UN networks
ಉಳ್ಳಾಲ: ತಿಂಗಳಿಗೆ ೧೦ ದಿನ ನೀರು, ಅದು ಕೂಡಾ ಸರಿಯಾಗಿ ಬರುತ್ತಿಲ್ಲ, ಪಂಚಾಯಿತಿಗೆ ಮಾತನಾಡಿದರೂ ಸ್ಪಂಧನೆ ಸಿಗುತ್ತಿಲ್ಲ. ಸ್ವಂತ ಹಣದಿಂದ ನೀರು ತರಲು ಸಾಧ್ಯವಿಲ್ಲ. ತಕ್ಷಣವೇ ಇಡೀ ಗ್ರಾಮಕ್ಕೆ ಕುಡಿಯುವ ನೀರು ಸಮಸ್ಯೆಯನ್ನು ದೂರವಾಗಿಸಬೇಕು ಎಂದು ಅಂಬ್ಲಮೊಗರು ಗ್ರಾಮದ ಸಣ್ಣಮದಕ ನಿವಾಸಿ ಸಫಿಯಾ ಎಂಬವರು ಹೇಳಿದ್ದಾರೆ.
ಕಂದಾಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ಅಂಬ್ಲಮೊಗರು ಇವರ ಸಹಭಾಗಿತ್ವದಲ್ಲಿ ಅಂಬ್ಲಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ ಉಳ್ಳಾಲ ತಾಲೂಕು ತಹಶೀಲ್ದಾರರ ಗ್ರಾಮವಾಸ್ತವ್ಯದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಹೇಳಿಕೊಂಡರು.
ಅಂಬ್ಲಮೊಗರು ಗ್ರಾಮಕ್ಕೆ ಕುಡಿಯುವ ನೀರಿನದ್ದೇ ಸಮಸ್ಯೆ, ಪಂಚಾಯಿತಿನಿAದ ಸಿಗುವ ನೀರು ದಿನಬಳಕೆಗೆ ಸಾಕಾಗುತ್ತಿಲ್ಲ. ಮನೆ ನಿರ್ವಹಣೆಯೇ ಕಷ್ಟವಿರುವ ಕಾಲಘಟ್ಟದಲ್ಲಿ ಹಣ ಕೊಟ್ಟು ನೀರು ತರಲು ಅಸಾಧ್ಯ ಎಂದು ಅಳಲು ತೋಡಿಕೊಂಡರು.
ತಹಶೀಲ್ದಾರ್ ಪುಟ್ಟರಾಜು ಅವರು ಸಫಿಯಾ ಮನೆಗೆ ಭೇಟಿ ನೀಡಿ ಶಾಶ್ವತ ನೀರು ಪೂರೈಸುವ ಕುರಿತು ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು. ಮಾಜಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಹರೇಕಳ-ಅಡ್ಯಾರ್ ಸೇತುವೆ ಕಾಮಗಾರಿ ಭಾಗಶ: ಮುಗಿದಿದೆ. ಶೀಘ್ರದಲ್ಲೇ ಗ್ರಾಮಕ್ಕೆ ಶಾಶ್ವತ ನೀರಿನ ಪೂರೈಕೆಯಾಗಲಿದೆ. ಅಲ್ಲಿಯವರೆಗೆ ನೀರಿನ ಸಮಸ್ಯೆಯಾಗದಂತೆ ಗ್ರಾ.ಪಂ ಆಡಳಿತ ನೋಡಿಕೊಳ್ಳುತ್ತದೆ ಎಂಬ ಭರವಸೆ ನೀಡಿದರು.
ಅಂಬ್ಲಮೊಗರು ಗ್ರಾಮದುದ್ದಕ್ಕೂ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲ. ಮಳೆಗಾಲದಲ್ಲಿ ಮಳೆ ನೀರು ಮನೆ ಆವರಣದಲ್ಲೇ ಹರಿದು ಅಪಾಯವನ್ನು ಆಹ್ವಾನಿಸುತ್ತಿದೆ. ೫೦ ವರ್ಷಗಳ ಬೇಡಿಕೆಯಿದ್ದರೂ ಅನುದಾನದ ಕೊರತೆ ಅನ್ನುವ ಉತ್ತರ ಸಿಗುತ್ತಿದೆ. ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಅಧಿಕಾರಿಗಳ ಬದಲಾವಣೆ ಪರ್ವ ಇರುವುದರಿಂದ ಕೊಟ್ಟ ಮನವಿಗಳಿಗೆ ಸ್ಪಂಧನೆಯೇ ಸಿಗುತ್ತಿಲ್ಲ ಹಿರಿಯ ಗ್ರಾಮಸ್ಥ ದೂರು ನೀಡಿದರು.
ಅಂಬ್ಲಮೊಗರುವಿನಲ್ಲಿ ರೇಷನ್ ಕಾಡ್ ð ಅಂಗಡಿಯೇ ಬಂದ್ ಆಗಿದೆ. ಗ್ರಾಮಸ್ಥರು ನೆರೆಯ ಗ್ರಾಮ ಮುನ್ನೂರು ಹೋಗಿ ರೇಷನ್ ತರಬೇಕಿದೆ. ಈ ಕುರಿತು ಹಲವು ಬಾರಿ ಗ್ರಾಮಸಭೆಗಳಲ್ಲಿ ಮನವಿ ಮಾಡಿದರು ಪ್ರಯೋಜನಕಾರಿಯಾಗಿಲ್ಲ ಎಂದು ಗ್ರಾಮದ ಲತೀಶ್ ರೈ ದೂರಿದರು. ತಹಶೀಲ್ದಾರ್ ಗ್ರಾಮಕರಣಿಕರನ್ನು ಪ್ರಶ್ನಿಸಿದಾಗ ಸರಕಾರ ಅನುಮತಿ ನೀಡಲು ಸಮಯ ತಗಲುತ್ತದೆ. ಈಗಾಗಲೇ ಹೊಸ ಅಂಗಡಿಯ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರುಗೊAಡ ತಕ್ಷಣವೇ ಗ್ರಾಮದಲ್ಲಿ ರೇಷನ್ ಅಂಗಡಿ ತೆರೆಯಲಿದೆ ಎಂದರು.
ಅAಬ್ಲಮೊಗರು- ಮುನ್ನೂರು ಸಂಪರ್ಕಿಸುವ ರಸ್ತೆಗೆ ಖಾಸಗಿ ಸಂಸ್ಥೆಯವರು ಬೇಲಿಯನ್ನು ಹಾಕುತ್ತಿದ್ದಾರೆ. ಕೃಷಿಕರಿಗೆ, ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಖಾಸಗಿ ಸ್ಥಳವಾದರೂ ಜನರ ಉಪಯೋಗಕ್ಕೆ ಇರುವ ರಸ್ತೆಯನ್ನು ಜನರಿಗೆ ಅನುಕೂಲಕರವಾಗಿಸುವಂತೆ ಬಿಟ್ಟುಕೊಡಬೇಕು ಎಂದು ಗ್ರಾಮದ ಜಯಂತ್ ಆಗ್ರಹಿಸಿದರು. ಖಾಸಗಿ ಸ್ಥಳವಾಗಿರುವುದರಿಂದ ರಸ್ತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ. ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ.
ಗ್ರಾಮವಾಸ್ತವ್ಯಕ್ಕೆ ಅಂಬ್ಲಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಪರಮೇಶ್ವರ್ ಚಾಲನೆ ನೀಡಿದರು. ಮಾಜಿ ಅಧ್ಯಕ್ಷ ಮಹಮ್ಮದ್ ರಫೀಕ್, ಸದಸ್ಯರಾದ ಇಸಾಕ್, ರವೀಂದ್ರ ಕುಮಾರ್. ಮುಮ್ತಾಝ್, ಹೆಲೆನ್ ಡಿ.ಸೋಜಾ, ಸರಕಾರಿ ಪ್ರೌಢಶಾಲೆ ಅಂಬ್ಲಮೊಗರು ಮುಖ್ಯ ಶಿಕ್ಷಕಿ ಸವಿತಾ ವೈ ಉಪಸ್ಥಿತರಿದ್ದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕ;ಳ ಅಭಿವೃದ್ಧಿ ಇಲಾಖೆಯ ಸೀತಾ ಕೆ., ಉಪ ವಲಯ ಅರಣ್ಯಾಽಕಾರಿ ಮಹಾಬಲ ಟಿ.ಎಸ್., ಸೌಮ್ಯಾ ಕೆ., ಶಿಕ್ಷಣಾ ಇಲಾಖೆಯ ಬಿಆರ್‌ಪಿ ನೀತಾ ಗಟ್ಟಿ ಎಂ. ï ಸಮಾಜ ಕಲ್ಯಾಣ ಇಲಾಖೆಯ ವಿಜಯ ಕುಮಾರ್, ಕೃಷಿ ಇಲಾಖೆಯ ಸಾಂಘವಿ ಕೆ. ಪಂಚಾಯತ್ ರಾಜ್ ಇಂಜಿನಿಯರಿAಗ್ ಉಪ ವಿಭಾಗದ ಲಾಯ್ಡ್ ರಾಡ್ರಿಗಸ್, ಆಹಾರ ನಿರೀಕ್ಷಕ
ಪ್ರಮೋದ್ ಕುಮಾರ್ ಮಾಹಿತಿ ನೀಡಿದರು. ಉಪ ತಹಶೀಲ್ದಾರ್ ನವನೀತ್ ಮಾಳವ, ಕಂದಾಯ ನೀರಿಕ್ಷಕ , ಮಂಜುನಾಥ ಕೆ.ಎಚ್., ಗ್ರಾಮ ಲೆಕ್ಕಾಽಕಾರಿಗಳಾದ ನಯನಾ, ರೇಷ್ಮಾ ಗ್ರಾಮವಾಸ್ತವ್ಯವನ್ನು ಸಂಘಟಿಸಿದ್ದರು.
ಅಂಬ್ಲಮೊಗರು ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಽಕಾರಿ ಅಬ್ದುಲ್ ಖಾರ್ದ ಸ್ವಾಗತಿಸಿ ವಂದಿಸಿದರು. ಶಾಲಾ ಶಿಕ್ಷಕ ಮಹಮ್ಮದ್ ಕುಂಇ ಕಾರ್ಯಕ್ರಮ ನಿರ್ವಹಿಸಿದರು.
೮ ಅರ್ಜಿಗಳ ಸ್ಥಳದಲ್ಲೇ ಇತ್ಯರ್ಥ !
ಅಂಬ್ಲಮೊಗರು ಗ್ರಾಮದಲ್ಲಿ ಮಂಗಳವಾರ ನಡೆದ ತಹಶೀಲ್ದಾರ್ ಗ್ರಾಮವಾಸ್ತವ್ಯದಲ್ಲಿ ಒಟ್ಟು ೨೧ ಅರ್ಜಿಗಳು ಸಲ್ಲಿಕೆಯಾಗಿದ್ದು, ೮ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲಾಯಿತು. ಕುಡಿಯುವ ನೀರಿನಸÀಮಸ್ಯೆ ಗ್ರಾಮ ವಾಸ್ತವ್ಯದಲ್ಲಿ ಪ್ರಮೂಕ ಜನರ ಬೇಡಿಕೆಯಾದರೆ, ಪಡ್ಡಾಯಿ ಗುಡ್ಡೆಯ್ಲಲಿ ಕೊಳಚೆ ನೀರು ರಸ್ತೆಗೆ ಹರಿಯುವ ವಿಚಾರದಲ್ಲಿ ಮತ್ತು ಮೊನೆಪು ಗಟ್ಟಿ ಗುತ್ತು ಮನೆ ಬಳಿ ರಸ್ತೆ ಬದಿಯಲ್ಲಿ ಖಾಸಗಿ ಸ್ಥಳದಲ್ಲಿ ಗುಂಡಿ ಅಗೆದ ಕಾರಣ ರಸ್ತೆ ಕುಸಿಯುವ ಭೀತಿಗೆ ಸಂಬAಽಸಿದAತೆ ತಹಶೀಲ್ದಾರ್ ಡಿ.ಎ. ಪುಟ್ಟರಾಜು ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಇತ್ಯಾರ್ಥಕ್ಕೆ ಗ್ರಾಮ ಮಟ್ಟದ ಅಽಕಾರಿಗಳಿಗೆ ಸೂಚಿಸಿದರೆ, ಸಣ್ಣ ಮದಕದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬAಽಸಿದAತೆ ಸ್ಥಳೀಯರಿಂದ ಅಹವಾಲು ಸ್ವೀಕರಿಸಿದರು.
