Site icon Ullalavani

ವಿದ್ಯುತ್ ಕಂಬಕ್ಕೆ ಮಾರುತಿ-800 ಢಿಕ್ಕಿ
ರಸ್ತೆಗೆ ಉರುಳಿದ ಕಂಬ, ಚಾಲಕ ಅಲ್ಪಗಾಯಗಳಿಂದ ಪಾರು

UN networks

ಉಳ್ಳಾಲ: ವಿದ್ಯುತ್ ಕಂಬಕ್ಕೆ ಮಾರುತಿ 800 ಢಿಕ್ಕಿ ಹೊಡೆ ಪರಿಣಾಮ  ಕಂಬ ಅಪ್ಪಚ್ಚಿಯಾಗಿ ನೆಲಕ್ಕುರುಳಿದರೂ , ಕಾರು ಚಲಾಯಿಸುತ್ತಿದ್ದ ವಿದ್ಯಾರ್ಥಿ ಅಪಾಯವಿಲ್ಲದೆ ಪವಾಡಸದೃಶವಾಗಿ ಪಾರಾದ ಘಟನೆ ನಾಟೆಕಲ್ ಸಮೀಪದ ಸಂಕೇಶ ಎಂಬಲ್ಲಿ ಇಂದು ತಡರಾತ್ರಿ ವೇಳೆ ಸಂಭವಿಸಿದೆ.


ಮಾರುತಿ 800 ಕಾರು ಢಿಕ್ಕಿ ಹೊಡೆದರೂ, ಯಾವುದೇ ರೀತಿಯ ಹಾನಿಯಾಗಿಲ್ಲ. ಚಾಲಕ ವಿದ್ಯಾರ್ಥಿ ಗೂ ಅಲ್ಪಸ್ವಲ್ಪ ಗಾಯಗಳಾಗಿದೆ. ಆದರೆ ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಸಂಪೂರ್ಣ ಹಾನಿಯಾಗಿ ನೆಲಕ್ಕುರುಳಿದೆ.  ಹಳೇಯ ಕಾರೇ ಲೇಸು,  ಜೀವ ಸುರಕ್ಷಿತವಾಗಿರಿಸುವ ಬಲೂನ್  ತಂತ್ರಜ್ಞಾನ ಕಾರಲ್ಲಿ ಇಲ್ಲದಿದ್ದರೂ ಚಾಲಕ ಸುರಕ್ಷಿತವಾಗಿದ್ದಾನೆ.  ಕ್ವಿಂಟಾಲ್ ಗಟ್ಟಲೆ ತೂಕವಿರುವ ಕಂಬವೇ ನೆಲಕ್ಕುರುಳಿದೆ.  ಬೆಲೂನ್ ಇದ್ದರೂ ಸಾವನ್ನಪ್ಪುವ ಅಪಘಾತ ಗಳು ಕಣ್ಣ ಮುಂದಿರುವಾಗ, ಮಾರುತಿ‌ 800 ಕಾರೇ  ಎಂದಿಗೂ ಬಲಿಷ್ಠ ಅನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂತು. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ.

Exit mobile version