Site icon Ullalavani

ಹರೇಕಳಕ್ಕೆ ಬರುವ ಸಿದ್ದರಾಮಯ್ಯ ಮೊದಲಿಗೆ ತನ್ನ ಶಾಸಕರನ್ನು ಪ್ರಶ್ನಿಸಲಿ : ಸತೀಶ್ ಕುಂಪಲ

UN networks

ಕೊಣಾಜೆ : ಸಿದ್ಧರಾಮಯ್ಯ ಹರೇಕಳಕ್ಕೆ  ಬಂದು ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಒದಗಿಸದ  ತಮ್ಮ ಪಕ್ಷದ ಶಾಸಕರನ್ನು ಮೊದಲಿಗೆ ಪ್ರಶ್ನಿಸಲಿ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.

ನಡುಪದವು ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಹರೇಕಳಕ್ಕೆ ಬರುವ ಸಿದ್ಧರಾಮಯ್ಯ  ಕ್ಷೇತ್ರದ ಜನರಿಗೆ ಮನೆ ಮನೆಗೆ ನೀರು ಕೊಡುವ ಯೋಜನೆಯ ಕುರಿತು  ತಿಳಿಸಿ ಹೇಳಬೇಕಿದೆ. ತಮ್ಮ ಸರಕಾರದ ಅವಧಿ ಪೂರ್ಣಗೊಂಡು ಚುನಾವಣೆ ಬರುತ್ತಿದ್ದಂತೆ ರೂ.೧೭೮ ಕೋಟಿ ಸೇತುವೆ ನಿರ್ಮಾಣದೊಂದಿಗೆ ಮನೆ ಮನೆಗೆ ನೀರು ಕೊಡುವ ಯೋಜನೆಗೆ ಶಿಲನ್ಯಾಸಗೊಳಿಸಲಾಗಿದೆ. ಈವರೆಗೆ ನೀರು ಪೂರೈಕೆಯಾಗಿಲ್ಲ. ಚುನಾವಣೆಗೆ ನಿಲ್ಲುವುದು ಬಿಡಿ, ಎಲ್ಲಿ ಬೇಕಾದರೂ ನಿಲ್ಲಲಿ. ಅದು ಪ್ರಶ್ನೆಯಲ್ಲ.  ಮತದಾರರಿಗೆ ಕೊಟ್ಟಂತಹ ವಿಶ್ವಾಸವನ್ನು ಈವರೆಗೆ ಈಡೇರಿಕೆ ಮಾಡಿಲ್ಲ. ಡಿ.೫ ಕ್ಕೆ ಸಿದ್ಧರಾಮಯ್ಯ ಬರುವಾಗ ಪ್ರಥಮವಾಗಿ ಇದಕ್ಕೆ ಉತ್ತರ ಕೊಡಬೇಕಿದೆ. ಬಿಜೆಪಿ ಜನಸಾಮಾನ್ಯರ ಬೇಡಿಕೆಗಳಿಗೆ ಅನುಗುಣವಾಗಿ   ದುಡಿಯುವ   ಪಕ್ಷವಾಗಿದೆ.ಮನೆ ನಿವೇಶನಗಳ ಹಕ್ಕುಪತ್ರಗಳನ್ನು  ತಹಶೀಲ್ದಾರ್ ಕಚೇರಿಯಲ್ಲಿ ಮಾಡಿಟ್ಟರೂ , ಇಲ್ಲಿನ ಶಾಸಕರು ಅದನ್ನು ಕೊಡಲು ಬಿಡುತ್ತಿಲ್ಲ. ದಬ್ಬಾಳಿಕೆ ನಡೆಸಿ  ಕಚೇರಿಯನ್ನು ತನ್ನ ಕಚೇರಿಯನ್ನಾಗಿ ನಡೆಸುತ್ತಿದ್ದಾರೆ. ಬಿಜೆಪಿ ಎಲ್ಲಾ ಶಾಸಕರು ಅಲ್ಲಲ್ಲಿ ಹಕ್ಕುಪತ್ರಗಳನ್ನು ಕೊಟ್ಟಿದ್ದಾರೆ ಆದರೆ ಇಲ್ಲಿ ಮಾತ್ರ ನೀಡಿಲ್ಲ.


ಸುದ್ಧಿಗೋಷ್ಠಿಯಲ್ಲಿ  ದಿ ಮೈಸೂರ್ ಇಲೆಕ್ಟಿçöçಕಲ್ಸ್ ನಿಗಮದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್   ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ,  ಪ್ರ.ಕರ‍್ಯದರ್ಶಿಗಳಾದ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಇದ್ದರು.

Exit mobile version