ ಪವಾಡಸದೃಶವಾಗಿ ಪಾರಾಗಿದ್ದಾರೆ.
ಮುಝಾಮಿಲ್ ಅವರು ಫಳ್ನೀರ್ ಕಡೆಗೆ ಹೋಗಲು ಉಜ್ಜೋಡಿ ಸರ್ವಿಸ್ ರಸ್ತೆ ಮೂಲಕ ಪಂಪ್ವೆಲ್ ಜಂಕ್ಷನ್ ತಲುಪಿದ್ದರು. ಕಾರನ್ನು ಎಡ ಕಡೆಗೆ ತಿರುಗುಸಿತ್ತಿರುವ ವೇಳೆ ತೊಕ್ಕೊಟ್ಟು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಸಿಟಿ ಬಸ್ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಕಾರಿನ ಹಿಂಭಾಗಕ್ಕೆ ಬಸ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಒಂದು ಸುತ್ತಿ ರಸ್ತೆಯಲ್ಲೇ ತಿರುಗಿ ವಾಪಸ್ಸು ಗುದ್ಧಿ ಬಸ್ಸಿನ ಮುಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಮಂಗಳೂರು ಪೂರ್ವ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version