UNNEWS NETWORKS
ಜೆಪ್ಪಿನಮೊಗರು : ಆಧುನಿಕ ಕಾಲಘಟ್ಟದಲ್ಲಿ ವಿದ್ಯುತ್ ಚಾಲಿತ ವಾಹನ ಅನಿವಾರ್ಯವಾಗಿ, ಬಿಟ್ಟಿದೆ. ಮುಂದಿನ ದಿನಗಳಲ್ಲಿ ಪೂರಕವಾತವರಣವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ.ಯುವ ಸಮುದಾಯಕ್ಕೆ ಗೌತಮ್ ಅವರು ಮಾರ್ಗದರ್ಶನವಾಗಿದ್ದಾರೆ ಎಂದು ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಮೊಂಟ್ರಾ ಎಲೆಕ್ಟ್ರಿಕ್‍ನ ತನಿಯ ಮೋಂಟ್ರಾ ಎಲೆಕ್ಟ್ರಿಕ್ ಆಟೋ ಷೋರೂಂ ನಗರದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಜಪ್ಪಿನಮೊಗರಿನಲ್ಲಿ ಉದ್ಘಾಟನೆಗೊಳಿಸಿ, ಮೊಂಟ್ರಾ ಎಲೆಕ್ಟ್ರಿಕ್ ಆಟೋ ವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡಿದರು.
ತಮಿಳುನಾಡಿನ ಚೆನ್ನೈ ಡಿಜಿಪಿ ಆಗಿರುವ ಡಾ| ರವಿ ಮುತ್ತುಸ್ವಾಮಿ ಮಾತನಾಡಿ ` ಮೋಂಟ್ರಾ ಮಂಗಳೂರು ರಸ್ತೆಗಳ ಮಂತ್ರವಾಗಿ ಹೊರಹೊಮ್ಮಲಿದೆ. ದೇಶದ ದಕ್ಷಿಣ ಭಾಗಗಳಲ್ಲಿ ಮಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಸರಕ್ಕೆ ಪೂರಕವಾಗಿಯೂ ಜನ ಮುನ್ನುಗ್ಗುತ್ತಿದ್ದು, ಇದಕ್ಕೆ ಮೋಂಟ್ರಾ ಇಲೆಕ್ಟ್ರಿಕ್ ವಾಹನಗಳು ಪರಿಸರ ಪೂರಕ ಸಮಾಜಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಿದೆ ಎಂದರು.
ಐಟಿ ಕ್ಲೀನ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್‍ನ ಬಿಸಿನೆಸ್ ಹೆಡ್ ಸುಶಾಂತ್ ಜೆನಾ ಅವರು ಮಾತನಾಡಿ, ಇದೊಂದು ಉತ್ತಮ ಕ್ಷಣವಾಗಿದೆ. ಜನರಿಗೆ ಇದೊಂದು ಸದುಪಯೋಗವಾಗಲಿದೆ ಎಂದು ಅವರು ಹೇಳಿದರು.
ಚಲನಚಿತ್ರ ನಟ ಗಿರೀಶ್ ಶೆಟ್ಟಿ ಕಟೀಲ್ ಮಾತನಾಡಿ, ಕೊರಗಜ್ಜನ ಹೆಸರಿನಲ್ಲಿ ಉದ್ಯಮಿ ಗೌತಮ್ ಅವರು ಆರಂಭಿಸಿದ ವಾಹನ ಮಳಿಗೆ ಈಗಾಗಲೇ ಒಂದು ಯಶಸ್ವಿಯನ್ನು ಕಂಡಿದೆ. ಇದೀಗ ಇಲೆಕ್ಟ್ರಿಕ್ ವಾಹನಗಳಿಗೆ ಪಾದಾರ್ಪಣೆ ನಡೆಸಿಕೊಂಡು, ಅದೂ ಕೊರಗಜ್ಜನ ಹೆಸರಿನಲ್ಲಿ ಇರುವುದರಿಂದ ವಾಹನ ಷೋರೂಂ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂದು ಶುಭಹಾರೈಸಿದರು.
ಈ ವೇಳೆ ಬ್ರಾಹ್ಮಣರ ಕಾಫಿ ಬಾರ್ ನ ರಾಧಾ ಕೃಷ್ಣ ಅಡಿಗಾ, ಮುಖ್ಯ ಅತಿಥಿಗಳಾಗಿ ಪೈ ಸೇಲ್ಸ್‍ನ ಮಾನ್ಯೇಜಿಂಗ್ ಡೈರೆಕ್ಟರ್‍ಗಳಾದ ಟಿ ಗಣಪತಿ ಪೈ, ರತ್ನಕರ್ ಪೈ, ಐಟಿ ಕ್ಲೀನ್ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್‍ನ ಝೋನಲ್ ಹೆಡ್ – ಸೇಲ್ಸ್‍ನ ಪ್ರದೀಪ್ ಆರ್, ಝೋನಲ್ ಹೆಡ್ ಸರ್ವೀಸ್ ರಾಕೇಶ್ ಬಾಬು, ರಿಜಿನಲ್ ಹೆಡ್ ಸೇಲ್ಸ್ ಕಾಮೇಶ್ ಅರುಮುಗಂ, ಸೇಲ್ಸ್ ಮುಖ್ಯಸ್ಥರಾದ ಹರೀಶ್ ಜಿ.ಜೆ, ರಿಟೆಲ್ ಫೈನಾನ್ಸ್ ಹೆಡ್ ಶ್ರವಣ್ ಕುಮಾರ್, ಉದ್ಯಮಿ ಅಶೋಕ್ ಕುಮಾರ್ ರೈ, ಗೌತಮ್ ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಇನ್ನು ಮೊಂಟ್ರಾ ಎಲೆಕ್ಟ್ರಿಕ್‍ನ ಆಟೋ ರಿಕ್ಷಾ ಒಂದು ಬಾರಿ ಚಾರ್ಜ್ ಮಾಡಿದರೆ 197 ಕಿಲೋ ಮೀಟರ್‍ಗಳ ಅತ್ಯುತ್ತಮ ಮೈಲೇಜ್ ರೇಂಜ್ ಒದಗಿಸುತ್ತದೆ. ಈ ಉದ್ಯಮದಲ್ಲೇ ಅತ್ಯುತ್ತಮವಾದ 60 ಓm ಅತ್ಯತ್ತಮ ಅಗ್ರ ಟಾರ್ಕ್ ಮತ್ತು ಗಂಟೆಗೆ 55 ಕಿಮೀ ಟಾಪ್ ಸ್ಪೀಡ್ ಸಾಮರ್ಥ್ಯ ಹೊಂದಿದೆ. 3ಡಬ್ಲ್ಯು ಆಟೋದ ಬಿಡುಗಡೆಯು ಇಲೆಕ್ಟ್ರಿಕ್ ಕ್ಷೇತ್ರಕ್ಕೆ ನಮ್ಮ ಬ್ರ್ಯಾಂಡ್‍ನ ಪ್ರವೇಶವನ್ನು ಸಂಕೇತಿಸುತ್ತದೆ. ವಿಶಿಷ್ಟ ಅಂದ, ಬಲಿಷ್ಠ ಪ್ರದರ್ಶನ ಮತ್ತು ಬಲಿಷ್ಠವಾದ ನಿರ್ಮಾಣ ಗುಣಮಟ್ಟ ಗಳಿಂದಾಗಿ ಭಾರತದಲ್ಲಿ ಕೊನೆ ಗಮ್ಯದವರೆಗಿನ ಸಾಗಾಟ ಪ್ರಕ್ರಿಯೆಯನ್ನು ಈ ವಾಹನವು ಕ್ರಾಂತಿಕಾರಕಗೊಳಿಸಲಿದೆ.
ವಾಹನ ಖರೀದಿ ಹಾಗೂ ಮಾಹಿತಿಗಾಗಿ ಸಂಪರ್ಕಿಸಿರಿ
9591323888
ಗೌತಮ್ ಕುಲಾಲ್
ತನಿಯಾ ಮೋಂಟ್ರಾ ಮೋಟಾರ್ಸ್
ಮಾಲೀಕರು