UN networks
ಉಳ್ಳಾಲ: ರಕ್ತೇಶ್ವರಿ ದೈವಸ್ಥಾನ ಸೋಮೇಶ್ವರ ಇದರ ಮಾರ್ಚ್ 21 ರಿಂದ 26 ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವ, ವರ್ಷಾವಧಿ ನೇಮೋತ್ಸವ* ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದೈವಸ್ಥಾನದಲ್ಲಿ ಇತ್ತೀಚೆಗೆ ಜರಗಿತು.
ಉಳಿಯ ಉಳ್ಳಾಲ್ತಿ ಧರ್ಮ ಅರಸು ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಹರೀಶ್ ಕುಮಾರ್ ಕುತ್ತಾರ್ ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಮುಂದಾಳು ಟಿ.ಜಿ ರಾಜಾರಾಂ ಭಟ್ , ಕ್ಷೇತ್ರದ ತಂತ್ರಿ ಸುಬ್ರಹ್ಮಣ್ಯಬಾಶ್ರಿತ್ತಾಯ, ರಕ್ತೇಶ್ವರಿ ದೈವಸ್ಥಾನದ ಅಧ್ಯಕ್ಷ ರಾಮದಾಸ್ ಸೋಮೇಶ್ವರ, ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಬ್ರಹ್ಮಕಲಶ ಕಾರ್ಯಧ್ಯಕ್ಷ ಮುತ್ತಣ್ಣ ಶೆಟ್ಟಿ, ಹೊರೆ ಕಾಣಿಕೆ ಸಂಚಾಲಕರಾದ ಪದ್ಮನಾಭ ಶೆಟ್ಟಿ ವರ್ಕಾಡಿ ಉಪಸ್ಥಿತರಿದ್ದರು.
ವಿದ್ಯಾಧರ್ ಶೆಟ್ಟಿ ಪ್ರಸ್ತಾವನೆ ಗೈದರು. ರವಿಶಂಕರ್ ಸೋಮೇಶ್ವರ ಸ್ವಾಗತಿಸಿದರು. ಆನಂದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
