Site icon Ullalavani

ನ.೩೦ ರಂದು ಕೊಣಾಜೆ ನಡುಪವು ಮೈದಾನದಲ್ಲಿ
ಬಿಜೆಪಿ ಕಾರ‍್ಯಕರ್ತರ ಬೃಹತ್ ಸಮಾವೇಶ : ಸಂತೋಷ್  ರೈ ಬೋಳಿಯಾರ್

UN networks

ಉಳ್ಳಾಲ: ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ  ಕರ‍್ಯಕರ್ತರ ಬೃಹತ್ ಸಮಾವೇಶ ನ.೩೦ಕ್ಕೆ ಕೊಣಾಜೆ ನಡುಪದವು ಬಿಜೆಪಿ ಕಚೇರಿ ಬಳಿಯ ಮೈದಾನದಲ್ಲಿ ಅದ್ಧೂರಿಯಾಗಿ ಜರಗಲಿದೆ ಎಂದು  ದಿ ಮೈಸೂರ್ ಇಲೆಕ್ಟಿçöçಕಲ್ಸ್ ನಿಗಮದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು.


ಸೋಮವಾರ ನಡುಪದವು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಮುನ್ನ ಅಸೈಗೋಳಿ ಮೈದಾನದಿಂದ  ಕಂಬ್ಳಪದವಿನ ನಡುಪದವು ಚುನಾವಣಾ ಕಾರ್ಯಾಲಯದವರೆಗೆ  ಬೃಹತ್ ವಾಹನ ಜಾಥಾ ನಡೆಯಲಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,  ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್,  ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ  ನಿವೃತ್ತ ಸೇನಾನಿ, ಎಸ್ ಎಸ್ ಎಲ್ ಸಿಯಲ್ಲಿ ಶೇ.೯೦ಕ್ಕಿಂತÀ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ  ಹಾಗೂ ಪತ್ರಕರ್ತರಿಗೆ ಗೌರವಾಭಿನಂದನೆ ಕಾರ್ಯಕ್ರಮ ನಡೆಯಲಿದೆ. ಕರ‍್ಯಕರ್ತರಿಗೆ ಹುರುಪು  ತುಂಬಿಸುವ ಉದ್ದೇಶದಿಂದ  ನಡೆಯುವ ಕಾರ್ಯಕ್ರಮವಾಗಿದೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಮಾತನಾಡಿ, ಕರ‍್ಯಕರ್ತರ ಬೃಹತ್ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯಾಧ್ಯಕ್ಷರು ಭಾಗಿಯಾಗುವುದರಿಂದ  ಕ್ಷೇತ್ರದ ವಿವಿಧ ಸಮಸ್ಯೆಗಳ  ಬಗ್ಗೆ ನಾಯಕರ ಗಮನಸೆಳೆದು  ಪರಿಹಾರ ಕಂಡುಕೊಳ್ಳುವ  ಉದ್ದೇಶವನ್ನು ಹೊಂದಿದ್ದೇವೆ ಎಂದರು.   
ಸುದ್ಧಿಗೋಷ್ಠಿಯಲ್ಲಿ   ಬಿಜೆಪಿ ಜಿಲ್ಲಾ ಕರ‍್ಯದರ್ಶಿ ಸತೀಶ್ ಕುಂಪಲ,   ಕ್ಷೇತ್ರ ಪ್ರ.ಕರ‍್ಯದರ್ಶಿಗಳಾದ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಇದ್ದರು.

Exit mobile version