Site icon Ullalavani

ಆಟೋ ರಾಜಕನ್ಮಾರ್ ಯೂನಿಯನ್ ನಿಂದ ದೇರಳಕಟ್ಟೆಯಿಂದ ಮುಡಿಪುವರೆಗೆ ಬೃಹತ್ ರಿಕ್ಷಾ ರ‍್ಯಾಲಿ

UN NETWORKS

ದೇರಳಕಟ್ಟೆ: ಆಟೋ ರಾಜಕನ್ಮಾರ್ ಯೂನಿಯನ್ ದ.ಕ ಜಿಲ್ಲೆ ಇದರ ಐದನೇ ವಾರ್ಷಿಕೋತ್ಸವದ ಪ್ರಯುಕ್ತ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಿಂದ  ಮುಡಿಪು ಜಂಕ್ಷನ್ನಿನವರೆಗೆ  ಬೃಹತ್ ರ‍್ಯಾಲಿ ನಡೆಯಿತು.

ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಎಸ್.ಐ ಚಂದ್ರ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ರಿಕ್ಷಾ  ಚಾಲಕರ  ಸಂಕಷ್ಟಕ್ಕೆ  ಸಂಘಟನೆ ಧ್ವನಿಯಾಗಲಿ.  ಕಾನೂನು ಪಾಲನೆಯ ಜೊತೆಗೆ ಜನರಿಗೆ ಉತ್ತಮವಾದ ಸೇವೆಯನ್ನು ಪೂರೈಸುವ ಕಾರ್ಯ ರಿಕ್ಷಾ ಚಾಲಕರಿಂದ ಆಗಬೇಕಿದೆ.  ರಿಕ್ಷಾ ಚಾಲಕರ ಸೌಹಾರ್ದ ಕಾರ್ಯಕ್ರಮ ಸಮಾಜಕ್ಕೆ ಮಾದರಿ ಎಂದರು.

ಆಟೋ ರಾಜಕನ್ಮಾರ್ ಯೂನಿಯನ್ ಅಧ್ಯಕ್ಷ ಸಿದ್ದೀಖ್ ಕೊಡಕ್ಕಲ್, ಪ್ರ.ಕಾ ಅಬ್ದುಲ್ ಜಲೀಲ್ ಸೇರಿದಂತೆ ಮಂಗಳೂರು, ಉಳ್ಳಾಲ, ಮಂಜೇಶ್ವರ , ಬಂಟ್ವಾಳ ತಾಲೂಕಿನ ವ್ಯಾಪ್ತಿಯ 60 ರಿಕ್ಷಾ ಪಾರ್ಕಿ‌ನ 300 ಕ್ಕೂ ಅಧಿಕ ರಿಕ್ಷಾ ರ್ಯಾಲಿಯಲ್ಲಿ ಭಾಗವಹಿಸಿದ್ದರು.

Exit mobile version