UN networks
ಉಳ್ಳಾಲ: ಬೆಳಗಾವಿ ಚಳಿಗಾಲ ಅಧಿವೇಶನದ ಸಂದರ್ಭ ಡಿ.೧೯ ರಂದು ನಡೆಯಲಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಉಳ್ಳಾಲ ತಾಲೂಕು ವ್ಯಾಪ್ತಿಯ ಪಂಚಾಯಿತಿನಿAದ ಹೆಚ್ಚಿನ ಸಂಖ್ಯೆಯಲ್ಲಿ ಗ್ರೂಪ್ `ಸಿ’ ಹಾಗೂ `ಡಿ’ ನೌಕರರು ಭಾಗವಹಿಸುವಂತೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ (ಆರ್ ಡಿ ಪಿಆರ್) ರಾಜ್ಯಾಧ್ಯಕ್ಷ ದೇವಿಪ್ರಸಾದ್ ಬೊಳ್ಮ ಕರೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಉಳ್ಳಾಲ ತಾಲೂಕು ಸಮಿತಿಯ , ಉಳ್ಳಾಲ ಹೋರಾಟದ ಸಲುವಾಗಿ ಮುನ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಮಾಲೋಚನೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನೌಕರರ ಶ್ರೇಯೋಭಿವೃದ್ಧಿ ಸಂಘಟನೆಯನ್ನು ರಾಜ್ಯಮಟ್ಟದಲ್ಲಿ ಬಲಪಡಿಸಬೇಕಿದೆ. ಶೋಷಣೆ ಮುಕ್ತ ಬದುಕಿಗಾಗಿ ಕೂಗಾಗಿದೆ. ಪಂಚಾಯತ್‌ನ ಸಿ, ಡಿ ದರ್ಜೆ ನೌಕರರಿಗೆ ಸರಕಾರಿ ನೌಕರರ ಸ್ಥಾನಮಾನ ಸಿಗಬೇಕು, ಸೇವಾ ಭದ್ರತೆ ಒದಗಿಸಬೇಕು. ೧೦ ವರ್ಷಗಳಿಂದ ಸೇವೆ ನಡೆಸುತ್ತಿರುವವರಿಗೆ ಜಿ.ಪಂ.ನಲ್ಲಿ ಅನುಮೋದನೆಗೊಳಿಸಬೇಕು. ಈ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊAಡು ಡಿ.೧೯ ರಂದು ಆರಂಭವಾಗಲಿರುವ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ರಾಜ್ಯವ್ಯಾಪಿ ೧೦,೦೦೦ ನೌಕರರನ್ನು ಸೇರಿಸಿ ಅನಿರ್ದಿಷ್ಠಾವಧಿ ಪ್ರತಿಭಟನೆಗೆ ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಗ್ರಾಮಸ್ಥರ ಮೂಲಭೂತ ಸೌಕರ್ಯಗಳಿಗೆ ತೊಂದರೆಯಾಗದAತೆ ನೋಡಿಕೊಳ್ಳುವುದು ಆದ್ಯ ಕರ್ತವ್ಯ. ಅವೆಲ್ಲದಕ್ಕೂ ತೊಂದರೆಯಾಗದAತೆ ಬದಲಿ ವ್ಯವಸ್ಥೆಯನ್ನು ಕಲ್ಪಿಸಿ ಪ್ರತಿಭಟನೆಯನ್ನು ನಡೆಸಬೇಕಿದೆ ಎಂದರು.
ಉಳ್ಳಾಲ ತಾಲೂಕು ಸಮಿತಿ ಆಯ್ಕೆಯಲ್ಲಿ ಅಧ್ಯಕ್ಷರಾಗಿ ದಿನೇಶ್ ಕೊಣಾಜೆ, ಉಪಾಧ್ಯಕ್ಷರು ಅಧ್ಯಕ್ಷರು ರೇಖಾ ಆಂಬ್ಲಮೊಗರು ಕಾರ್ಯದರ್ಶಿ ಕಮಲಕ್ಷ ಮುನ್ನೂರು ಜೊತೆ ಕಾರ್ಯದರ್ಶಿ ಕಿರಣ್ ಮಂಜನಾಡಿ ಕೋಶಾಧಿಕಾರಿ ಕಮಲ್ ಬೆಳ್ಮ ಹಾಗೂ ಮಹಿಳಾ ಹೋರಾಟ ಸಮಿತಿ ಅಧ್ಯಕ್ಷರಾಗಿ ಗುಲಾಬಿ ಕೊಣಾಜೆ, ಉಪಾಧ್ಯಕ್ಷರಾಗಿ ರಶ್ಮಿತಾ ಪಾವೂರು, ಕಾರ್ಯದರ್ಶಿ ಸುಜಾತ ಮುನ್ನೂರು ಮತ್ತು ಪುರುಷ ಹೋರಾಟ ಸಮಿತಿ ಅಧ್ಯಕ್ಷರು ಪ್ರಸನ್ನ ತಲಪಾಡಿ ಉಪಾಧ್ಯಕ್ಷರು ವಿಶ್ವನಾಥ ಆಂಬ್ಲಮೊಗರು ಕಾರ್ಯದರ್ಶಿ ಇಮ್ತಿಯಾಜ್ ಪಾವೂರು ಮತ್ತು ತಾಲೂಕು ಸಂಚಾಲಕರಾಗಿ ಸಾಹುಲ್ ಹಮೀದ್ ಮಂಜನಾಡಿ ಇವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶೋಧರ್ , ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ದಯಾನಂದ್, ಉಪಾಧ್ಯಕ್ಷ ಪ್ರದೀಪ್, ಮಹಿಳಾ ಹೋರಾಟ ಸಮಿತಿಯ ಅಧ್ಯಕ್ಷೆ ನಯನ ಮೂಡುಬಿದಿರೆ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷೆ ಪ್ರಿಯ, ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಹೊನ್ನಪ್ಪ ಮುಲ್ಕಿ ತಾಲೂಕು ಸಮಿತಿ ಅಧ್ಯಕ್ಷ ಉದಯ್ ಮತ್ತು ಸುಳ್ಯ ತಾಲೂಕು ಸಮಿತಿ ಕಾರ್ಯದರ್ಶಿ ಗಿರಿಧರ್, ಬಂಟ್ವಾಳ ತಾಲೂಕು ಮಹಿಳಾ ಹೋರಾಟ ಸಮಿತಿ ಅಧ್ಯಕ್ಷೆ ಉಷಾ ಮಂಗಳೂರು, ತಾಲೂಕು ಹೋರಾಟ ಸಮಿತಿ ಅಧ್ಯಕ್ಷೆ ಲೋಲಾಕ್ಷಿ ,ಜಿಲ್ಲಾ ಸಮಿತಿಯ ಸದಸ್ಯ ಯಶವಂತ ಸುಳ್ಯ , ತಾಲೂಕು ಸಮಿತಿ ಸದಸ್ಯ ಪುರುಷೋತ್ತಮ್, ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮ ಪಂಚಾಯತ್ ನ ಪ್ರಮೀಳಾ ಹಾಗೂ ಬಂಟ್ವಾಳ ಮತ್ತು ಉಳ್ಳಾಲ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿನ ನೌಕರರು ಉಪಸ್ಥಿತರಿದ್ದರು.
