Site icon Ullalavani

ಕೋಟೆಕಾರು: ಕಾರ್ಮೆಲ್ ಪ್ರಾಥಮಿಕ ಶಾಲೆ
15ನೇ ವಾರ್ಷಿಕೋತ್ಸವ

UN networks

ಉಳ್ಳಾಲ: ಹೆತ್ತವರು ಮಕ್ಕಳೊಂದಿಗೆ ದಿನಕ್ಕೆ ಕನಿಷ್ಟ ಒಂಭತ್ತು ನಿಮಿಷಗಳನ್ನು ಕಳೆಯಿರಿ, ನಿದ್ರೆಯಿಂದ ಏಳುವ ಹೊತ್ತು, ಸಂಜೆ ಶಾಲೆಯಿಂದ ವಾಪಸ್ಸಾಗುವ ಹೊತ್ತು ಮತ್ತು ರಾತ್ರಿ ಮಲಗುವ ಮುನ್ನ ಕನಿಷ್ಟ ಮೂರು ನಿಮಿಷಗಳನ್ನು ಅವರೊಂದಿಗೆ ಮಾತನಾಡಿ ಬೆರೆಯಿರಿ. ಇದರಿಂದ ಮಕ್ಕಳ ಭಾವನೆಗಳನ್ನು ಅರಿತು ಅವರನ್ನು ಬೆಳೆಸಲು ಸಹಕಾರಿಯಾಗುವುದು ಎಂದು ಮಂಗಳೂರು ವಿ.ವಿ ಯ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರೀತಿ ಕೀರ್ತಿ ಡಿಸೋಜ ಅಭಿಪ್ರಾಯಪಟ್ಟರು.
ಅವರು ಕೋಟೆಕಾರು ಕಾರ್ಮೆಲ್ ಶಾಲೆಯ ಜ್ಯೂನಿಯರ್ ಕೆ.ಜಿಯಿಂದ 4ನೇ ತರಗತಿ ವಿದ್ಯಾರ್ಥಿಗಳ 15ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಪ್ರಾಂಶುಪಾಲೆ ಜೆನಿಫರ್ ಮೋರಸ್ ಎ.ಸಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸುಜಾತ ಶೆಟ್ಟಿ ಉಪಸ್ಥಿತರಿದ್ದರು.
ಲ್ಯಾನ್ವಿ ಸಂಜನಾ ಸಲ್ದಾನ, ಲಕ್ಷ್ ಮೆಂಡನ್, ಜೋಷುವಾ ಲೋಬೊ ಹಾಗೂ ಹಿಮಾನಿ ವೈ ಉಳ್ಳಾಲ್ ನಿರೂಪಿಸಿದರು. ಉಪಪ್ರಾಂಶುಪಾಲೆ ಅನಿತಾ ಡಿಸೋe ಎ.ಸಿ ಸ್ವಾಗತಿಸಿದರು. ರೀಟಾ ವಂದಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 4ನೇ ತರಗತಿಯ ವಿದ್ಯಾರ್ಥಿಗಳ ಹನಿ ನೀರಿನ ದೃಶ್ಯರೂಪಕ , ಕರಾಟೆ ಪ್ರದರ್ಶನ ಹಾಗೂ ಸ್ವಾಭಿಮಾನದ ಪುಣ್ಯಕೋಟಿಯ ಕಥೆಯ ನಾಟಕ ಗಮನಸೆಳೆಯಿತು.

Exit mobile version