Site icon Ullalavani

ಕುತ್ತಾರು ಕೊರಗಜ್ಜನ ಆದಿತಳಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ

UN networks

ಕುತ್ತಾರು: ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು  ಕುಟುಂಬ ಸಮೇತರಾಗಿ ಶನಿವಾರ ಭೇಟಿ ನೀಡಿದ್ದಾರೆ.


ಪತ್ನಿ ಗೀತಾ ಹಾಗೂ ಮಗಳೊಂದಿಗೆ ಕುತ್ತಾರಿಗೆಗೆ ಶಿವರಾಜ್​ ಕುಮಾರ್ ಭೇಟಿಕೊಟ್ಟಿದ್ದು ಭಕ್ತಿಯಿಂದ ಪ್ರಾರ್ಥಿಸಿದ್ದಾರೆ.

ಕೊರಗಜ್ಜ ನಿಗೆ ವೀಳ್ಯದೆಲೆ, ಚಕ್ಕುಲಿ ಇಟ್ಟ ಶಿವರಾಜ್ ಕುಮಾರ್ ಅವರ ಜೊತೆ ವೇದ ಚಿತ್ರತಂಡ ಕೂಡಾ ಈ ಪ್ರಸಿದ್ಧ ತಾಣಕ್ಕೆ ಭೇಟಿ ಕೊಟ್ಟಿದೆ.

ಕೊರಗತನಿಯ ದೈವದ ಕುತ್ತಾರಿನ ಏಳು ತಲಗಳಲ್ಲಿ ಒಂದಾದ ಕುತ್ತಾರು ದೆಕ್ಕಾಡು ಆದಿತಲಕ್ಜೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಭಂಡಾರಮನೆಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಮಾಧ್ಯಮದ ಜತೆಗೆ ಮಾತನಾಡಿದ ಶಿವಣ್ಣ,
ಸರಳ, ವಿಜೃಂಭಣೆಯಿಲ್ಲದ ಆರಾಧನೆ ಕೊರಗಜ್ಜನದ್ದು, ಸ್ಥಳಕ್ಕೆ ಭೇಟಿ ನೀಡಿ ಮನಸ್ಸಿಗೆ ಸಂತೋಷವಾಯಿತು. ಕುಟುಂಬ ಸಮೇತರಾಗಿ ಪ್ರಾರ್ಥಿಸಿದ್ದೇವೆ. ಪ್ರಾಮಾಣಿಕತೆಯ ಪ್ರಾರ್ಥನೆಯನ್ನು ಇಲ್ಲಿ ಕಾಣುತ್ತೇವೆ. ನಟಿ ರಕ್ಷಿತಾ ಕೊರಗಜ್ಜನ ಕಟ್ಟೆಯ ಕುರಿತು ಮನವರಿಕೆ ಮಾಡಿದ್ದರು. ಪ್ರತಿಬಾರಿಯೂ ಮಂಗಳೂರಿಗೆ ಬರುವಾಗ ಹಲವು ದೇವಸ್ಥಾನಗಳನ್ನು ಭೇಟಿ ನೀಡಿದ್ದೆನು. ಆದರೆ ಕೊರಗಜ್ಜನ ಆದಿತಲದ ಕುರಿತು ಗೊತ್ತಿರಲಿಲ್ಲ. ತನ್ನ ಹಲವು ಚಿತ್ರಗಳ ಶೂಟಿಂಗ್ ಕೂಡಾ ಮಂಗಳೂರು-ಉಡುಪಿ ಭಾಗಗಳಲ್ಲೇ ಜಾಸ್ತಿಯಾಗಿ ನಡೆದಿದೆ. ಆದರೆ ಇದೀಗ ಕೊರಗಜ್ಜನ ಆದಿತಲಕ್ಕೆ ಭೇಟಿ ಕೊಡುವ ಸಮಯಬಂದಿದೆ ಎಂದರು.
ಈ ಸಂದರ್ಭ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಕೊರಗ ತನಿಯ ದೈವದ ಆದಿಸ್ಥಳ ದೆಕ್ಕಾಡು ಕುತ್ತಾರು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರ ಬಿ. ಶ್ರೀಧರ ಶೆಟ್ಟಿ ಮಾಗಣ್ತಡಿ, ಶ್ರೀ ಕ್ಷೇತ್ರದ ಮೂಲ್ಯಣ್ಣ ಬಾಲಕೃಷ್ಣ , ದೇವ್ ಪಾಂಡೇಶ್ವರ್, ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ,ದೇವಿ ಪ್ರಸಾದ್ ಶೆಟ್ಟಿ ಮಾಗಣ್ತಡಿ, ಪ್ರೀತಂ ಶೆಟ್ಟಿ ಮಾಗಣ್ತಡಿ, ಮಹಾಬಲ ಹೆಗ್ಡೆ ಮಾಗಣ್ತಡಿ , ಮನೋಜ್ ಹೆಗ್ಡೆ ಮಾಗಣ್ತಡಿ, ಜಯ್ ಕಿಶನ್ ರೈ ಮಾಗಣ್ತಡಿ, ರಂಜಿತ್ ಸುಲಾಯ ಮಾಗಣ್ತಡಿ, ಸ್ವಾತಿ ಶೆಟ್ಟಿ ಶೋಭಾ ರೈ,ಮಾಗಣ್ತಡಿ, ವಿದ್ಯಾಚರಣ್ ಭಂಡಾರಿ, ವೈಶಾಖ್ ಶೆಟ್ಟಿ, ಶ್ರೀರಾಮ ರೈ, ಜಗನ್ನಾಥ ಶೆಟ್ಟಿ,ಮನೋಜ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ, ತಿಮ್ಮಪ್ಪ ಪೂಂಜ ಉಪಸ್ಥಿತರಿದ್ದರು.

ವೇದ ಚಿತ್ರದ ಪ್ರಮೋಷನ್ ಗಾಗಿ ಶಿವರಾಜ್​ ಕುಮಾರ್ ಹಾಗೂ ಚಿತ್ರತಂಡ ಮಂಗಳೂರಿಗೆ ಆಗಮಿಸಿದ್ದಾರೆ. ಸಂಜೆ ಪಣಂಬೂರು ಕಡಲಕಿನಾರೆಯಲ್ಲಿ ನಡೆಯಲ್ಲಿ ವೇದ ಚಿತ್ರದ ಪ್ರಮೋಶನ್ ನಡೆಯಲಿದೆ.

Exit mobile version