Site icon Ullalavani

ಶಾಸಕ ಖಾದರ್‌ರ ಮಾತಿನಲ್ಲಿ ಸೋಲುವ ಭೀತಿಯಿದೆ : ಚಂದ್ರಹಾಸ್ ಪಂಡಿತ್ ಹೌಸ್

UN networks

ಉಳ್ಳಾಲ:  ಇತ್ತೀಚೆಗೆ ಸಮಾರಂಭವೊAದರಲ್ಲಿ  ಕ್ಷೇತ್ರದ ಶಾಸಕ ಯು.ಟಿ ಖಾದರ್ ಅವರು ಆಡಿರುವ ಮಾತಿನಲ್ಲೇ ಸೋಲುವ ಭೀತಿ ಕಾಣುತ್ತಿದೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದರು.

ನ.30ರಂದು ನಡುಪವು ಬಳಿ ನಡೆಯಲಿರುವ  ಬಿಜೆಪಿ ಕಾರ‍್ಯಕರ್ತರ ಬೃಹತ್ ಸಮಾವೇಶದ ಕುರಿತು ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ,
ಬಿಜೆಪಿಯವರು ಪಟಾಕಿ ಸಿಡಿಸಿದರೂ ಅಂದೇ ಕಾರ‍್ಯಕರ್ತರು  ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗುತ್ತಾರೆ. ನಾಟೆಕಲ್, ಮಂಜನಾಡಿ, ಕೋಟೆಕಾರು, ಕಲ್ಲಾಪು ಭಾಗಗಳಲ್ಲಿ  ತ್ಯಾಜ್ಯ ತುಂಬಿತುಳುಕುತ್ತಿದೆ. ಶಾಸಕರು ಇದೇ ರಸ್ತೆಯಾಗಿ ಹೋದರೂ ಅದರ ಬಗ್ಗೆ ಗಮನಹರಿಸುತ್ತಿಲ್ಲ. ಸ್ಥಳೀಯಾಡಳಿತಕ್ಕೆ ಸುಸಜ್ಜಿತ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲು ಸಹಕರಿಸದೆ  ಕ್ಷೇತ್ರದ ಉದ್ದಗಲಕ್ಕೂ  ನಿಸರ್ಗ ಹಾಳಾಗುತ್ತಿವೆ. ಪಾರ್ಟಿ ತೀರ್ಮಾನವೇ ಅಂತಿಮ ತೀರ್ಮಾನ. ಪಾರ್ಟಿ ಯಾವ ಅಭ್ಯರ್ಥಿಯನ್ನು ಘೋಷಿಸಿದರೂ ಯಾವುದನ್ನೂ ಮನಸ್ಸಿನಲ್ಲಿಡದೆ ಪ್ರತಿಯೊಬ್ಬರೂ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ. ಕಾಂಗ್ರೆಸ್  ಶಾಸಕರಿಗೆ ಧೈರ್ಯ ತಪ್ಪಿದೆ. ಅವರ ಸೋಲು ಖಂಡಿತ ಅನ್ನುವುದು ಅವರ ಮಾತಿನಿಂದ ಗೊತ್ತಾಗುತ್ತಿದೆ. ಮುಂದಿನ ಶಾಸಕರು ಕೆಲಸ ಮಾಡಲಿ ಅನ್ನುವ ಹೇಳಿಕೆ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ  ದಿ ಮೈಸೂರ್ ಇಲೆಕ್ಟಿçöçಕಲ್ಸ್ ನಿಗಮದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್   ಬಿಜೆಪಿ ಜಿಲ್ಲಾ ಕಾರ‍್ಯದರ್ಶಿ ಸತೀಶ್ ಕುಂಪಲ,   ಕ್ಷೇತ್ರ ಪ್ರ.ಕಾರ‍್ಯದರ್ಶಿಗಳಾದ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಇದ್ದರು.

Exit mobile version